ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ ಸುದ್ದಿ : ಚೆನ್ನೈ ವರದಿ

ಬಾಲ ಪ್ರತಿಭೆ ಅಯನಾ ವಿ ರಮಣ್ ಚೆನ್ನೈನ ಕಲಾಸಕ್ತರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ತನ್ನ ಅದ್ಭುತ ಪ್ರತಿಭಾ ಪ್ರದರ್ಶನದ ಮೂಲಕ ಸೇರಿದ ಕಲಾಸಕ್ತರನ್ನು ನಿಬ್ಬೆರಗಾಗಿಸುವಂತೆ ಮಾಡಿದ್ದಾಳೆ.


ವಿ.ಗೀತಾ ಸರಳಾಯ ಮಂಗಳೂರು ಇವರ ಶಿಷ್ಯೆಯಾದ ಅಯನಾ ವಿ.ರಮಣ್ ಚೆನ್ನೈ ಶ್ರೀನಿವಾಸ ಶಾಸ್ತ್ರಿ ಸಭಾಂಗಣದಲ್ಲಿ ಭರತನಾಟ್ಯ ಹಾಗೂ ತನ್ನ ಅದ್ಭುತ ಪ್ರತಿಭೆಗಳನ್ನು ಜನರೆದುರು ತೆರೆದಿಟ್ಟು ಅಪಾರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ಕದ್ರಿ ಆಟರ್್ ಅಕಾಡೆಮಿ ಮಂಗಳೂರು , ಕಲ್ಕೂರಾ ಪ್ರತಿಷ್ಠಾನ ಮಂಗಳೂರು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಗಳು ಬಾಲಪ್ರತಿಭೆಯನ್ನು ಹರಿಸಿ ಗೌರವಿಸಿದರು. ಹಿರಿಯ ಕಲಾವಿದ ಪದ್ಮಶ್ರೀ ಕದ್ರಿ ಗೋಪಾಲ ನಾಥ್ ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.


ಕಲಾವಿದ ಕೆ.ವಿ.ರಮಣ್ ಮತ್ತು ಉಪನ್ಯಾಸಕಿ ಮುಕಾಂಬಿಕಾ ಅವರ ಸುಪುತ್ರಿ ಈಕೆ.
ಈ ಕನಸು.ಕಾಂ ಈ ಕಾರ್ಯಕ್ರಮದ ಮಾಧ್ಯಮ ಸಹಭಾಗಿತ್ವ ಹೊಂದಿತ್ತು.

0 comments:

Post a Comment