ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:17 PM

ಏಕೆ ಈ ಬದಲಾವಣೆ..?

Posted by ekanasuಕಾರಿಡಾರ್ : ಪದ್ಮಾ ಭಟ್

ಅಂದುಕೊಂಡಿದ್ದೆಲ್ಲಾ ಆಗಿದ್ದರೆ ಜೀವನ ಎನ್ನುವುದು ಎಷ್ಟು ಸುಂದರವಾಗಿರುತ್ತಿತ್ತು ಎಂದೆನಿಸುತ್ತವೆ...
ಎಲ್ಲವೂ ಹೇಳಿ ಕೇಳಿ ಮಾಡುವಂತಿದ್ದರೆ ಕಾಲಕ್ಕೆ ಯಾವ ಬೆಲೆಯೂ ಇರುತ್ತಿರಲಿಲ್ಲವೇನೋ..ಏನೋ ಅಂದ್ಕೊಂಡಿರ್ತೀವಿ ಆದ್ರೆ ಇನ್ನೇನೋ ಆಗತ್ತೆ..ಎಲ್ಲವೂ ಅನಿರೀಕ್ಷಿತ, ಭವಿಷ್ಯದ ಒಳ್ಳೆಯ ಜೀವನಕ್ಕೊಸ್ಕರ ಕಾಯುವುದು ವಿಧಿ ಲಿಖಿತ...


ನನಗೆ ಆಗಾಗ ಅನಿಸುವುದುಂಟು..ನಮ್ಮೊಳಗೇ ಬೆರೆತು ಕೊಂಡು , ನಮ್ಮವರಾಗಿ, ಒಂದಷ್ಟು ದಿನ ನಮ್ಮೊಡನಾಡಿ ಬದುಕುವ ಪ್ರತೀ ಕಣದಲ್ಲೂ ನೆನೆಯುತ್ತಾ ಬದುಕುವುದು ಎಂಬ ಸಾವಿರಾರು ಯೋಚನೆ..ಆದರೆ ಕಾಲದೊಂದಿಗೆ ಜನ ಬದಲಾಗಿಬಿಟ್ಟಿರುತ್ತಾರೆ..ನಾವು ನಮ್ಮವರು ಎಂದುಕೊಂಡವರು ನಮ್ಮಿಂದ ದೂರ ಸರಿಯಲು ಪ್ರಯತ್ನಿಸುತ್ತಾರೆ...

ಒಂದು ಬಾರಿ ಹಿಂದಿನ ದಿನಗಳನ್ನೆಲ್ಲ ನೆನಪಿಸಿಕೊಂಡಾಗ ಅರ್ಥವಾಗುತ್ತೆ..ಎಷ್ಟು ಬದಲಾಗಿದ್ದೀಯಾ ನೀನು ಎಂದು ಹೇಳಹೊರಟ ಕಣ್ಣಿನಲ್ಲಿ ನೀರು ಜಾರುವಂತೆ ಮಾಡಿಬಿಡುತ್ತೆ..ಜೀವನದಲ್ಲಿ ಸಿಕ್ಕ ಅಪರೂಪದ ವ್ಯಕ್ತಿ ನಮ್ಮ ಜೀವನ ಶೈಲಿಯನ್ನೇ ಬದಲಾಯಿಸಿ, ಇಡೀ ದಿನವೂ ಯೋಚಿಸುವ ಹಾಗೆ ಮಾಡುವುದು..ಎಲ್ಲವನ್ನೂ ಮಾಡಿ ದೂರ ಸರಿದು ನಿಂತರೆ..ಎಂದೂ ಅವನಿಗಾಗಿಯೇ ಹಪಹಪಿಸುವವರ ಗತಿ ಏನು..?ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ.

ಒಂದೊಂದು ಘಂಟೆಗೂ ಫೋನ್ ಮಾಡಿ , ನಿನ್ನ ನೋಡಬೇಕೆಂದೆನಿಸುತ್ತೆ ಎಂದೆಲ್ಲಾ ಹೇಳಿ, ಇನ್ನಷ್ಟು ಒಳಗೊಳಗೇ ಮನವು ಸೇರುವಂತೆ ಮಾಡಿರುವ ವ್ಯಕ್ತಿಗಳು ಬದಲಾಗುತ್ತಾರೆ ಎಂದರೆ ನಂಬಲೂ ಸಾಧ್ಯವಿಲ್ಲದ ಮಾತಾದರೂ ಸತ್ಯ.. ಒಂದು ಬಾರಿ ಕಾಲ್ ರಿಸೀವ್ ಮಾಡದಿದ್ದರೆ ಹತ್ತು ಮೆಸೇಜ್ ಬರುತ್ತಿದ್ದ ಆ ಕಾಲವು ಬರೀ ನೆನಪೇನೋ.ಈಗ ನಮ್ಮಿಂದಲೇ ಫೋನ್ ಹೋದರೂ ರಿಸೀವ್ ಮಾಡಿ ಮತನಾಡಲು ಬ್ಯೂಸಿ ಎನ್ನುವ ಮಾತು..ಏಕೆ ಹೀಗೆ ಬದಲಾಗುತ್ತಾರೆ..? ಮೊದಮೊದಲು ಎಷ್ಟೋ ಹೊತ್ತು ಮಾತನಾಡುವವರು, ಎಷ್ಟೇ ಕೆಲಸವಿದ್ದರೂ ಬಿಡುವು ಮಾಡಿಕೊಳ್ಳುವವರು ದಿನಕಳೆದಂತೆ ಬಾಂಧವ್ಯವ ಕಡಿಮೆ ಮಾಡುತ್ತಾ ಬರುತ್ತಾರೆ.

ಎಷ್ಟು ವಿಚಿತ್ರ ಅಲ್ವಾ?? ಒಂದೆರಡು ದಿನ ಹೊಸತರಲ್ಲಿ ಎಲ್ಲವೂ ಚೆನ್ನಾಗಿ ಕಾಣುತ್ತವೆಯೇನೋ..ದಿನಕಳೆದಂತೆ ಕಾಲ್ ಮಾಡಿದರೆ ಕಟ್ ಮಾಡುವುದು ಒಂದು ರೀತಿಯಾದರೆ, ಒಂದೊಂದು ಕಾರಣವ ಹೇಳಿ ದೂರ ಸರಿಯುವ ಸಂಬಂಧ ಅದೆಷ್ಟು ದಿನಗಳು ಉಳಿದವು..ಎಂದಿಗೂ ಇಂತಹ ಸಂಬಂಧಕ್ಕೆ ಬೆಲೆ ಎನ್ನುವುದು ಹೊರಟು ಹೋಗಿಬಿಡುತ್ತೆ.
ಪ್ರತೀಯೊಬ್ಬರಲ್ಲೂ ಒಂದಷ್ಟು ಭಾವನೆಯ ಗುಚ್ಛಗಳಿರುತ್ತೆ..ಮಾತನಾಡುವ ಹಂಬಲಗಳು ಮನದಾಳದಿಂದ ನೀರಿನ ಚಿಲುಮೆಯಂತೆ ಚಿಮ್ಮುತ್ತಿರುತ್ತೆ..ಎಷ್ಟೋ ವಿಷಯಗಳನ್ನು ಹಂಚಿಕೊಳ್ಳುವ ಹೃದಯವಿರುತ್ತೆ..

ಪ್ರತೀ ದಿನವೂ ಮಾತನಾಡಲಿ, ಪ್ರೀತಿಯ ಸಂದೇಶವ ಕಳುಹಿಸಲಿ ಎಂದು ಕಾಯುತ್ತಿರುತ್ತೆ..ಕಾಯುವುದು ಬೇಸರವಲ್ಲ.ಆದರೆ ಕಾದ ಸಮಯಕ್ಕೆ ಪ್ರತೀಫಲ ಸಿಗದೇ ಕೊನೆಗೂ ಭಾವಲೋಕದಲ್ಲಿ ಬೆಲೆ ಸಿಗಲಾರದೇನೋ ಎಂಬಂತೆ ಭಾಸವಾಗುತ್ತೆ..ಪ್ರತೀ ದಿನವೂ ಪ್ರತೀ ಕ್ಷಣವೂ ಯೋಚಿಸುವವರಿಗೆ, ಉಡುಗೊರೆಯೆ ಇದು ಎಂದು ಅನಿಸುತ್ತೆ..ಭಾವನೆಗಳನ್ನು ಕೊಳ್ಳುವವರಿಲ್ಲದ ಮೇಲೆ ಏನು ಮಾಡಲಿ..ಅತೀಯಾದ ಕಾಳಜಿ, ಪ್ರೀತಿಯ ಪರಿಯು ಬೇಡವಾದರೆ ಎಂದಾದರೂ ಒಂದು ದಿನ ಗೊತ್ತಾಗಬಹುದು ಆ ತುಡಿತ..

2 comments:

Anonymous said...

ಆತ್ಮೀಯ ಪದ್ಮಾ ಅವರೇ.
ಈ ಕನಸು.ಕಾಂ ನ ಓದುಗ ನಾನು. ಪ್ರತಿದಿನ ಈ ಕನಸು ಓದುತ್ತಿದ್ದೇನೆ. ಇತ್ತೀಚೆನ ದಿನಗಳಲ್ಲಿ ಈ ಕನಸಿನಲ್ಲಿ ನಿಮ್ಮ ಬರಹಗಳು ಕಾರಿಡಾರ್ ಅಥವಾ ಯುವ ಪುಟಗಳಲ್ಲಿ ಪ್ರಕಟವಾಗುತ್ತಿವೆ. ಗಮನಿಸುತ್ತಿದ್ದೇನೆ. ನಿಮ್ಮ ಬರಹಗಳನ್ನು ಓದುವಾಗ ನೀವು ಯಾರನ್ನೋ ಪ್ರೀತಿಸುತ್ತಿದ್ದೀರಿ ಎಂಬುದು ಖಚಿತವಾಗುತ್ತದೆ. ಅವರನ್ನೇ ಮುಂದಿಟ್ಟುಕೊಂಡು ಅವರ ಬಗ್ಗೆಯೇ ಬರೆಯುತ್ತಿರುವಂತೆ ಭಾಸವಾಗುತ್ತಿದೆ. ಆದರೆ ಈ ನಿಮ್ಮ ಲೇಖನ ಓದಿ ನಿಜಕ್ಕೂ ಬೇಸರವಾಗುತ್ತಿದೆ. ಪ್ರೀತಿ ಪ್ರೇಮ ಬಹು ಕ್ಷಣಿಕ.ನಿಮ್ಮ ಕಾಲೇಜಿನ ಈ ದಿನಗಳಲ್ಲಿ ಇಂತಹ ಪ್ರೀತಿ ಪ್ರೇಮಗಳು ಬೇಡ. ನಾನು ನಿಮ್ಮ ಸಹೋದರನ ಸ್ಥಾನದಲ್ಲಿದ್ದುಕೊಂಡು ಈ ಮಾತು ಹೇಳುತ್ತಿದ್ದೇನೆ. ನೀವು ಸಾಧ್ಯವಾದರೆ ಒಂದಷ್ಟು ವೈಚಾರಿಕ ಚಿಂತನೆಗಳನ್ನು ಮಾಡಿ ಆ ರೀತಿಯ ಬರಹಗಳನ್ನು ಬರೆಯಿರಿ. ಖಂಡಿತಾ ಈ ಕನಸು ಸಂಪಾದಕರು ಅದನ್ನು ಪ್ರಕಟಿಸುತ್ತಾರೆಂಬ ನಂಬಿಕೆ ನನಗಿದೆ.
- ಚೇತನ್ ಶಿರ್ಸಿ, ಉತ್ತರ ಕನ್ನಡ.

Anonymous said...

ಬದುಕಿನಲ್ಲಿ ಬರುವ ಎಷ್ಟೋ ವಿಚಾರಗಳು ಅಥ೯ವಾಗುವುದಿಲ್ಲ. ತಿಳಿದೊ, ತಿಳಿಯದೆಯೋ ನಮ್ಮಿಂದ ತಪ್ಪುಗಳು ನಡೆದು ಹೋಗಿರುತ್ತದೆ. ಅದರೆ ಅದನ್ನು ನಾವು ತಿದ್ದಿಕೊಳ್ಳವಷ್ಟು ಹೊತ್ತಿಗೆ ಸಂಬಂಧಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತದೆ. ನನ್ನ ಪ್ರಕಾರ ಒಳ್ಳೆಯ ಸಂಬಂಧಗಳಲ್ಲಿ ಬಿರುಕು ಬರುವುದಿಲ್ಲ. ಯಾರೂ ಎಷ್ಟೇ ದೊಡ್ಡ ತಪ್ಪು ಮಾಡಿದರು ಅದನ್ನು ಕ್ಷಮಿಸಿದರೆ ಅಂತ ಸಂಬಂಧಗಳು ಸುಂದರವಾಗುತ್ತದೆ. ಒಂದು ರೀತಿಯಲ್ಲಿ ಹೇಳಬೇಕಾದರೆ ನಾವಿಬ್ಬರು ಸಮಾನ ದುಃಖಿಗಳು. ಆದರೆ, ನಮ್ಮಿಂದ ದೂರವಾಗುವವರು ಅವರ ಇಚ್ಚೆಯಿಂದ ತಾನೆ ಹೊರಹೋಗಿರುವುದು. ಹಾಗೇ ಬಿಟ್ಟು ಬಿಡೋಣ. ಬಹುಶಃ ಅವರಿಗೆ ಅದರಿಂದ ಖುಷಿ ಸಿಗಬಹುದು. ಅವರ ಖುಷಿ ನಮ್ಮ ಖುಷಿಯಾಗಿರಲಿ. ಅದು ಪ್ರೀತಿಗೆ, ಸಂಬಂಧಕ್ಕೆ ಸಿಗುವ ಗೌರವ. ಪ್ರೀತಿ, ಸಂಬಂಧಗಳಿಗೆ ಬೆಲೆ ಕಟ್ಟಲಾಗುವುದಿಲ್ಲ. ನನ್ನ ಪ್ರಕಾರ ನಿಮ್ಮ ಪ್ರೀತಿ ನಿಜವಾಗಿದ್ದೇ ಆದರೆ, ಅದು ಖಂಡಿತಾ ಒಂದಲ್ಲಾ ಒಂದು ದಿನ ಖಂಡಿತಾ ಸಿಗುತ್ತೆ. ಆದರೆ, ಬದುಕು ನಿಲ್ಲಿಸಬೇಡಿ. ಬರೆಯಿರಿ, ಏನಾದರೂ ಸಾಧಿಸಿ... ಜೀವನದ ಪ್ರತಿ ಕ್ಷಣವೂ ಅಮೂಲ್ಯ. ಅದನ್ನು ವ್ಯಥ೯ವಾಗಿಬೇಡಿ. ಚಿಂತೆಗಳನ್ನು ದೂರವಿಟ್ಟು ಚಿಂತನೆಗಳು ಮೂಡಲಿ ಮನದಲ್ಲಿ. ಗುಡ್್ ಲಕ್್. ನಿಮ್ಮ ಕನಸುಗಳು ನನಸಾಗಲಿ.

- ವಿದ್ಯಾ ಇವ೯ತ್ತೂರು

Post a Comment