ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಮೂಡಬಿದಿರೆ(Moodabidri) ವರದಿದರ್ಶನ್ ಬಿ.ಎಂ.

ಕವಿ, ಸಂಶೋಧಕ, ಕನ್ನಡ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆಯವರ "ಅರುಣಾಬ್ಜ ಹಾಗೂ ಕುಮಾರವ್ಯಾಸ ತೌಲಾನಿಕ ಅಧ್ಯಯನ" ಮತ್ತು "ಕುಮಾರವ್ಯಾಸನ ಕಾಲನಿರ್ಣಯ" ಎಂಬ ಎರಡು ಸಂಶೋಧನಾ ಕೃತಿಗಳನ್ನು ಆಳ್ವಾಸ್ ಕಾಲೇಜಿನಲ್ಲಿ ಸೋಮವಾರ ಕನ್ನಡ ಸಾಹಿತ್ಯ ಲೋಕದ ಹೆಸರಾಂತ ಸಾಹಿತಿ ನಾಡೋಜ ಹಂಪಾ ನಾಗರಾಜಯ್ಯ ಬಿಡುಗಡೆಗೊಳಿಸಿದರು.

ವಿದ್ವತ್ ಬಂಜರು ಭೂಮಿಯಲ್ಲ ಅದರಲ್ಲೂ ರಸವಿರುತ್ತದೆ. ಭಾರತೀಯ ಭಾಷಾ ಕುಟುಂಬಗಳಲ್ಲಿ ತುಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದೆ. ತದನಂತರ ಸ್ವತಂತ್ರವಾಗಿ ನೆಲೆ ನಿಂತ ಭಾಷೆ ಇದಾಗಿದೆ. ಕವಿಯ ಕಾಲ ನಿರ್ಣಯ ಅಷ್ಟು ಮುಖ್ಯವಲ್ಲ, ಆದರೆ ಆತ ಆ ಕೃತಿಯನ್ನು ರಚಿಸಲು ಆದಂತಹ ಕಾರಣಗಳು, ಪ್ರೇರಣೆಗಳು ಮತ್ತು ಆ ಸಂದರ್ಭವನ್ನು ತಿಳಿದಾಗ ಕವಿಯ ಕಾಲ ನಿರ್ಣಯವು ಅಗತ್ಯವಾಗುತ್ತದೆ. ಅದನ್ನು ದೃಷ್ಠಿಯಲ್ಲಿಟ್ಟುಕೊಂಡು ನಡೆಸಿರುವ ಕುಮಾರವ್ಯಾಸನ ಕಾಲ ನಿರ್ಣಯ ಕೃತಿ ನಿಜಕ್ಕೂ ಉತ್ತಮವಾದಂತಹದ್ದಾಗಿದೆ ಎಂದರು.


ರತ್ನಾಕರವರ್ಣಿ ಹಾಗೂ ಇತರೆ ತುಳು ಕವಿಗಳಿಗೆ ತುಳುವಿನಲ್ಲಿ ಬರೆಯುವ ಶಕ್ತಿ ಇದ್ದರೂ ಅವರು ಬರೆಯಲಿಲ್ಲ. ಆದರೆ ಅರುಣಾಬ್ಜ ಮಹಾಭಾರತವನ್ನು ತುಳುವಿನಲ್ಲಿ ರಚಿಸಿದ್ದು ನಿಜಕ್ಕೂ ವಿಶೇಷವಾದ ಸಂಗತಿಯಾಗಿದೆ ಎಂದರು. ಇಂತಹ ವಿಶೇಷ ತುಳು ಭಾರತವನ್ನು ಅಧ್ಯಯನ ನಡೆಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದ ಡಾ.ಪಿ.ಕೃಷ್ಣ ಭಟ್ ಅರುಣಾಬ್ಜನ ಮಹಾಭಾರತ, ಆತನ ಸಾಧನೆಗಳು ಹಾಗೂ ತುಳು ನಾಡಿನ ಸಂಸ್ಕೃತಿಯನ್ನು ಹೇಗೆ ಅರುಣಾಬ್ಜ ತನ್ನ ಕೃತಿಯಲ್ಲಿ ಪ್ರಕಟಪಡಿಸಿದ್ದಾನೆ ಎಂಬುದನ್ನು ಬಹಳ ಸಮರ್ಥವಾಗಿ ಗುರುತಿಸಿದ್ದಾರೆ ಆದ್ದರಿಂದ ಇದು ಬಹಳ ಗಮನಾರ್ಹವಾದಂತಹ ಕೃತಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಇಂದು ಸಂಶೋಧನೆಗಳು ಕಡಿಮೆಯಾಗುತ್ತಾ ಇವೆ. ಇಂದು ಪ್ರಾಮಾಣಿಕವಾಗಿ ಸತ್ಯಶೋಧನೆ ಆಗಬೇಕಾಗಿದೆ. ಇದನ್ನು ಬಹಳ ಗಮನದಲ್ಲಿ ಇಟ್ಟುಕೊಂಡು ಸಂಶೋಧನೆ ನಡೆಸಿರುವಂತಹ ಈ ಎರಡು ಕೃತಿಗಳು ಬಿಡುಗಡೆಗೊಂಡಿರುವುದು ಸಂತಸದ ವಿಷಯ ಎಂದರು.

ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಅಜಕ್ಕಳ ಗಿರೀಶ್ ಭಟ್, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರೊ.ಚಂದ್ರಶೇಖರ ಗೌಡ ವಂದಿಸಿದರು. ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮವನ್ನು ನಿರೂಪಿಸಿದರು.

0 comments:

Post a Comment