ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ನಾವು ಒಂದು ಗಹನವಾದ ಜಿ!ಜ್ನಾಸೆಗೆ ಇಳಿದಿದ್ದೇವೆ!
ಎರಡೂ ಪುರಾಣಯುಗದ ಸಂಗತಿಗಳೆ!
ಮೀರಿ ಕೇಳಿದರೆ ಒಂದಥ೯ದಲ್ಲಿ ಎರಡೂ-
ವ್ಯಕ್ತಿ-ಶಕ್ತಿ ದೈವೀಕವೆ!
ಇನ್ನೂ ಮುಂದಕ್ಕೆ ಸಾಗಿದರೆ-ಎರಡೂ ದೈವಗಳೇ!


ಎರಡೂ ನರನೆಂದರೆ ಸಲ್ಲದೇ ಎಂದರೆ-
ನರ-ನಾರಾಯಣ ಎಲ್ಲ ಒಪ್ಪ-ಓರಣವೆ!
ಒಂದು ತ್ರೇತಾಯುಗಕ್ಕೂ,
ಇನ್ನೊಂದು ದ್ವಾಪರ ಯುಗಕ್ಕೂ ತುಡಿಯುವ-ದುಡುಯುವ ಒಳಧನಿಗಳೇ!
ಎರಡೂ ಯುದ್ಧ-ಕೇವಲ ಸ್ತ್ರೀ ಮೂಲವೆನ್ನೋಣವೆ,

ಸ್ತ್ರೀ ಗಾಗಿ ಎನ್ನೋಣವೆ,
ಸ್ತ್ರೀಯೇ ಮಾಡಿಸಿದ್ದೂ ಎಂದರೆ-
ಲೋಕವೇಕೆ-ಲೋಕಾಂತವೂ ಒಪ್ಪದಿರಲಾದೀತೇ?
ರಾಮ-ಶ್ರೀ ರಾಮ-ದಶಾವತಾರದ-ನೇರವಾದ ಒಂದುಕೊಂಡಿ-
ರಾವಣನ್ನು ಸದೆಬಡಿಯಲು-ಸಿದ್ಧವಾಗಲಿಲ್ಲವೆಂದೋ, ಸಾಧ್ಯವಾಗದೆಂದೋ-ಮಹಷಿ೯ ಯುದ್ಧಭೂಮಿಗೆ ದಾಪುಗಾಲಿಟ್ಟರು-ಇದೇ ಆದಿತ್ಯ ಹೃದಯ ಮಂತ್ರವು!

ರಾವಣನ್ನು ಬಡಿಯಲು ತಯಾರಿಗೆ ಇಂಬು-ಪೆಂಪು-ಸೊಂಪು ಎಲ್ಲಾ ಆದರು ಮಹಷಿ೯ಗಳು.
ಅಷ್ಟಕ್ಕೇ ಒಪ್ಪಿದ ರಾಮ ಜಯರಾಮನಾದನು.
ತ್ರಿಲೋಕವೀರನಾದ ಅಜು೯ನನಿಗೆ-೧೮ ಅಧ್ಯಾಯದ ಮುನ್ನುಡಿ-ಮುಂದಡಿ ಇಡಲು ಬೇಕಾಯಿತು!
ಒಂದೆಡೆ ಭಗವಂತನಾದ-ನಂತರದಲ್ಲಿ,
ನೇಪಥ್ಯದಲ್ಲಿ ದೇವಸಮಾನ ಮಹಷಿ೯ಯಿಂದ ಜಯಕ್ಕೆ ಲಗ್ಗೆ!

ಯುಗಾಂತರದಲ್ಲಿ-
ದ್ವಾಪರದಲ್ಲಿ-ಇಲ್ಲ ಸಲ್ಲದ ರಗಳೆ ಎತ್ತಿ-ಆರತಿ ಎತ್ತಿಸಿಕೊಂಡ ಅಜು೯ನನಿಗೆ ನರನಿಗೆ ನಾರಾಯಣನೇ ಬೇಕಾಯಿತು ಜಯದ ಲಗ್ಗೆಗೆ ಕಾಲಿಡಲು.
ಹೇಗಾದರೂ ಇರಲಿ,
ಎರಡೂ ಸಂಗತಿಗಳನ್ನು ಬದಿಬದಿಯಲ್ಲಿ ಇಟ್ಟು ಹೋಲಿಸಿದರೆ-ಹೊಲಸು ಅಜು೯ನನಲ್ಲಿ,
ಸೊಗಸು ರಾಮನಲ್ಲಿ,
ಇದೇ ಮೇಲೆದ್ದು ಕಾಣುವ ವ್ಯತ್ಯಾಸವು.
ಯುದ್ಧ-ಅದಕ್ಕೆ ಸನ್ನದ್ಧ ಇದಾಗದೆ ಸ್ತಬ್ದವಾದರೆ-
ಕುಬ್ಜರು ಯಾರು?

ಯುದ್ಧವೂ ಒಂದು ಪರೀಕ್ಷೆಯಲ್ಲವೇನು?
ತಯಾರಿಯಿಲ್ಲದ-ತುಡಿತ ಇನ್ನೇನು ಮಿಡಿದೀತು?
ಪುರಾಣದಜನರೇ-ಪುಣ್ಯದಜನರೇ ಭಗವಂತನಿಂದಲೇ ಹುರಿದುಂಬಿಸಲ್ಪಟ್ಟರೆ,
ಕಲಿಯುಗದ ಜನಕ್ಕೆ-ಭಗವಂತನಲ್ಲದಿದ್ದರೂ-
ಭಾಗಶಃ ಭಗವಂತತತೆ ಬೇಡವೇ?
ಹಿಗಿದ್ದರೂ ಇಗೆಲ್ಲಾ ಬೀಗುವ-ಬಾಗುವ ಹುಂಬರಿಗೆ ಎನೆನ್ನೋಣ?
ರಾಮಾಜು೯ನರಿಗೇ ಇದ್ದ ದೋಷಗಳಿಗೆ ದೇವಬೇಕಾಯಿತು ಎಂದಮೇಲೆ-
ರಾಮನಾಗಲೀ, ಅಜು೯ನಲಾಗಲೀ ಆಗದ-ಆಗಲಾಗಲಾಗದ ಸ್ಥಿತಿಗಳಿಗೆ-ಸ್ಥಿತ್ಯಂತರಗಳಿಗೆ-
ಗಳಿಗೆ-ಗುಳಿಗೆ ಬೇಡವೇ?

ಕಲಿಯುಗದ ಮಹಿಮೆ ಮತ್ತೆ ಭಗವಂತನೇ-
೧೧ನೇ ಅವತಾರವೆತ್ತದೇ-ಉತ್ತರವಿದೆಯೇ?
ಆದರೆ-ಪ್ರಳಯ-ಯುಗಾಂತವೆಂದರೆ-ನಗುವ-ನುಂಗುವ ಪ್ರಭುಗಳಿಗೆ-
ಸ್ವಯಂ ಪ್ರಭುಭೂಮಿಷ್ಟನಾಗಲೇಬೇಕು-ಭೂಮಿನಷ್ಟವಾಗಲೇಬೇಕು-ಅಷ್ಟೇ!
"-ಸವ೯ಪಾಪೇಭ್ಯೋ ಮೋಕ್ಷಯಿಷ್ಯಾಮಿ"
ಇದೇ ಸತ್ಯವು-ಸತ್ವವು-ಪಥ್ಯವು-ಪಾಠ್ಯವು.

ಆರ್.ಎಂ.ಶಮ೯, ಮಂಗಳೂರು

0 comments:

Post a Comment