ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:36 PM

ಶಕ್ತಿ ಪ್ರದರ್ಶನ

Posted by ekanasu

ಸಿನೆಮಾ : ಬೆಂಗಳೂರು ವರದಿ
ಜೀ ಕನ್ನಡದಲ್ಲಿ ಮೊದಲ ಬಾರಿಗೆ ಸೆಪ್ಟೆಂಬರ್ 16 ರಂದು ರವಿವಾರ ಸಂಜೆ 4.30 ಕ್ಕೆ ಹಿಟ್ ಚಲನಚಿತ್ರ ಶಕ್ತಿ ಪ್ರಸಾರವಾಗಲಿದೆ.ಸ್ಯಾಂಡಲ್ವುಡ್ನ ಆಕ್ಷನ್ ಕ್ವೀನ್ ಮಾಲಾಶ್ರೀ ನಟಿಸಿರುವ ಸ್ಟಂಟ್ ಥ್ರಿಲ್ಲರ್ ಸಿನಿಮಾ ಶಕ್ತಿ. ಈ ವರ್ಷದ ಆರಂಭದಲ್ಲಿ ತೆರೆ ಕಂಡ ಶಕ್ತಿ ಕನ್ನಡದ ಯಶಸ್ವಿ ಚಿತ್ರಗಳಲ್ಲಿ ಒಂದು. ಇದು ನಿರ್ಮಾಪಕ ರಾಮು ಎಂಟರ್ಪ್ರಸೈಸ್ನ 32ನೇ ಸಿನಿಮಾ. ತಮ್ಮ ಪತಿ ರಾಮು ಅವರ ಬ್ಯಾನರ್ನಲ್ಲಿ ಮಾಲಾಶ್ರೀ ಅಭಿನಯದ 8ನೇ ಚಲನಚಿತ್ರ.

ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಾಲಾಶ್ರೀ ಮಿಂಚಿದ್ದಾರೆ. ಕತೆ-ಚಿತ್ರಕಥೆ-ಸಂಭಾಷಣೆ ಬರೆಯುತ್ತಿದ್ದ ಅನಿಲ್ಕುಮಾರ್ ಶಕ್ತಿ ಚಿತ್ರದ ಮೂಲಕ ನಿರ್ದೇಶಕರಾದರು.
ಈ ಚಿತ್ರದ ಹೈಲೈಟ್ ಎಂದರೆ ಐವರು ಸಾಹಸ ನಿರ್ದೇಶಕರು ಶಕ್ತಿ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ (ಥ್ರಿಲ್ಲರ್ ಮಂಜು, ರವಿವರ್ಮ, ರಾಮ್ಲಕ್ಷಣ್, ಪಳನಿರಾಜ್ ಮತ್ತು ಮಾಸ್ ಮಾದ). ಆಕ್ಷನ್ ಮತ್ತು ಸ್ಟಂಟ್ಗಳನ್ನು ಮಾಲಾಶ್ರೀ ಅದ್ಬುತವಾಗಿ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಕೆ.ಕಲ್ಯಾಣ್ ಗೀತ ಸಾಹಿತ್ಯ ಬರೆದಿದ್ದು ವರ್ಧನ್ ಸಂಗೀತ ಸಂಯೋಜಿಸಿದ್ದಾರೆ.

ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಸ್ಯಾಂಡಲ್ವುಡ್ ಕಿಂಗ್, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ತಮ್ಮ ಕಂಠಸಿರಿಯಲ್ಲಿ 'ಬಂಡಿಯು ಸಾಗುತಿದೆ..' ಎಂಬ ಹಾಡನ್ನು ಹಾಡಿದ್ದಾರೆ. ಪ್ರಥಮ ಬಾರಿಗೆ ಮಾಲಾಶ್ರೀ ಶಕ್ತಿ ಚಿತ್ರಕ್ಕೆ ಕಂಠದಾನ ಮಾಡಿರುವುದು ಮತ್ತೊಂದು ವಿಶೇಷ.
ಆಶೀಶ್ ವಿದ್ಯಾರ್ಥಿ, ಸಾಧುಕೋಕಿಲಾ, ಶರತ್ ಲೋಹಿತಾಶ್ವ, ವಿನಯಾ ಪ್ರಕಾಶ್, ಹೇಮಾ ಚೌಧರಿ, ಅವಿನಾಶ್ ತಾರಾಗಣದಲ್ಲಿದ್ದಾರೆ.
ಶಕ್ತಿ ಸೆಪ್ಟೆಂಬರ್ ಜೀ ಕನ್ನಡದಲ್ಲಿ ಮೊದಲ ಬಾರಿಗೆ ಪ್ರಸಾರವಾಗಲಿದೆ.

0 comments:

Post a Comment