ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಆಳ್ವಾಸ್ ಎಜುಕೇಷನ್ ಫೌಂಡೇಷನ್ ಮೂಡಬಿದಿರೆ ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ವಿಭಾಗ ಇದರ ಆಶ್ರಯದಲ್ಲಿ ಅಭ್ರ ಕ್ರಿಯೇಷನ್ ಪ್ರಸ್ತುತಿಯ ಸ್ವಯಂ ಚಿತ್ರದ ಮುಹೂರ್ತ ಮೂಡಬಿದಿರೆ ಸಮೀಪದ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ದೊರೆಯಿತು. ಪತ್ರಕರ್ತ ಹರೀಶ್ ಕೆ.ಆದೂರು ಛಾಯಾಗ್ರಹಣದಲ್ಲಿದ್ದರು. ಮುಖ್ಯ ಪಾತ್ರದಲ್ಲಿ ರಾಜ್ ದೀಪ್ , ಕೀರ್ತನಾ, ಪ್ರಣಮ್ಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ. ತಾರಾಗಣದಲ್ಲಿರುವ ಮೌಲ್ಯ, ಜಯಶ್ರೀ ಶರ್ಮ, ಡಾ.ಧನಂಜಯ ಕುಂಬ್ಳೆ, ಆದಿತ್ಯ ಭಟ್, ಪೂಜಾ ಶೆಟ್ಟಿ, ಶ್ರೀ ಗೌರಿ, ದರ್ಶನ್ , ಬಿಂದ್ಯಾ ಸಿ.ಕೆ. ಮೋಹನ್ ಪಿ.ಎನ್ ಹಾಜರಿದ್ದರು.. ರೇಣು ಡಿ'ಸೋಜಾ ಅವರ ಕಥೆ, ನಾಗರಾಜ್ ಅವರ ನಿರ್ದೇಶನದಲ್ಲಿ ಈ ಕಲಾತ್ಮಕ ಚಿತ್ರ ರಚನೆಯಾಗಲಿದೆ. ಆಲಂಗಾರು ಮಹಾಲಿಂಗೇಶ್ವರ ದೇಗುಲದ ಪ್ರಧಾನ ಅರ್ಚಕ ಈಶ್ವರ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

1 comments:

Anonymous said...

here comes the future talent of karnataka from alva's.... all the best guys rajdeep is a born talent .. and i ve got no words to describe nagaraj .... hope you people get noticed

Post a Comment