ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ: ಆರ್.ಎಂ.ಶಮ೯, ಮಂಗಳೂರು.


ವಿವಾಹ ಒಂದುರೀತಿಯ ಕಟ್ಟುಪಾಡು ಹೌದು!
ಇದೊಂದು ಅಗತ್ಯ-ಇಲ್ಲವೆನ್ನಲಾದೀತೇನು?
ಇನ್ನೂ ಮುಖಗಳಿಲ್ಲವೇ?
ಏಕಿಲ್ಲ-ಉಂಟೇಉಂಟು!
ನೆಮ್ಮದಿಗೂ ವಿವಾಹ.
ಸಮಾಧಿಗೂ ವಿವಾಹ.


ಎಲ್ಲಕ್ಕಿಂತ ಉನ್ನತವಾದ ನೆಲೆ ವಿವಾಹಕ್ಕಿಲ್ಲವೇನು?
ಸಮಾಜ,ಸುತ್ತಮುತ್ತಲು, ಪ್ರಪಂಚ-
ಸಾಧನೆ-ಸಾಧಕ-ಸಾಧ್ಯ-ಸಿಂಧು ಹೇಗೇನೋಡಿದರೂ-
ನೋಡಲೂ-ನೋಡಿಸಲೂ ಬೇಡವೇ-
ಜನ-ಮನ-ಗಣ?
ಜನ-ಜನದ ಬೆಳವಣಿಗೆ-ಮೆರವಣಿಗೆ ಇದಕ್ಕೆ ಸಂತಾನಾಭಿವೃದ್ಧಿ.
ಅಭಿವೃದ್ಧಿ-ಕಾಮ್ಯಕ-ಕಾಯಕವೇ,
ಕಾಮುಕ ಕಾಯಕವೇ-
ಹೇಗಿದ್ದರೂ-ಹೊಸಜೀವ ನೆಲಮೆಟ್ಟದೇ-ಮುಟ್ಟದೇ-ಗತ್ಯಂತರವಿಲ್ಲವು!
ಲೋಕ-ಲೋಕಾಂತರ-ದೇಶಾಂತರ ಯಾವನೆಲೆಗೇ ಹೋಗಲಿ,
ತಕ೯ ದೇವ ಮೆಚ್ಚುವಂತಿದ್ದರೇ-ಮಾನ್ಯ-ಆಯ೯!
ಹಾಗಾಗಿ-ಮದುವೆ-ವಿವಾಹ-ವಿವಾದ-ವಿನೋದ ಆಗದೇ-ಕಾಮ್ಯಕ-ಕಾವ್ಯವೇ ಸರಿ.
ಇನ್ನೆಲ್ಲವನ್ನೂ ಬದಿಗೇ ಸರಿಸಿರಿ-ಅದೇ ಸರಿ-ಸಿರಿ-ಗರಿ!
******************************
ಈಗ ವಿವಾಹದ ಸಿಂಧುತ್ವ-ತತ್ವವೂ-ತಥ್ಯವೂ-ಪಥ್ಯವೂ ಆಯಿತಲ್ಲ.
ವಿವಾಹ-ಜಾತಕ-ದೈವೀಕ-ಆಮುಷ್ಮಿಕ ಹೇಗಾದರೂ ಇರಲಿ-ಪ್ರಧಾನ ಗುರಿ-ನೆಮ್ಮದಿ.
ನೆಮ್ಮದಿಗೆ ಇಂಪು-ಪೆಂಪು-ತಂಪು-ಸೊಂಪು-
"ಋಣಾನುಬಂಧರೂಪೇಣಪಶು-ಪತ್ನೀ ಸುತ ಆಲಯಃ"-ಇದು ಆಯ೯ವಾಕ್.
ಅಲ್ಲಿಗೆ ವಿವಾಹದ-ಫಲಶೃತಿ-ಬೇರೆಯದಾದ ಹೆಣ್ಣು-ಬೆರೆತಮೇಲೆ-ಪತ್ನೀ-ಪ್ರೇರಕಳು-ಕಾರಕಳು-ತಾರಕಳು!
ಪತ್ನಿಯಿಂದ ಪತಿ-ಪ್ರಜಾಪತಿ-ರಾಷ್ಟ್ರಪತಿ-ಬೃಹಸ್ಪತಿ-ಇಲ್ಲೇ ದಿವ್ಯ ಮತಿ-ನೀತಿ!
************************************
ವಿವಾಹದಲ್ಲಿ-ನಮ್ಮ ಪ್ರಾಚೀನ ಸಂಸ್ಕಾರ-ಸಂಸ್ಕೃತಿ-
ಪ್ರವರ,ಅಗ್ನಿಸಾಕ್ಷಿ,ಮಂತ್ರ,ಹೋಮ ಹವನ-ದಾನ-ದಕ್ಷಿಣೆ ಇತ್ಯಾದಿಗಳು ಹೊಸದವೇನಲ್ಲವಲ್ಲ?
ಇದಕ್ಕೂ ಮೀರಿ -ಮೇರುಸಂಗತಿ-
"ಸಪ್ತಪದಿ"
ಇನ್ನೂ ಸ್ವಾರಸ್ಯವೇ-ಸಾಮರಸ್ಯವೇ-ಸಮಸ್ತವೇ ಎಂದರೆ-
ಈ ನೀತಿಯ ಮಾತಿಗೇ ಬರೋಣ!
"ಧಮೇ೯ಚ ಅಥೇ೯ಚ ಕಾಮೇಚ ನಾತಿಚರಾಮಿ"- ಇದು ಮದುವೆಯಲ್ಲಿ ಗಂಡು-ನಂತರ ಗಂಡ-ಸಕಲ ರೀತಿಯ ಸಾಕ್ಷಿಗಳ ಸಮ್ಮುಖ ಆಣೆ-ಪ್ರಮಾಣ ಮಾಡುವುದು!
"ಧಮೇ೯ಚ-ಅಥೇ೯ಚ-ಕಾಮೇಚ ನಾತಿ ಚರಿತವ್ಯಾ"-ಇದು ಹೆಣ್ಣು-ನಂತರ ಹೆಂಡತಿ ಸಕಲ ರೀತಿಯ ಸಾಕ್ಷಿ ಸಮ್ಮುಖ ಆಣೆ-ಪ್ರಮಾಣ-ಮಾಡುವುದು ಅತಿ ಮುಖ್ಹ್ಯವಾದ ಸಂಗತಿಯು!
******************************
ಯಾವ ರೀತಿಯಿಂದ ನೋಡಲಿ-ನೋದಿಸಲ್ಪಡಲಿ-ವಿವಾಹದ ನಂತರ ಬೇಪ೯ಡಿಕೆ-ಬೇಪ೯ಡಿಸುವುದು ಸಿಂಧುವಲ್ಲ.
ನಿತ್ಯಜೀವನದ ಯಾವ ನೆಲೆಯಲ್ಲಿ ನಿಂತು ನೋಡಿದರೂ ಎಲ್ಲೂ-ಯಾರೂ-ಏಂದೂ ವಿವಾಹದಲ್ಲಿ-ಬಿರುಕು-ಮುರುಕು ಒಪ್ಪರು!
ನ್ಯಾಯಾಲಯಗಳೂ ವಿವಾಹ ಲಯವಾಗುವುದನ್ನು-ನಷ್ಟವಾಗುವುದನ್ನು ಸಹಿಸವು.
ಎಲ್ಲಿ ನೋಡಲೀ-ಹೇಗೇ ನೋಡಲೀ-ಯಾರೇ ನೋಡಲೀ-
ವಿವಾಹಕ್ಕೆ ಸದಾ ಸುಭದ್ರವಾಗಿರಲೇ ಸವ೯ಪ್ರಯತ್ನ ಸತ್ಯಾತ್ ಸತ್ಯವಾದ ಸಂಗತಿಯು.
*****************************
ಸವ೯ಸಮಾಧಾನ-ಸವ೯ಸಾಧನ ವಿವಾಹವನ್ನು ಪರಾತ್ಪರವೇ ಸಮಾಪ್ತಿಗೊಳಿಸುವವರೆಗೆ-ವಿವಾದವಾಗಿ ಇರಲು ಯಾವ ನೆಲೆಯೂ ಇಲ್ಲ.
***********************
ಇಂತಹ ಪವಿತ್ರ-ಸೂತ್ರ-
ಭಗವದ್ಗೀತಯಲ್ಲಿ-ಪ್ರಸ್ತುತಪಡಿಸಿರುವದನ್ನೇ-ಗುರಿಮಾಡಿಕೊಂಡು ನಾವು ಈ ಜಿ!ಜ್ನ್ಯಾಸೆಗೆ ಇಲ್ಲಿ ಇಳಿದದು.
ನಾವೀಗ ಭಗವ್ದ್ಗೀತೆಯ ೧೩ ನೇ ಅಧ್ಯಾಯ-ಕ್ಶೇತ್ರ-ಕ್ಶೇತ್ರಞ್ನಯೋಗ-೯ನೇ ಶ್ಲೋಕವನ್ನು-ವಿವರವಾಗಿ ನೆನೆಯೋಣ!
******************************************************************************************************
ಇದು ಸ್ವಯಂ ಪರಮಾತ್ನವಾಣಿಯು
*************************************
" ಅಸಕ್ತಿಃ ಅನಭಿಷು ಅಂಗಃ
ಪುತ್ರದಾರಗೃಹಾದಿಷು
ನಿತ್ಯಂ ಚ ಸಮಚಿತ್ತತ್ವಂ
ಇಷ್ಟಾನಿಷ್ಟೋಪಪತ್ತಿಷು"
ಪುತ್ರ-ಪತ್ನಿ-ಗೃಹ-
ಇವುಗಳಲ್ಲಿ-ಆಸಕ್ತಿ ಇಲ್ಲದಿರುವುದು-
ಅಂದರೆ ಸಹಜ-ನೈಸಗಿ೯ಕವಾದ ಆಸೆಯನ್ನು ತೊರೆಯುವುದು
ಅಲ್ಲಿಗೆ ವಿವಾಹವನ್ನು ಪರಮಾತ್ಮನೇ ಅಂತ್ಯಗೊಳಿಸುತ್ತಿದ್ದಾನೆ-
ಅಥವಾ ಅಂತ್ಯಗೊಳಿಸಲು ಆದೇಶಿಸುತ್ತಿದ್ದಾನೆ ಎಂತಲ್ಲದೇ ಇನ್ನೇನು-ನಿಷ್ಪತ್ತಿ ಇಲ್ಲಿ?
ಹಗಾದರೆ-
*************
ಇದು ಪರಾತ್ಪರದ ವಾಣಿಯಂತ ತಲೆದೂಗುವುದೆ?
ನೀಚ-ನೀತಿಬಾಹಿರ ಅಂತ ತಲೆ ಅಲ್ಲಾಡಿಸುವುದೆ
ಅಥವಾ ಇದು ಪರಾತ್ಪರದ ಅಂತರಂಗದ ಮಾತು ನೇರವಾಗಿ ಅಜು೯ನನಿಗೆ ಎಂತ ಸುಮ್ಮನಾಗುವುದೆ
ಅಥವಾ ಪರಮಾತ್ಮನ ಇಂಗಿತವೇ ಅನ್ಯ ಎಂತ ನಗಣ್ಯಮಾಡುವುದೆ
ಈ ಪ್ರಶ್ನೆಗಳು-ಶೇಷಪ್ರಶ್ನೆಗಳಾಗಿ-
ಉತ್ತರ ಬೇಡವೆಂತಲೋ-ಬೇಡಲಿಲ್ಲವೆಂತಲೋ ದೂರವಾಗುವುದೇ
ಎಲ್ಲಿದೆ ಉತ್ತರ?
ಯಾರು ನೀಡುವರು ಉತ್ತರ?
ಇದಕ್ಕೆಲ್ಲಾ ಪುನಃ ಆಸವ೯ಶಕ್ತನನ್ನೇ ಮೊರೆಹೋಗುವುದೆ-
ಅಥವಾ ಅವನ ಮರೆಯೇ-ವರವೆಂದು ಬೀಗುವುದೆ?
ಈ ನಮ್ಮ ಚಿಂತೆಗಿಂತ-ಚಿಂತನಕ್ಕೆ ಓದುಗರು-
ಪ್ರತಿಕ್ರಯಿಸಲು-ಪ್ರಕ್ರಿಯೆಗೆ ಇದು ಆಹ್ವಾನವು.
"ನ ಜಾನೇ ನೈವ ಜಾನೇ-ದೇವೇಶ"


0 comments:

Post a Comment