ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


"ಕೆಲಸ"-ಕಾಯಕ-ಕಮ೯ ಹೀಗೆಲ್ಲಾ ಹೇಳುವಾಗ ಸತ್ಯಕ್ಕೂ ಇಂದ್ರಿಯಗಳ ಬಳಕೆ ಖಂಡಿತ ಬುದ್ಧಿ-ಅಲ್ಲ ಎಂಬ ಹಿಮಾಲಯದ ಎತ್ತರದ ವ್ಯಾಖ್ಯಾನ ಸವ೯ವಿದಿತ-ಮತ್ತು ಸವೇ೯ಸಾಧಾರಣವಲ್ಲವೇನು?
ಇರಲಿ,ಲೋಕದಲ್ಲಿ ಯಾರೂ-ಯಾವಾಗಲೂ-ಎಲ್ಲೆಲ್ಲೂ ಪ್ರತಿಪಾದಿಸುವ ಒಂದೇ-ಏವಮೇಕ-ಸಿದ್ಧಾಂತ ಬುದ್ಧಿ ಅದೇ ಪರಾತ್ಪರದ ದೇಣಿಗೆ,ಕೆಲಸ ಯಾರೂ ಮಾಡುವ-ಮಾಡಬಹುದಾದ ಬೆಲೆಯಿಲ್ಲದ ಚಟುವಟಿಕೆ ಇದೇ ನಿತ್ಯ-ಸತ್ಯ-ಪಥ್ಯ!
ಒಂದೊಮ್ಮೆ, ಕಾಯಕವೇ ಉತ್ತುಂಗದ ಸಂಗತಿಎನಿಸಿದರೆ ಆ ನಿಟ್ಟಿನ ಜೀವಗಳಿಗೆ-ಜೀವಿಗಳಿಗೆ ಅಗ್ರತಾಂಬೂಲ ಎಕಿಲ್ಲ-ಏಕಿರಬಾರದು-ಎಕಿರಸಲ್ಪಡಬಾರದು?

ಒಂದೇ ಉತ್ತರ-ಮೋಕ್ಷಕ್ಕೆ ಹಕ್ಕುದಾರ-ದಾರಿಣಿ-ಬುದ್ಧಿಯಜನ!
ಹಾಗಿಲ್ಲವಾದರೆ-ದನ-ಪಶು-ತಿಳುವಳಿಕೆಇಲ್ಲದ ವೈಷಿಷ್ಟ್ಯ,
ಧನ-ಬುದ್ಧಿಗೆ ಹೊರತಾಗಿಯೂ-ಲಕ್ಷ-ಲಕ್ಷ ಉದಾಹರಣೆಗಳಿಂದ ಸಿದ್ಧಪಡಿಸಬಹುದಾದ ತೀಮಾ೯ನ ಇವೆಲ್ಲಾಪರಮಾತ್ಮ ಪ್ರಾಪ್ತಿಗೆ ಮಾಗ೯ವೇ ಎಂದರೆ ಇಲ್ಲಾ ಎಂಬುದೇ ಇತಿಹಾಸವು.
ಬುದ್ಧಿಮಾಡುವುದಾದರೂ-ಅದರ ಪ್ರತ್ಯಕ್ಷಕ್ಕೆ ಕಮ೯ವೇಬೇಕು!
ಕೆಲಸ-ಖಂಡಿತವಾಗಿಯೂ ನೋಡಬಹುದಾದ-ಕೇಳಬಹುದಾದ-ಮುಟ್ಟಬಹುದಾದ ಹೀಗೆ ಪಂಚೇಂದ್ರಿಯಗಳ ಸರದಾರ-ಸರಿದಾರಿ-ಬರೋಬ್ಬರಿ!
ಮಹಾಭಾರತಯುದ್ಧ-ಕಿತ್ತಾಟ-ಕಿರುಚಾಟ-ಕಾದಾಟ-ತಿರುಚಾಟಾ ಹಿಗೇ ಇನ್ನೂ ಏನೇನೋ ಬಾಹ್ಯಕ್ಕೇ ಗೋಚರಿಸುವ-ಸದಾ ಆಚರಿಸುವ-ವ್ಯವಹಾರ-ವ್ಯಾಪಾರವೇ ಅಲ್ಲವೇ?
ಇಲ್ಲಿ ಬುದ್ದಿಯೇಪ್ರಧಾನ?
ಹೇಳಬಹುದು-ಜಾಣ್ಮೆ-ಕ್ಷಮತೆ -ಸಾಫಲ್ಯತೆ ಇವಕ್ಕೆಲ್ಲ ಬುದ್ಧಿಯೇ ತಳಪಾಯ ಎಂತ.
ಎಲ್ಲೆಲ್ಲೂ ಯವಾಗಲೂ ಎನನ್ನು ಮಾಡಬೇಕಾದರೂ-ಬುದ್ಧಿ-ಸಂಕಲ್ಪ-ಬದ್ಧತೆ ಹೀಗೆಲ್ಲ ಹೇಳಿ ನಿಜಕ್ಕೂ ಕೈಂಕಯ೯ಕ್ಕೆ ಕಿಮ್ಮತ್ತಿಲ್ಲದೇ ಆಯಿತೇ ವಿನಃ ಮತ್ತೇನಾಗಿದೆ?
ಕಮ೯ಯೋಗ-ಕಮ೯ಸಿದ್ಧಿ-ಕಮಿ೯ಷ್ತ ಹೀಗೆಲ್ಲ ಹೇಳಿದರೂ ತಿಳಿದವನು-ದವಳು-ಇದೇ ಪರಮಾತ್ಮನ ದಕ್ಕಿಗೆ-ಹಕ್ಕು ಉಳಿದದ್ದು-ಮುಕ್ಕು!
ಯಾರೂಕಮ೯ದಿಂದ ತಪ್ಪಿಸಿಕೊಳ್ಳಲಾರರು-ಹುಟ್ಟಿನಿಂದ ಸಾವಿನವರೆಗೆ ಎಂತ ಸ್ವಯಂ ಸ್ವಾಮಿಯೇ ಹೇಳಿದರೂ ಮತ್ತೆಲ್ಲಿಕಮ೯ದಿಂದಜಾರಿದ-ಜಾರುವ ಶತ್ರು?
ಕೆಲಸವೇ - ಕಳಶವಾದರೆ-ಕವಚವಾದರೆ ಏಕೆ ಎಲ್ಲ ಕೆಲಸಗಾರರೂ-ಕೆಲಸಗಾರಳೂ-ಧನ್ಯ-ಮಾನ್ಯ-ಸವ೯ಮಾನ್ಯರಾಗರು?
ಸ್ವಾರಸ್ಯ ಎಂದರೆ-ಆಸಕ್ತಿ-ಭಕ್ತಿ-ಯುಕ್ತಿ-ಶಕ್ತಿ ಹೀಗೆಲ್ಲ ಸಂಪನ್ಮೂಲಗಳನ್ನು-ಉಪಯೋಗಿಸಿ-ನಿಯೋಜಿಸಿ-ನಿಭಾಯಿಸಿ ಕಾಯಕ-ಹೇಳಿಕೇಳಿ ಇಂದ್ರಿಯಪ್ರಕ್ರಿಯೆ-ಪ್ರತಿಕ್ರಿಯೆಯೇ ಕೆಲಸದ ಆಂತಯ೯ವು-ವೀಯ೯ವು.
ಹಾಗಿರುವಾಗ ಕೆಲಸದಲ್ಲಿ-ಕೆಲಸದೈಲ್ಲದಿರುವಿಕೆ!
ಕೆಲಸಕ್ಕೆ ಸಂಕಲ್ಪದ-ಕಾಮದ-ಕಾಮ್ಯದ ಬೇಡಎನ್ನುವ ವಾದ ಎಣು?
ಖಾಚಿತ್ಯವಿಲ್ಲದೇ-ಪಾವಿತ್ರ್ಯ ಉಂಟೇ-ಇರಬಲ್ಲದೇ?
ಇಡೀ ಲೋಕಕ್ಕೆ ತಿಳಿದದ್ದು-ಮನಸ್ಸುಮಾಡಿ-ತೀಮಾ೯ನಮಾದಿ-ಆಣೆಮಾದಿ-ಪ್ರಮಾನಮಾದಿ ಇತ್ಯಾದಿಯಾಗಿ-ಸಂಕಲ್ಪ-ಬದ್ಧತೆ-ವ್ರತಕ್ಕೆಧಕ್ಕೆ ಬರದಂತೆಇರಲು ಸಾಧ್ಯ ಎಂಬಸತ್ಯವನ್ನು ಅಲ್ಲಗಳೆಯಲಾದೀತೇ? ಅಲ್ಲಗಳೆಯಬೇಕೆ?
ಪರಮಾತ್ಮನು ಅಜು೯ನನಿಗೆ ಹೇಳಿದ ಒಂದೇ ಮಾತು-ಕೆಅಸಮಾದು-ಕಾಮ ಬೇಡ-ಸಂಕಲ್ಪಬೇಡ ಎಂತ!
ಉದ್ದೇಶವೇ ಇಲ್ಲದೆ ಮತ್ತೆನಕ್ಕೆ ಅಸ್ತಿಭಾರ ಹಾಕುವುದು?
ಮಹಾಭಾರತದ ಯುದ್ಧ-ಯುದ್ಧಮಾದಿಸಿಯೇ ನೇಪಥ್ಯಕ್ಕೆ ಸರಿದ ಎಲ್ಲ ಸಂಗತಿಗಳೂ ಪೂವ೯ಸಂಕಲ್ಪದ ಫಲಶೃತಿಯೇ ಅಲ್ಲವೇನು?
ಕೆಲಸದಲ್ಲಿ ದೈವ ಕಾಣು,
ಕಾಯಕವೇ ಕೈಲಾಸ,
ಶಿವನನ್ನು ಮೀಮಾಂಸಕರು "ಕಮ೯"ಎನ್ನುತ್ತಾರೆ ಎಂತ ಸುಭಾಶಿತಕಾರ ಹೇಳುತ್ತಾನೆ
ಶಿವನೇ-ಸತ್ಯಂ-ಸುಂದರಂ-ಶಿವಂ ಎಂದಮೇಲೆಶಿವನ ಸಂಪಾದನೆ-ದೈವ ಸಾಕ್ಷಾತ್ಕಾರವು-ಸಂಕಲ್ಪವಿಲ್ಲದೇ ಪ್ರಾಪ್ತವಾಯಿತೇ-ವಾಗುವುದೇ?
ಅಥವಾ ತಾನಲ್ಲದೇ ಬೇರೆಯವರ ಸಂಕಲ್ಪಕ್ಕೆ ಹಾಕಿದ ಮಣೆಯೇ?
ಎಲ್ಲೆಲ್ಲೂ-ಯಾವಾಗಲೂ-ಎಲ್ಲರೂ-
ಹೇಳುವ ಒಂದೇ ಮತು-ದೈವ ಸಂಕಲ್ಪವೇ ಅಂತಿಮ ಏಂತ!
ಮನುಷ್ಯ ಕೆಲಸ-ಕಮ೯-ಕಾಯಕ ಇದಕ್ಕೆ ಸಂಕಲ್ಪ ಮಾಡಿದರೆ ಅಪಚಾರ!
ಪರಾತ್ಪರ ಮಾಡಿದರೆ ಸದಾಚಾರ!
ಇರಲಿ,
ಪರಾತ್ಪರ ಸಂಕಲ್ಪ ಮಾಡಿದ್ದೇ ಆದರೆ ಅದು ಯಾರಿಗೆ?
ಯಾರಪರವಾಗಿ?
ಯಾವಕಾರಣಕ್ಕಾಗಿ?
ಇವೆಲ್ಲ ಸಹಜ ಕೌತುಹಲಿಕ ಸಂಗತಿಗಳೇ-ತತ್ಪರ ಸಂಗತಿಗಳೆ?
ಒಂದೊಮ್ಮೆ ತಕ೯ಕ್ಕಾಗಿಯೇ ಸಂಕಲ್ಪ ದೈವ ಮಾಡಿದ್ದು ತನ್ನ ಸ್ವಂತಕ್ಕೇ ಎಂತಲೇಉಪಸಂಹಾರಮಾದಿದರೆ-
ಎಲ್ಲವೂ ಇರುವ ಪರ ದೈವಕ್ಕೇ ಮತ್ತೇನನ್ನೋ ತನ್ನದಾಗಿಸಿಕೊಳ್ಳಲು ಕಾತುರವೇ-ಅತುರವೇ-ಆವೇಗವೇ-ಆಮೋದವೇ?
ಎಂತಹ-ಪರಿಹಾಸ-ವಿಪಯಾ೯ಸ ಅಲ್ಲವೇ?
ಮಾತನಾದುವಾಗ-ಲೋಕದ ಸಹಮತ-ದೇವರುಮೆಚ್ಚುವಹಾಗೆ ಕೆಲಸ ಮಾಡಬೇಕು-ಮಾಡಿಸಬೇಕು ಎಂತೆಲ್ಲಾ ಎತ್ತರದ-ಗುಡುಗಿನ-ಗಡಗಡಿಸುವ-ಬಗ್ಗುಬದೆಯುವ "ವಾಕ್"
ಮೂರನೇ ಅಧ್ಯಾಯ ಮೂರನೇ ಕಣ್ಣುತೆರೆದರೂ-ಮರನೇಕಣ್ಣುತೆರೆದರೂ ಒಂದೇ ಸತ್ಯದ ಪ್ರತಿಪಾದನೆ ಬೇಕು-ಕಾಮ-ಕಾಮ್ಯದ ಸಾಧ್ನೆ-ಆದರೆ ಬೇಡದ--ತ್ಯಾಜ್ಯದ ವಾಸನೆ!
ಭೂಮಿಯಮೇಲೆ ಮನುಷ್ಯವಗ೯-ಗಂಡಸಿರಲಿ-ಹೆಂಗಸಿರಲಿ ಮಾಡುವಕೆಲಸ-ಕಾಯಕ-ಕಮ೯
ದೇವಲೋಕದಪ್ರಭುಗೆ ಸಂಪದಿಸಿಕೊಡಲು-ಕೈಂಕಯ೯!
ಬೇಕಾದವನಿಗೆ-ಹುಲುಮಾನವಜನಕ್ಕೆ ಬೇಡ!
ಬೇಡದ-ಎರೆಡು ರೀತಿಯ ಭಿಕ್ಷೆಕೇಳದ (ಬೇಡು) ಮತ್ತು ಸವ೯ಸಂಪತ್ಭರಿತ ಪರಾತ್ಪರಕ್ಕೆ ಭೂಮಿಯಿಂದ ರಫ್ತು!
ಯಾರು ಸುಸ್ತು?
ಯಾವುದು ಶಿಸ್ತು?
ಯಾವುದು ಶ್ರೀರಸ್ತು?
ಭಗವಂತನಮಾತು ಭಗವಂತನಿಗೇ ವೆದ್ಯವು-ಸಾಧ್ಯವು-ಸಾಧುವು-ನೈವೇದ್ಯವು!
ಸದಾ ಸಮಸ್ಯೆ-ದ್ವಂದ್ವ-ಪ್ರಶ್ನೆ ಇವೇ ಅಜು೯ನನ ಸಂಪತ್ತು!
ಅದರ ಪರಿಹಾರಕ್ಕೆ- ಹಗೂ ಪರಿಹಾರಕ್ಕೇನೆ ಪರಮಾತ್ಮನ ಮಾತು-ಪರಮಾಪ್ತನಿಗೆ!
ಮತ್ತೆ ಕೆದುಕುವ-ಕೆಣುಕುವ-ಕೆರಳಿಸುವ-ಅಣಕಿಸುವ ಸಂಧಿಗ್ದವಾದರೂ ಏಕೆ?
ಕಮ೯ ಮಾದು ಕಾಮ ಬೇಡ ಎಂದ ಪರಮಾತ್ಮನಿಗೇ ನಮ್ಮಪ್ರತ್ಯುತ್ತರವು-
"ತೇನ ವಿನಾ ತೃಣಮಪಿ ನ ಚಲತಿ"
ಸಂಕಲ್ಪ ಅಲ್ಪ-ಪ್ರಗಲ್ಭ ಎಲ್ಲಾ ಅವನಿಗೇ-ಅವನದೇ!
" ಶ್ರೀ ಕೃಷ್ಣಾಯ ತಸ್ಮೈ ನಮಃ"

- ಆರ್.ಎಂ.ಶಮ೯., ಮಂಗಳೂರು.

0 comments:

Post a Comment