ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ: ಡಾ.ಮೋಹನ ಕುಂಟಾರ್

ಕೆಲವು ಮಲಯಾಳಂ ಸಮುದಾಯಗಳಲ್ಲಿ ಅನೇಕ ಪದಗಳು ಕನ್ನಡದ ಪ್ರಭಾವದಿಂದಲೇ ರೂಪುಗೊಂಡಿವೆ. ಇವುಗಳನ್ನು ಕನ್ನಡದ ಪ್ರಭಾವದಿಂದ ಮಲಯಾಳಿಗರು ರೂಪಿಸಿಕೊಂಡರೆಂದು ಭಾವಿಸಬಹುದು. ಇವು ಕನ್ನಡ ಸಮಾಜದ ನಡುವೆ ಬದುಕುವ ಮಲಯಾಳಿಗರಲ್ಲಿ ಮಾತ್ರ ಇದೆ. ಇವುಗಳ ಅನುವಾದ ಸರಳ. ಉದಾಹರಣೆಗೆ:


ಕನ್ನಡ ಕನ್ನಡ ಪರಿಸರದ ನಿರ್ದಿಷ್ಟ ಮಲಯಾಳಂನಲ್ಲಿ
ಮಲಯಾಳಂ ಸಮುದಾಯದಲ್ಲಿ
ಎಲೆ ಎಲ ಇಲ
ಬೆಳೆ ಬೆಳ ವಿಳ
ಒರಳು ಒರಳ್ ಉರಲ್
ಹೊಗೆ ಪೊಗ ಪುಗ
ಚೆಂಡು ಚೆಂಡ್ ಪಂದ್
ಅಜ್ಜ ಅಜ್ಜೆ ಅಪ್ಪೋಪ್ಪನ್
ಅಜ್ಜಿ ಅಜ್ಜಿ ಅಮ್ಮುಮ್ಮ
ಮಗಳು ಮೋಳು ಮಕಳ್
ಜಾಗೆ ಜಾಗ ಸ್ಥಲಂ
ಜಾರು ಜಾರ್ ತೆನ್ನ್
ತೆಂಗಿನೆಣ್ಣೆ ತೇಙ ಎಣ್ಣ ವೆಳಿಚ್ಚೆಣ್ಣ
ಬೆಳ್ಳುಳ್ಳಿ ಬೆಳ್ತುಳ್ಳಿ ವೆಳ್ಳಪೂಡ್
ಈರುಳ್ಳಿ ಉಳ್ಳಿ ಸವೋಳ
ಬಟಾಟೆ ಬಟಾಟ ಉರುಳ ಕಿಳಂಗ್
ಅಡಕೆ ಅಡಕ ಪಾಕ್
ಹತ್ತುಸಾವಿರ ಪತ್ತಾಯಿರ ಪದಿನಾಯಿರಂ
ಹನ್ನೆರಡುಸಾವಿರ ಪಂದ್ರಂಡಾಯಿರ ಪಂದೀರಾಯಿರಂ
ಹದಿನೈದುಸಾವಿರ ಪದಿನೆಂಜಾಯಿರ ಪದಿನೈಯ್ಯಾಯಿರಂ
ಹದಿನೆಂಟುಸಾವಿರ ಪದಿನೆಟ್ಟಾಯಿರ ಪದಿನೆಣ್ಣಾಯಿರಂ

ಮಲಯಾಳಂ ಜನರ ಪ್ರಭಾವದಿಂದ ಕೆಲವು ಪಾರಿಭಾಷಿಕ ಪದಗಳು ಕನ್ನಡದಲ್ಲಿಯೂ ಬಳಕೆಯಾಗುತ್ತಿವೆ. ಇವು ಆಯಾ ಸಮುದಾಯದ ಜನರು ಮತ್ತು ಕನ್ನಡ ಸಮುದಾಯದ ನಡುವಿನ ಸಾಂಸ್ಕೃತಿಕ ಬದುಕಿನ ಭಾಗವಾಗಿಯೇ ಕನ್ನಡಿಗರಲ್ಲಿಯೂ ಬಳಕೆಯಾಗುತ್ತಿವೆ. ಕೃಷಿ, ಕಟ್ಟಡ ನಿಮರ್ಾಣ ಹಾಗೂ ಇತರೆ ಸಾಮಾಜಿಕ ಸಂದರ್ಭಗಳಲ್ಲಿ ಇಂತಹ ಪದಗಳು ಯಥೇಚ್ಛವಾಗಿವೆ.
ಉದಾಹರಣೆಗೆ:
ಮಡಿ(ಮಡಿ)
ಮುಡಿ(ಅಳತೆಯ ಮಾನ)
ತೇಯಪ್/ತೇಪು(ಸಾರಣೆ)
ತೋದ್/ತೋದ(ಅಳತೆಯ ಪ್ರಮಾಣ)
ಕೋಲು(27 ಇಂಚಿನ ಉದ್ದ)
ಕೌಪಲೆ(ಪಕ್ಕಾಸು)
ಮೋಂದಾಯ(ಛಾವಣಿಯ ಉನ್ನತ ಭಾಗ ಅಥವಾ ನೆತ್ತಿ)
ಕುತ್ತಂಕೋಲು(ಕವರೆಕೋಲು)
ಕುತ್ತಿಕಾಲು(ಛಾವಣಿಯ ನೆತ್ತಿಗೆ ಆಧಾರವಾಗಿ ಒಳಭಾಗದಿಂದ ಆಧಾರವಾಗಿ ಕೊಡುವ ಕಂಬ)
ಇರಿಮುಳ್ಳು(ಇಸಿ ಮುಳ್ಳು)
ಮುಚ್ಚು/ಮವ್(ಒಂದು ಬಗೆಯ ಕೊಡಲಿ)
ಕತ್ತಿ(ಕುಡುಗೋಲು)
ಸೈಂಗೋಲು(ಸರಳು)
ಪುಂಜ(ಸುಗ್ಗಿ)
ನೆಲ್ಲುಗೋರಿ(ಬತ್ತರಾಶಿ ಮಾಡಲು ಬಳಸುವ ಸಲಿಕೆಯಂತಹ ಮರದ ಉಪಕರಣ)

ಮಲಯಾಳಂ ಪ್ರಭಾವದಿಂದ ಕನ್ನಡದಲ್ಲಿ ಅನುವಾದಗಳಾಗಿ ಸೃಷ್ಟಿಯಾದ ಪದಗಳಿವೆ:
ಕೋಳಿ ಕಟ್ಟ(ಕೋಯಿ ಕೆಟ್ಟ್)
ಭಿಕ್ಷೆ(ಭಿಕ್ಷೆ-ಅಯ್ಯಪ್ಪನ ವ್ರತ ಸಂಬಂಧಿ)
ದಡೆ ಹಾಕು(ದಡೆ ಇಡು, ಮರವನ್ನು ಸೀಳುವುದಕ್ಕೆ ಅಟ್ಟಳಿಗೆ ಮೇಲೆ ಇಡು)
ಮಾಲೆ ಹಾಕು(ಮಾಲ ಇಡು-ಅಯ್ಯಪ್ಪನ ವ್ರತ ಸಂಬಂಧಿ)
ಹೊಳೆಕರೆ(ಪೊಯಕ್ಯರ)
ಕಟ್ಟುಕಟ್ಟು(ಕೆಟ್ಟ್ ಕೆಟ್ಟ್-ಅಯ್ಯಪ್ಪನ ವ್ರತ ಸಂಬಂಧಿ)
ಆಚೆಕರೆ(ಅಕ್ಕರ)
ಸಾರ ಇಲ್ಲ(ಸಾರವಿಲ್ಲ-ಪರವಾಗಿಲ್ಲ)
ಕೋಪೆ(ಕೋಪ-ಗೊಂಚಲಿನ ರೂಪದಲ್ಲಿ ಜೋಡಿಸಿದ)
ಸ್ವಾಸ್ಥ್ಯ ಸಚಿವ(ಸ್ವಸ್ಥ್ಯ ಮಂತ್ರಿ- ಆರೋಗ್ಯ ಮಂತ್ರಿ)
ಹೀಗೆ ಭಾಷಿಕವಾಗಿ ಸಮುದಾಯಗಳ ನಡುವೆ ಕನ್ನಡ ಮಲಯಾಳಂ ಅಂತರ್ಸಂಬಂಧ ಗಡಿ ಪ್ರದೇಶಗಳಲ್ಲಿ ನಿರಂತರವಾಗಿ ಮುಂದುವರಿದಿದೆ.

0 comments:

Post a Comment