ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಪ್ರಾದೇಶಿಕ ಸುದ್ದಿ : ವೇಣೂರು ವರದಿ
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಅಕ್ಟೋಬರ್ 16ರಿಂದ 24ರ ತನಕ ಬೆಳ್ತಂಗಡಿ ತಾಲೂಕು ಗುರುವಾಯನ ಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಉತ್ಸವಾಚರಣೆ ನಡೆಯಲಿದೆ. ನವರಾತ್ರಿ ಸಮಯದಲ್ಲಿ ಪ್ರತಿದಿನವೂ ಬೆಳಗ್ಗೆ 10ರ ನಂತರ ಶ್ರೀ ರಾಜರಾಜೇಶ್ವರೀ ಪೂಜೆ, ಕುಂಕುಮಾರ್ಚನೆ , ಭಜನಾ ಸೇವೆ ನಡೆಯಲಿದೆ. ಅ.16ರಂದು ಬೆಳಗ್ಗೆ 9ರಿಂದ ಮಹಾಗಣಪತಿ ಹೋಮದೊಂದಿಗೆ ನವರಾತ್ರಿ ಪೂಜಾರಂಭ ನಡೆಯಲಿದೆ. ಬೆಳಗ್ಗೆ 10ರಿಂದ ಹವ್ಯಕ ಬಾಂಧವರೆಲ್ಲರ ಕೂಡುವಿಕೆಯೊಂದಿಗೆ ಶತರುದ್ರೀಯಾಭಿಷೇಕ ಶಿವಪೂಜೆ ನಡೆಯಲಿದೆ. ಅ.24ರಂದು ಬೆಳಗ್ಗೆ 9 ರಿಂದ ವಿಜಯ ದಶಮಿ, ಮನೆ ತುಂಬುವುದು, ವಾಹನ ಪೂಜೆ, ನವಾನ್ನ ಭೋಜನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಬಾಂಧವರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

0 comments:

Post a Comment