ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ನಾವೀಗ,ರಣಹೇಡಿಯಾದ-ತಿಳಿಗೇಡಿಯಾದ,ಕತ೯ವ್ಯಲೋಪಎಸಗಿರುವ,ತ್ರಿಲೋಕವೀರ,ಭೀಷ್ಮ-ದ್ರೋಣ-ಪರಶಿವ-ಇಂದ್ರ-ಅಗ್ನಿ-ಎಲ್ಲಕ್ಕೂ-ಎಲ್ಲೆಗೂ-ಶ್ರೀಕೃಷ್ಣನಿಗೆ-ಈಮೊದಲು ಉಲ್ಲೇಖ್ಹಿಸಿದ ಆ ಎಲ್ಲ ಆಧ್ಯರಿಗಿಂತ ಒಂದಳತೆ ಹೆಚ್ಚೇ ಪ್ರಿಯನಾದ ತಥಾಕಥಿತ ಮಹಾನ್ ಯೋಧ ಅಜು೯ನನಿಗೆ ಯುದ್ಧಮಾಡದೇ ಇರದಿರಲು ಭಗವಂತನ ಬೋಧನೆ-ಪ್ರೇರಣೆ-ಮೂದಲಿಕೆಗೇ ಪ್ರಸಿದ್ಧವಾದ ಪಾಠ-ವರಾತದ ಸ್ರೋತ ಸಾಂಖ್ಯ ಅಥಾ೯ತ್ ಬುದ್ಧಿಪಾಠವನ್ನು ಅವಲೋಕಿಸಿದಾಗ-


ಕ್ಷತ್ರಿಯ-ರಣಪಂಡಿತ-ಜಂಭಗಾರ-ಹಲವಾರುಯುದ್ಧಗಳನ್ನು ಕ್ಷುಲ್ಲಕವೋ-ಕ್ಷೇಮಕರವೋ-ಕ್ಷಯಕರವೋ ಮಾಡಿ ಮೋಡಿಗಾರನೆಂಬ ಪಟ್ಟಪಡೆದಿದ್ದಜೀವವಿಷೇಷಕ್ಕೆ-ಜೀವನಪಾಠ ಮಾಡಿದ-ಮಾಡಿಸಿದ ಭಗವನ್ ವಾಣಿಯನ್ನುಕೇಳುತ್ತೇವೆ-ಕೇಳಿಸುತ್ತೇವೆ!
ಜೀವನಕ್ರಮವೇ-ಯುದ್ಧನೀತಿಯಿರುವ-ಇರಬೇಕಾದ-ಇರಲೇಬೇಕಾದ ಅಜು೯ನನಿಗೆ ಯುದ್ಧಮಾಡಲು ಪ್ರಚೋದನೆ ಬೇಕು ಎಂದರೆ ಅದಕ್ಕಿಂತ ನಗೆಪಾಟಲಿನ ಸಂಗತಿಯನ್ನು ಯೋಚಿಸಬಹುದೇ-ಯೋಚಿಸಬೇಕೆ?
ಜನ್ಮಹಕ್ಕು-ಜನ್ಮಸಂಸ್ಕಾರ-ಕ್ಷತ್ರಿಯಧಮ೯ ಇವುಗಳ ಆಕರವಾದ ಅಜು೯ನನಿಗೆ ಆಧಾರವಾಗಿ ಯುದ್ಧಕ್ಕೆ ಹುರಿದುಂಬಿಸಲು ಭಗವಂತನು ಪರಿತಪಿಸಬೇಕೇನು?
ಇರಲಿ,ಧಮ೯ದಪಾಲನೆಗೆ-ಕ್ಷತ್ರಿಯಧಮ೯ದ ಪಾಲನೆಗೆ ಯುದ್ಧ ಮಾಡು-ಜಯಪಡೆದು ಸ್ವಗ೯ ಸಂಪಾದಿಸು ಹಾಗಿಲ್ಲವಾದಲ್ಲಿ ಜಗದ-ಜನದಚ್ ಛೀಮಾರಿಗೆ ಬಲಿಯಾಗು ಎಂದೆನೆತ,
ಮರುಕ್ಷಣವೇ ಜಯ-ಸೋಲು,ಲಾಭ-ನಷ್ಟ, ಸುಖ ದುಃಖ, ಬಿಸಿ-ತಂಪು ಹೀಗೆ ದ್ವಂದ್ವದ ಧ್ವಂಸದಲ್ಲಿ ಸ್ವಛಂದವಾಗಿ ಮುಳುಗೇಳುತ್ತಾ ಮುಗುಳ್ಣಗುವ ಪರಮಾತ್ಮನ ಪರಮಾತಿಗೆ ಪರವಶನಾಗಿ ಮುಂದೆ ವೀರಾವೇಶವಾಗಿ ಕಾದುವ-ಕಾಡುವ-ಕಾಪಾಡುವ ಅಜು೯ನನ ಬಗೆಗೆ-
ನಾಚಿಕೆ,
ಹೇಸಿಗೆ,
ಮೆಚ್ಚಿಗೆ
ಎನುಬೇಕು-ಏನುಬೇಡ ಇದೇ ಇಲ್ಲಿಯ ರೋಚಕ-ರಚನಾತ್ಮಕ ವಿಷಯಾಂತಯ೯ವು!
ಯುದ್ಧಕ್ಕೆ ಯುದ್ಧ ಹಾಗಾಗಿ ಯುದ್ಧಮಾಡು!
ಯುದ್ಧ-ಜೀವವೇ-ರಾಜ್ಯವೇ-ಜನಸಂಪತ್ತೇ ಯೇನಿದರ ಬಂಡವಾಳ?
ಕಾಯ೯-ಕಾರಣ-ತೋರಣ ಯೇನಾದರೂ ಇದ್ದರೇ ಅಲ್ಲವೇ-ಕೃತಕೃತ್ಯತೆ?
ಹಾಗಿಲ್ಲವಾದಲ್ಲಿ-ಮಹಾಭಾರತದ ಯುದ್ಧ-ಗೆಲ್ಲಲೇಬೇಕೆಂಬಹಠ-ಗೆದ್ದು ರಾಜ್ಯಾಡಳಿತ ಇದೇ ಆಲರಸಾದಾಗ-ಆಗಿಸಿದಾಗ-ಆಗಿಸಲೇಬೇಕಾದ ಈ ಹವಣಿಕೆಗೆ ಮರೀಚಿಕೆಯೇ ಉಪಲಭ್ದವೇ?
ಯೋಗಿಯಾಗಿ-ಅಥಾ೯ತ್ ಎಲ್ಲವನ್ನೂ-ಎಲ್ಲೆಲ್ಲೂ-ಯಾವಾಗಲೂಸಮ ಎಂತ ತೀಳಿದು ಬಾಳಲು-ಬಾಳಿಸಲು-ಸಂಭಾಳಿಸಲು ಮಹಾಭಾರತದ ಯುದ್ಧ ಮಾಡಿಯೇ ಸಾಧಿಸಬೇಕಿತ್ತೇನು?
ರಾಜ್ಯಕೊಡದ-ಅನ್ಯಾಯ ಮಾಡಿದ-ಮಾಡಿಸಿದ-ಕೌರವರನ್ನು ಕ್ಷಮಿಸಿ ಯೋಗಿಯಾಗಿ-ಹಾಯಾಗಿರಬಾರದಿತ್ತೇನು?
ಯುದ್ಧಭೂಮಿಯಲ್ಲಿ ಯೋಗಪಾಠ ಮಾಡಬೇಕಿತ್ತೇನು?
ಕಾಮ್ಯವಲ್ಲದೇ-ಕಾಮ್ಯವಿಲ್ಲದ ಸ್ವಾಮ್ಯವುಂಟೇ ಎಂದರೆ ಸ್ವಾಮಿಯೇ ಹೇಳಬೇಕು ಸತ್ಯವನ್ನು-ಸತ್ವವನ್ನು!
ಭಗವಂತನ ಆಣತಿಯಂತೆ ಯೆಲ್ಲವೂ-ಯಾವಾಗಲೂ-ಎಲ್ಲೆಲ್ಲೂ ನಡೆಯುತ್ತದೆ-ನಡೆಯುತ್ತಿದೆ ಎಂದಮೇಲೆ,
ಆ ಭಗವನ್ ಆದೇಶ ಅಜು೯ನನಿಗೆ ಇರಲಿಲ್ಲವೇ-ಇರಬೇಡವೇ?
ಸಾಮಾನ್ಯರು ಭಗವಂತನ ಹೆಸರಿನಲ್ಲಿ-ನೆನಪಿನಲ್ಲಿ ಇನ್ನೂ ಹೇಗೇಗೋ ಕತ೯ವ್ಯಪರರಾಗುವುದು ಪರಿಪಾಠ.
ಇಲ್ಲಿ ಸ್ವಯಂ ಪರಮಾತ್ಮನೇ ಮನುಷ್ಯ-ವಿಷೇಷಮನುಷ್ಯ-ತನ್ನಾಂಶಸ್ಥ ಹೀಗೆ ರೂಪುಗೊಂಡ ಅಜು೯ನನಿಗೆಹೊಸದಾಗಿ ಹಣೆಬರಹವನ್ನು ಯುದ್ಧಭೂಮಿಯಲ್ಲಿ ಬರೆದ ಎಂದರೆ ಸೋಜಿಗವೇ-ಶೋಚಕವೇ-ಸೂತಕವೇ-ನಾಟಕವೇ?
ಭವರೊಗಕ್ಕೆ ಮದ್ದು ಗುದ್ದು-ಭಗವದ್ಗೀತೆ-ಕಾರಣ ವೈದ್ಯೋ ನಾರಾಯಣೋ ಹರಿಃ-
ಇಲ್ಲಿ ಸ್ವಯಂ ನಾರಾಯಣನೇ ಮದ್ದುಗಾರ-ಮುದ್ದುಗಾರ-ಮುಜುಗರನಾದನೇ?
ಒಟ್ಟಿನಲ್ಲಿ, ಭಗವಂತನಮಾತು ನೇರವಾಗಿ ಅವನದೇ ಸ್ವರೂಪಕ್ಕೆ ಭಗವಂತನಿಂದ-ತಿಳಿದವರು-ತಿಳಿಯುವವರು-ತಿಳಿಹೇಳುವವರು ಜನ ಸಾಮನ್ಯರು-ಮಾನ್ಯರು-ಮನುಷ್ಯರು ಆದೀತೇ?
ಇದೇ ಭಗವದ್ಗೀತೆಯಲ್ಲಿ ಅನುಕ್ಷಣವೂ ಅನುರಣಿಸುವ ನಾದ-ವೇದ ಮೇಧಾ!
ಈ ದ್ವಂದದ ಸ್ವೇಛ್ಛಾವಿಹಾರವೇ ಭಗವದ್ಗೀತೆಯಲ್ಲಿ ಸದಾ ತೆರೆದುಕೊಳ್ಳುವ ತರೆದುಕೊಳ್ಳುವ ವೈಷಿಷ್ಟ್ಯ!
ಇರಲಿ ಮುಂದೆ ಹೋದಂತೆ ಮತ್ತೆ ಮತ್ತೆ ಮತ್ತಿನ-ಮುತ್ತಿನ-ಮುಕುತಿಯ ಮಾತುಗಳನ್ನು ಮೆಲಕು ಹಾಕೋಣ!
ಈಗ ಸಧ್ಯಃ ಬಾಯಿಗೆ ಬೀಗ ಹಾಕೋಣ!
" ಶ್ರೀಕೃಷ್ಣಂ ವಂದೇ ಜಗದ್ಗುರುಂ"

ಆರ್.ಎಂ.ಶಮ೯.
ಮಂಗಳುರು.

0 comments:

Post a Comment