ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಶ್ರೀ ಭಗವದ್ಗೀತೆಯು ೧೮ ಅಧ್ಯಾಯಗಳನ್ನು ಹೊಂದಿದ್ದು ,೭೦೦ ಕ್ಕೂ ಮಿಕ್ಕಿ ಶ್ಲೋಕಗಳನ್ನು ಹೊಂದಿರುತ್ತದೆ.
ಮೊದಲಿನ ಅಧ್ಯಾಯವೇ ವಿಷಾದಯೋಗ ಎಂತ ಹೆಸರಿಸಲ್ಪಟ್ಟಿದೆ!.
ಲೌಕಿಕವಾಗಿ ಸಾಮಾನ್ಯವಾಗಿ ಮಾನ್ಯವಾಗಿ ಯೋಗ ಎಂದರೆ ಮಹತ್ತಿನಸಂಗತಿಎಂಬ ಪ್ರತೀತಿಯೇ ಸವ೯ವಿದಿತ
ಹೀಗಿದ್ದರೂ-ವಿಷಾದ-ಮಂಗಳಕರವಲ್ಲದ-ಸುಖಕರವಲ್ಲದ-ಸವೇ೯ಸಾಧಾರಣ ಯಾರೂ ಬಯಸದಸಂಗತಿಗೂ ಯೋಗ ಎಂಬ ಬಿರುದು-ಬಹುತೇಕ ಪರಮಾತ್ಮನ ಮಾತಾದುದರೀಂದ ಅದೂ ಯೋಗ ಎಂತಲೇ ಇರಬೇಕು!


ಅದು ಹಾಗಿರಲಿ,ಹೇಳಿ ಕೇಳಿ ಕ್ಷತ್ರಿಯ-ತ್ರಿಲೋಕ ವೀರ, ಹರನೊಡನೆಯೇ ಹೋರಾಡಿ ಹರಪ್ರೀತಿ ಸಂಪಾದಿಸಿಕೊಂಡ ಅಜು೯ನನಿಗೆ ವಿಷಾದ-ವಿನೋದವೇ-ಮೋದವೇ-ವಿವಾದವೇ ಏನುಂಟು-ಏನಿಲ್ಲ ಇಲ್ಲಿ?
ಅಜು೯ನನಪಾಲಿಗೆ ಮಹಾಭಾರತದ ಯುದ್ಧವೇ ಅಂತಿಮ ಯುದ್ಧ.
ಈ ವೇಳೆಗೆ ಅವನು ಮಾಡಿದ ಯುದ್ಧಗಳನ್ನು ಇನ್ನಾವ ಕ್ಷತ್ರಿಯ ನೂ-ವೀರನೇ-ನಿವೀ೯ಯ೯ನೆ ಮಾಡಿಲಿರಲಿಕ್ಕಿಲ್ಲ!
ರಾಜ್ಯಪ್ರಾಪ್ತಿಗಾಗಿ ಹಲವು ಸುತ್ತಿನ-ಹಲವು ಮತ್ತಿನ-ಹಲವು ಮುತ್ತಿನ ತೀಮಾ೯ನದ ನಂತರವೇ ಯುದ್ಧ ಭೂಮಿಗೆ ಇಳಿದದ್ದು!
ಯಾರೇ ಆಗಲೀ-ಎಲ್ಲೇ ಆಗಲೀ-ಯಾವಾಗಲೇ ಆಗಲಿ,
ಯುದ್ಧಕ್ಕೆ ಸಿದ್ಧರಾಗುವುದು-ಯುದ್ಧ ಮಾಡಲೆಂದೇ ವಿನಃ ವಿಷಾದ ಪಡಲು ಅಲ್ಲವೇ ಅಲ್ಲ.
ಇಷ್ಟಾದರೂ-ಸ್ವಯಂ ಪರಮಾತ್ಮನೇ ಸಾರಥಿ-ಸಾಥಿ-ಗುರು-ಮಾಗ೯ದಶಿ೯ ಆದರೂ ಯುದ್ಧಮಾದಲು ಬಂದ ಅಜು೯ನನಿಗೆ ಅಂಜುಬುರಿಕತನ!
"ಸಮರದೊಳು ಸೋದರಮಾವನೇ" ಎಂಬ ಕನ್ನದದ ಗಾದೆ ಆದರೆ-
ಯುದ್ಧಕ್ಕೆ ಯಾರು ಯಾರು ಬಂದಿದ್ದಾರೆ ಎಂತ ಖಾತರಿ ಪಡಿಸಿಕೊಳ್ಳುವ ತವಕ ಅಜು೯ನನಿಗೆ!
ಯುದ್ಧದಲ್ಲಿ ಯಾರಿರಲಿ-ಇಲ್ಲದಿರಲಿ-ಅದು ಶತ್ರುಪಕ್ಷವೇ ವಿನಃ ಮತ್ತೇನೂಅಲ್ಲ!
ಎಲ್ಲಿಲ್ಲದ-ಹೃದಯದ ಮಿಡಿತ-ತುಡಿತ-ರಕ್ತಸಂಬಂಧದ ಸೋಂಕು!
ಸೊಂಟಮುರಿಯಲು ಹೊರಟ ಅಪ್ರತಿಮವೀರನಿಗೆ ಈ ಸೋಂಕಿನ ಸೋಗು!
ನಿಜಕ್ಕೂ ಸ್ವಯಂ ದ್ರೌಪದಿಯ ತೀಮಾ೯ನವೇ ಮಹಾಭಾರತಯುದ್ಧದ ತಳಪಾಯ-ಅದೇ ಕೌರವರಿಗೆ ಅಪಾಯದ ಆದಾಯ!
ದ್ರೌಪದಿ-ಪಾಂಡವರಿಗೆ-ಪತ್ನಿ!
ಸಂಸಾರದ ಸಹಮತದ ತೀಮಾ೯ನ ಸಮರಕ್ಕೆ ಬಂದಮೇಲೆ-ವಿರಾಮಕ್ಕೆ ಬಯಸುವ ಯೋಧ!
ಇದು ಖೇದವಲ್ಲದೇ ಮತ್ತೇನು?
ಅಜು೯ನ ಗುರುಎಂತ ಹಿರಿಯರನ್ನು ಶತ್ರುಪಕ್ಶದಲ್ಲಿಕಂಡು ಮರುಗುವುದು-ನಡುಗುವುದು-ಮೆತ್ತಗಾಗುವುದು ಯೋಗ್ಯವೇ?
ಹರನನ್ನೆ-ಶತ್ರುವಾಗಿಸಿಕೊಂದು ಪಾಶುಪತಾಸ್ತ್ರವನ್ನು ಸಂಪಾದಿಸಿದ ಅಜು೯ನನಿಗೆ ಭೀಷ್ಮ-ದ್ರೋಣ-ಹರನಿಗಿಂತ ಹಿರಿಯರಾದರೇನು?
ಇನ್ನುರಕ್ತಪಾತ-ಮರಣ-ದುಮ೯ರಣ ಎಂತೆಲ್ಲ ಸೋಗಲಾಡಿತನದ ಮಾತು-ಈ ಮೊದಲು ಖಾಂಡವದಹನದಲ್ಲಿ ಪ್ರಾಣಿ ಸಮೂಹ-ಸಪ೯ಗಳು ಪ್ರಾಣಭಿಕ್ಷೆ ಬೇಡಿದಾಗ ಬೇಡವಾದುದು ಈಗ ಬೇಕೆನಿಸಿತೇನು!
ಯುದ್ಧಕ್ಕೆ ತೀಮಾ೯ನಮಾಡಿ ಯುದ್ಧಭೂಮಿಯಲ್ಲಿ ರೊದನಮಾಡುವ-ಮಾಡಿದ-ಪಾಥ೯ ಅಪಾಥ೯ಕ್ಕೇ ತಕ್ಕವನಲ್ಲವೇನು?
ಹೆಂಡತಿ-ಸಹೋದರರು-ಅಮ್ಮ-ಪ್ರಾಣಶೇಹಿತ-ಎಲ್ಲರ ತೀಮಾ೯ನದ ಫಲಶೃತಿ-ಮಹಾಭಾರತದಯುದ್ಧ-ಇಲ್ಲಿ ಇವನ-ರಡ್ಡು-ಜಡ್ಡು-ಜಿಡ್ಡು ಬೇಡದವಕೆ!
ಜಿದ್ದಿಗೆಬೇಕದವನು-ನಿದ್ದೆಗೆ!
ಅಜು೯ನನಿಗೆ ವಿಷಾದ-ಅವನ ಮನೆಗೆ ವಿಷ-ಇದೇ ಈ ಅಧ್ಯಾಯದ ಉಪಸಂಹಾರ!
ಸಂಹಾರಕ್ಕೆ ಬಂದವನು-ವಿಹಾರಕ್ಕೆ ಆತುಕೊಂಡನು!
ನಗಬೇಕೆ-ಅಳಬೇಕೆ-ಆಳಬೇಕೆ?
ನೋಡೋಣ ಮುಂದಿನ ಅಧ್ಯಾಯದ ಆಖ್ಯಾನ-ಅಪ್ಯಾಯಮಾನವೇ ಎಂತ.
ಕ್ಕೃಷ್ಣಂ ವಂದೇ ಜಗದ್ಗುರುಂ!

ಆರ್.ಎಂ.ಶಮ೯.
ಮಂಗಳೂರು.

0 comments:

Post a Comment