ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಭಾಷಿಕ ಸಮುದಾಯಗಳ ಅಂತರ್ಸಂಬಂಧ

ಕಾಸರಗೋಡಿನ ಸಂದರ್ಭದಲ್ಲಿ ಮಲಯಾಳಂ ಮನೆಮಾತಿನ ಅನೇಕ ಜಾತಿ ಸಮುದಾಯಗಳಿವೆ. ಅವುಗಳಲ್ಲಿ ಮುಖ್ಯವಾದ ಸಮುದಾಯಗಳೆಂದರೆ ವಾಣಿಯ, ಬಿಲ್ಲವ, ಚಾಲ್ಯ, ಮಣಿಯಾಣಿ, ಮುಸಲ್ಮಾನ, ಅಗಸ, ಕ್ಷೌರಿಕ ಮೊದಲಾದವುಗಳು. ಈ ಜನಸಮುದಾಯದ ಜನರು ಕನ್ನಡ ಸಾಮಾಜಿಕ ಸಂದರ್ಭದಲ್ಲಿ ಬದುಕುತ್ತಿದ್ದಾರೆ. ಆ ಮೂಲಕ ಕನ್ನಡದ ಸಾಂಸ್ಕೃತಿಕ ವಲಯವನ್ನು ಪ್ರಭಾವಿಸಿದ್ದಾರೆ. ಈ ಜನಸಮುದಾಯವು ಕನ್ನಡದ ಭಾಷಿಕ ಲಯಗಳನ್ನು, ಪದಕೋಶಗಳನ್ನು ಸ್ವೀಕರಿಸಿದೆ, ಹಾಗೆಯೇ ನೀಡಿದೆ. ಕನ್ನಡ, ಮಲಯಾಳಂ ಭಾಷಾ ಸೌಹಾರ್ದದ ಕೊಂಡಿಯಾಗಿ ಈ ಸಮುದಾಯಗಳು ಬೆಸೆದುಕೊಂಡಿವೆ. ಸಾಂಸ್ಕೃತಿಕ ಆಚರಣೆಯ ಸಂದರ್ಭಗಳಿರಬಹುದು, ವ್ಯವಹಾರಿಕ ಸಂದರ್ಭಗಳಿರಬಹುದು, ವೃತ್ತಿಪರ ನೆಲೆಗಳಿರಬಹುದು ಇಲ್ಲೆಲ್ಲ ಮಲಯಾಳಂ ಸಮಾಜವು ಕನ್ನಡದಲ್ಲಿ ಅನಾವರಣಗೊಳ್ಳುತ್ತಿದೆ.


ಮಲಯಾಳಂ ಸಂದರ್ಭದ ಅನೇಕ ತಿನಿಸುಗಳು ಕನ್ನಡದ ಸಂದರ್ಭದಲ್ಲಿ ಪ್ರಚಲಿತ ಗೊಂಡಿವೆ. ಉದಾಹರಣೆಗೆ ನೆಯ್ಚೋರು, ಪÙಳಂಪುರಿ, ಉಂಡಕಾಯ್, ಪುಟ್ಟ್, ಕಲ್ತಪ್ಪ, ಕಟ್ಟಚ್ಚಾಯ ಇತ್ಯಾದಿ.
ಸಾಮಾಜಿಕವಾಗಿ ಮಲಯಾಳಂ ಭಾಷಾ ಸಮುದಾಯವು ಕನ್ನಡ ಭಾಷೆಯನ್ನು ಪ್ರಭಾವಿಸಿದುದರ ಕುರುಹಾಗಿ ಕನ್ನಡವು ಅನೇಕ ಪದಗಳನ್ನು ಮಲಯಾಳಂನಿಂದ ಸ್ವೀಕರಿಸಿದೆ. ಇಂತಹ ಅನೇಕ ಪದಗಳು ಇಂದಿಗೂ ಸಾಮಾಜಿಕ ವ್ಯವಹಾರಗಳ ಸಂದರ್ಭದಲ್ಲಿ ಕನ್ನಡ ಮಲಯಾಳಂಗಳೆರಡರಲ್ಲೂ ಸಮಾನವಾಗಿ ಬಳಕೆಯಾಗುವ ಪದಗಳಾಗಿವೆ.
ಕನ್ನಡದಲ್ಲಿ ಮಲಯಾಳಂ ಸ್ವೀಕೃತ ಪದಗಳು
ಕಡಕಟ್ಟು(ಯೋಜನೆ) ಗುಳಿಗೆ(ಮಾತ್ರೆ)
ಬುದ್ದಿಮುಟ್ಟು(ತೊಂದರೆ) ಮ್ಯೊಲಿಯಾರ್(ಮೌಲವಿ)
ಮುಂಡು(ಪಂಚೆ) ಬಲಿವಾಡು(ಹರಕೆ)
ತೋರ್ತ್ (ಬೈರಾಸು) ಕೊಡಿಮರ(ಧ್ವಜಸ್ತಂಭ)
ವರ್ಗೀಯಶಕ್ತಿ(ಕೋಮುಶಕ್ತಿ) ಕೇಳಿಕೋಟ್ಟ್(ಯಕ್ಷಗಾನ ಪರಿಭಾಷೆ)
ಸ್ಥಿರ ಮದ್ಯಪಾನಿ(ನಿತ್ಯ ಮದ್ಯಪಾನಿ) ತೆರಪ್ಪುರಪ್ಪಾಡ್(ಯಕ್ಷಗಾನ ಪರಿಭಾಷೆ)
ಕಾರ್ಯಸ್ಥ(ಉಸ್ತುವಾರಿ ನೋಡಿಕೊಳ್ಳುವವ) ಜೊಟ್ಟೆ(ಏತ)
ಪಟ್ನಿ(ಉಪವಾಸ) ಸೈತಾನ್
ಅವಘಡ(ಅಪಘಾತ) ಪ್ರತಿಪಕ್ಷ(ವಿರೋಧ ಪಕ್ಷ)
ನೊಣೆ(ಸುಳ್ಳು) ಪ್ರಭಾಷಣ(ಉಪನ್ಯಾಸ)
ಜಮ್ಮ(ಆಸ್ತಿ) ಉತ್ತರವಾದಿತ್ವ(ಜವಾಬ್ದಾರಿ)
ಸ್ಥಾನಾರ್ಥಿ(ಅಭ್ಯರ್ಥಿ ) ಕ್ಷೇತ್ರ ಪರಿಸರ(ದೇವಾಲಯ ವಠಾರ)
ಸಮರ(ಮುಷ್ಕರ) ಸಾಲು(ಏರಿ)
ಅಮ್ಮಿಕಲ್ಲು(ಅರೆಯುವ ಕಲ್ಲು) ಕೂರುಕಚ್ಚೋಡ(ಪಾಲುವ್ಯವಹಾರ)
ಕೈಯ್ಯಾಲೆ(ದರೆ) ಚುಡುಕುಳಿ(ಸ್ಮಶಾನ)
ಕ್ಷೇತ್ರೋತ್ಸವ(ಜಾತ್ರೆ) ಅಲಿಕತ್ತ್(ಕಿವಿಯ ಆಭರಣದ ಬಗೆ)
ಈ ಪದಗಳೆಲ್ಲ ಮಲಯಾಳಂ ಪದಗಳಾದರೂ ಕನ್ನಡದ ಸಹಜ ಪದಗಳೆಂಬಂತೆ ಕನ್ನಡಿಗರು ಬಳಸುವ ಪದಗಳಾಗಿವೆ(ಇವುಗಳ ಅನುವಾದ ಅಗತ್ಯವೇ ಇಲ್ಲ).
ಆದರೆ ಇನ್ನು ಕೆಲವು ಸಂದರ್ಭದಲ್ಲಿ ಕೆಲವು ಸಾಂಸ್ಕೃತಿಕ ಪದಗಳು ಮಲಯಾಳಂ ಪದಗಳಾಗಿಯೇ ಕನ್ನಡಿಗರ ನಡುವೆ ಬಳಕೆಯಲ್ಲಿವೆ ಉದಾಹರಣೆಗೆ:
ತರವಾಡ್ ಕೈಕೊಟ್ಟ್ಕಳಿ ಮೂಪ್ಪರ್
ವೆಳಿಚ್ಚಪಾಡ್ ತಿರುವಾದಿರ ಕಾರಣವರ್

ಇನ್ನು ಕೆಲವು ಸಂದರ್ಭಗಳಲ್ಲಿ ಕೆಲವೊಂದು ಪದಗಳು ಕನ್ನಡದಲ್ಲಿ ಬಳಕೆಯಾದವುಗಳೇ ಆದರೂ ಕಾಸರಗೋಡಿನ ಸಾಮಾಜಿಕ ಸಂದರ್ಭದಲ್ಲಿ ಮಲಯಾಳಂ ಅರ್ಥಗಳಲ್ಲಿಯೇ ಬಳಕೆಯಾಗುತ್ತವೆ. ಉದಾಹರಣೆಗೆ:
ಪದಗಳು ಅರ್ಥ ಪದಗಳು ಅರ್ಥ
ಶೀಲ ರೂಢಿ ಮೋನೆ ಮಗನೇ
ಅವಸರ ಸಂದರ್ಭ ಮೋಳೆ ಮಗಳೇ
ದೈವಾದೀನ ದೈವಕೃಪೆ ಸಮರ ಮುಷ್ಕರ
ಪತ್ರ ಪತ್ರಿಕೆ ಅವಕಾಶ ಹಕ್ಕು

0 comments:

Post a Comment