ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:41 PM

ಲಾಸ್ಟ್ ಬೆಂಚ್...

Posted by ekanasu


ಹಿಂದಿನ ಸಾಲಿನ ಹುಡುಗರು ನಾವು
ನಮಗೆಂದೆಂದಿಗೂ ಭಯವಿಲ್ಲ
ನಮಗೆಂದೆಂದಿಗೂ ಜಯವಿಲ್ಲಬಹುಶಃ ಹಿಂದಿನ ಸಾಲಿನ ವಿದ್ಯಾರ್ಥಿಗಳನ್ನು ನೋಡಿ ನೋಡಿ ಪ್ರಖ್ಯಾತ ಕವಿಗಳೂ, ಅಧ್ಯಾಪಕರೂ ಆದ ಕೆ.ಎಸ್.ನರಸಿಂಹಸ್ವಾಮಿಯವರು ಬರೆದಿರುವ ಹಾಡು ಇದು. ಹೌದು ಶಾಲೆಗಳಲ್ಲಿ, ಕಾಲೇಜುಗಳಲ್ಲಿ 'ಲಾಸ್ಟ್ಬೆಂಚ್' ಪ್ರತ್ಯೇಕ ಪ್ರಾಮುಖ್ಯತೆಯನ್ನು ಪಡೆದಿದೆ. ಕೊನೆ ಬೆಂಚುಗಳಲ್ಲಿ ಕುಳಿತಿರುವ ವಿದ್ಯಾರ್ಥಿಗಳೇ ಬೇರೆ ಅವರ ರೀತಿನೀತಿಯೇ ಬೇರೆ.

ತರಗತಿಗೆ ಯಾರಾದರೂ ಲೆಕ್ಚರರ್ಸ್ ಪ್ರವೇಶ ಕೊಟ್ರೆ ಸಾಕು ಅವರ ಗಮನವೆಲ್ಲಾ, ಅವರ ಪ್ರಶ್ನೆಗಳಲ್ಲಾ ಹಿಂದಿನ ಸಾಲಿನ ಹುಡುಗರಿಗೆ. ಅಧ್ಯಾಪಕರಿಗೂ ಸಹ ಲಾಸ್ಟ್ಬೆಂಚ್ ವಿಧ್ಯಾರ್ಥಿಗಳನ್ನು ವಿಚಾರಿಸುವುದರಲ್ಲಿ ಇರುವ ಆನಂದ ಬೇರೆ ಯಾವುದರಲ್ಲೂ ಸಿಗಲಿಕ್ಕಿಲ್ಲ. ಅದಕ್ಕೇ ಇರಬೇಕು ಈ ಹಿಂದಿನ ಸಾಲಿನವರಿಗೆ ತರಗತಿಯಲ್ಲಿ 'ಸ್ಪೆಶಲ್ ಇಮೇಜೇ' ಇರುತ್ತದೆ.

ಎಲ್ಲಾರೂ ಹೇಳ್ತಾರೆ, ಹಿಂದಿನ ಬೆಂಚಿನಲ್ಲಿ ಕೂರುವವನು ಸೋಮಾರಿ, ದಡ್ಡನೆಂದು. ಆದರೆ ಇವರು ಎಷ್ಟು ಪ್ರತಿಭಾನ್ವಿತರಾಗಿರುತ್ತಾರೆ ಗೊತ್ತೇ? ಕ್ಲಾಸ್ರೂಂ ಬೋರ್ ಹೋಡೀತಾ ಇದ್ರೆ ಅಥವಾ ನಿದ್ರಾದೇವಿಯ ವಶದಲ್ಲಿದ್ದರೆ ಇವರು ತಮ್ಮ ಕಿತಾಪತಿಗಳಿಂದ ಕ್ಲಾಸ್ರೂಂ ಎಂಬ ಅಡ್ಡಾವನ್ನು ಲೈವ್ಲೀಯಾಗಿರುವಂತೆ ಮಾಡುತ್ತಾರೆ. ಲಾಸ್ಟ್ಬೆಂಚ್ ಸಾಮ್ರಾಜ್ಯದಲ್ಲಿ ಅನೇಕ ಬಗೆಯ ಕಲಾವಿದರಿರುತ್ತಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲದ ವಿಚಾರ. ಈ ಆಸ್ಥಾನದಲ್ಲಿ ಚಿತ್ರಗಾರರು, ಸಂಗೀತಗಾರರು, ವಿದೂಷಕರು, ಸಮಾಜಸೇವಕರು ಇರುತ್ತಾರೆ. ಇವರ ಲೀಡರ್ ಮಾತ್ರ ಸಚಿನ್ ತೆಂಡೂಲ್ಕರ್ನಂತೆ ಆಲ್ ರೌಂಡರ್ ಆಗಿರ್ತಾನೆ.

ಯಾವುದಾದ್ರೂ ಲೆಕ್ಚರ್ ಬೋರ್ ಬಂತೆಂದರೆ ಸಾಕು ಇವರ ಆಸ್ಥಾನಸಭೆ ಆರಂಭವಾಗುವುದು. ಲೆಕ್ಚರರ್ಗಳ, ವಿದ್ಯಾರ್ಥಿಗಳ ಡ್ರಾಯಿಂಗ್ ಬಿಡಿಸ್ತಾ ಇರುವ ಆರ್ಟಿಸ್ಟ್ ಒಂದೆಡೆಯಾದ್ರೆ, ವಕ್ರತುಂಡೋಕ್ತಿಗಳನ್ನೋ,ಕಮೆಂಟ್ಸ್ಗಳನ್ನೋ ಹೊಡೆಯುವ ವಿದೂಷಕ ಇನ್ನೊಂದೆಡೆ. 'ಸಬ್ಜೆಕ್ಟೇ ಸರಿಯಿಲ್ಲ ಚೊಂಬೇಶ್ವರಾ, ಸಿಲೆಬಸ್ಸು ಇರಬಾರದಾ ಸಿನಿಮಾ ಥರಾ...' ಎಂದು ರೇಡಿಯೋ ಸ್ಟೇಶನ್ ಆನ್ ಮಾಡುವ ಸಂಗೀತಗಾರ ನಿಮಗಿಂತ ನಾನೇನು ಕಮ್ಮಿ ಅಂತ ಹೇಳ್ತಾನೆ. ಆದರೆ ನಿಮ್ಮದೆಲ್ಲಾ ಉಪಯೋಗಕರ ಕೆಲಸವಲ್ಲ ಎಂದು ದೇಶದ ರಾಜಕಾರಣಿಗಳು, ಕ್ರಿಕೆಟ್,ಸಿನಿಮಾ ಹಾಗೂ ಕಾ ಲೇಜಿನ ಬಗ್ಗೆ ಚರ್ಚಿಸುವ ಸಮಾಜಸೇವಕರೂ ಇಲ್ಲದಿಲ್ಲ. ನಿಮ್ಮ ಸಹವಾಸವೇಬೇಡ ಎಂದು ಕುಂಭಕರ್ಣನ ಖಾಸಾ ತಮ್ಮನಂತೆ ಗೊರಕೆ ಹೊಡೆಯುವವನು ಈ ಸಂತೆಯಲ್ಲಿ ನಿದ್ರೆಗೆ ಜಾರುತ್ತಾನೆ.

ಆಸ್ಥಾನ ಕಲಾವಿದರೇ ಇಷ್ಟೊಂದು ಟ್ಯಾಲೆಂಟೆಡ್ ಇರುವಾಗ ನಮ್ಮ ಆಲ್ರೌಂಡರ್ ಏನು ಕಮ್ಮಿಯೇ? ಎಲ್ಲರಿಗೂ ಸರಿಯಾಗಿ ರೆಸ್ಪಾನ್ಸ್ ಮಾಡುತ್ತಾ, ಯಾರೂ ಅಧ್ಯಾಪಕರ ಕಣ್ಣಿಗೆ ಸಿಕ್ಕಿ ಹಾಕಿಕೊಳ್ಳದಂತೆ ಮಾಡುವುದು ಇವನ ಕೆಲಸ. ಇಷ್ಟೆಲ್ಲಾ ಕಿತಾಪತಿ ಎಬ್ಬಿಸಿದ್ರೂ ಪರೀಕ್ಷೆಗಳಲ್ಲಿ ಅಂಕಗಳನ್ನು ಗಳಿಸೋದರಲ್ಲಿ ಹಿಂದೆಯೇನೂ ಬೀಳಲ್ಲ ಎಲ್ಲಾ ಟಾಪ್ರ್ಯಾಂಕಿಂಗ್ಗಳೇ ಇರುತ್ತವೆ. ಎಷ್ಟೇ ಆಗಲಿ, ಟ್ಯಾಲೆಂಟೆಡ್ ಪೀಪಲ್ ಅಲ್ಲವಾ?

ಈ ಎಲ್ಲಾ ವಿಷಯಗಳು ಹುಡುಗಿಯರ ಬೆಂಚಿಗೂ ಅಪ್ಲಿಕೇಬಲ್. ಅವರ ಇನ್ನೊಂದು ಹೆಚ್ಚುವರಿ ಅಂಶವೆಂದರೆ ಮಾತು ಮಯ್ಯು ನಗು. ಏನೇ ಆದ್ರೂ ನಗುವುದು ಮತ್ತು ಅದರ ಬಗ್ಗೆ ಮಾತಾಡ್ಲೇಬೇಕು ಅನ್ನೋದು ಅವರ ಹಂಬಲ. "ಇವತ್ತು ಆ ಮ್ಯಾಮ್ ಯಾವ ಸೀರೆ ಉಟ್ಟುಕೊಂಡಿದ್ದಾರೆ?" ಎಂದೋ ಅಥವಾ " ಅವಳು ಹಾಗಂತೆ ಕಣೇ.... ಇವಳು ಹೀಗೇನೇ ನಿಂಗೊತ್ತಿರಲಿಲ್ವಾ?" ಎಂದೋ ಗಾಸಿಪ್ ಹಬ್ಬಿಸುವುದು ಇವರ ರೀತಿ "ಮಾತು ಮತ್ತು ನಗು ನಮ್ಮ ಜನ್ಮಸಿದ್ಧ ಹಕ್ಕು" ಎಂದು ಅವರು ಭಾವಿಸಿರುತ್ತಾರೆ.

ಇದಕ್ಕೆಲ್ಲಾ ನಾವು ವೈಜ್ಞಾನಿಕ ಕಾರಣ ಕೊಡಬೇಕೂಂದ್ರೆ ಕೆಮಿಸ್ಟ್ರಿಯ " ಪೀರಿಯಾಡುಕ್ ಪ್ರಾಪರ್ಟಿಸ್" ಗೆ ಹೋಗಬೇಕಾಗುತ್ತೆ. ಹೇಗೆ ಔಟರ್ಶೆಲ್ನ ಇಲೆಕ್ಟ್ರಾನ್ಗಳು ನ್ಯೂಕ್ಲಿಯಸ್ನ ಪ್ರಭಾವಕ್ಕೆ ಒಳಗಾಗಿರುವುದಿಲ್ಲವೋ ಹಾಗೆಯೇ ಈ ಈ ಲಾಸ್ಟ್ಬೆಂಚ್ ಮತ್ತು ಅದರಲ್ಲಿನ ವಿದ್ಯಾರ್ಥಿಗಳು. ಏನೇ ಹೇಳಿ ಕ್ಲಾಸಲ್ಲಿ ಲಾಸ್ಟ್ಬೆಂಚಿಗಿರುವಷ್ಟು ಪ್ರಾಮುಖ್ಯತೆ ಮತ್ತಾವ ಬೆಂಚಿಗೂ ಸಿಗಲಾರದು.
ಫಸ್ಟ್ಬೆಂಚಿನಲ್ಲಿ ಕುಳಿತವರು ಡಾಕ್ಟರ್ಸ್, ಇಂಜಿನಿಯರ್ಸ್ ಆದ್ರೆ, ಮಿಡಲ್ಬೆಂಚಿನಲ್ಲಿ ಕುಳಿತಿರುವರು ಸರಕಾರೀ ನೌಕರರಾಗುತ್ತಾರೆ,. ಆದ್ರೆ ನಮ್ಮ ಲಾಸ್ಟ್ಬೆಂಚ್ನಲ್ಲಿ ಸಿಸ್ಟಮ್ನ ಸುಧಾರಿಸುವ ಪ್ರೈಮ್ಮಿನಿಸ್ಟರ್ ಆಗ್ತಾರೆ!? ಅದಕ್ಕೇ ಲಾಸ್ಟ್ಬೆಂಚ್ನವರ ಹಾಡು ಇರುವುದು,
"ಸಿಸ್ಟಮ್ಮೇ ಸರಿಯಿಲ್ಲ ಚೊಂಬೇಶ್ವರಾ,
ಪ್ರೈಮ್ಮಿನಿಸ್ಟರ್ ಆಗ್ಬಿಡ್ಲಾ ಒಂದೇ ಸಲಾ...."

-ಶ್ರೀಗೌರಿ ಶ್ರೀಪಾದ ಜೋಶಿ
ಪತ್ರಿಕೋದ್ಯಮ ವಿಭಾಗ
ಆಳ್ವಾಸ್ ಕಾಲೇಜು
ಮೂಡುಬಿದಿರೆ.

0 comments:

Post a Comment