ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ ಸುದ್ದಿ: ಮೂಡಬಿದಿರೆ(Moodbidri) ವರದಿ
ಆಳ್ವಾಸ್ ನುಡಿಸಿರಿಗೆ ಪೂರ್ವಭಾವಿಯಾಗಿ ಆಳ್ವಾಸ್ ಚಿತ್ರಸಿರಿ 2012 ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಮತ್ತು ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ನವೆಂಬರ್ 8ರಿಂದ 11ರ ತನಕ ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.ನವೆಂಬರ್ 8ರಂದು ಬೆಳಗ್ಗೆ 10.15ಕ್ಕೆ ಸರಿಯಾಗಿ ಮೂಡಬಿದಿರೆ ಜೈನ ಮಠದ ಶ್ರೀಶ್ರೀಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸಲಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ದ.ಕ.ಜಿಲ್ಲಾ ಸಂಚಾಲಕ ರಾಜೇಂದ್ರ ಕೇದಿಗೆ ಉಪಸ್ಥಿತರಿರುವರು.


ಒಟ್ಟು 20 ಮಂದಿ ರಾಜ್ಯದ ಕಲಾವಿದರು ಈ ಶಿಬಿರದಲ್ಲಿ ಪಾಲ್ಗೊಳ್ಳುವರು. ಚಂದ್ರಕಾಂತ ಬಾಗಲಕೋಟೆ, ಜೀವನ್ ಎ.ಎಸ್.ಮಂಗಳೂರು, ಪರಮೇಶ್ ಡಿ.ಜೋಲದ್, ಬಾಗಲಕೋಟೆ, ಹರೀಶ್ ಸಾಗಾ,ಕುಂದಾಪುರ, ಬಿ.ವಿ.ಕಾಮಾಜಿ, ಗುಲಬರ್ಗಾ, ದೇವೇಂದ್ರ ಎಮ್ ಬಡಿಗೇರ್ ಧಾರಾವಾಡ, ಶಹೆದ್ ಪಾಷಾ ಗುಲಬರ್ಗಾ, ವಿಶ್ವಕರ್ಮ ಆಚಾರ್, ಚಿಕ್ಕಮಗಳೂರು, ನಾಗರಾಜ್ ಕೆ.ಟಿ. ಮಂಗಳೂರು, ನವೀನ್ ಕುಮಾರ್ ಎ ಬೆಂಗಳೂರು, ಹರಿಪ್ರಸಾದ್ ಬಿ.ಎನ್.ತುಮಕೂರು, ಈರಣ್ಣ ದಂಡಿನ್ ಕೋಲಾರ, ಬಸವರಾಜ್ ಗವಿಮಠ್ ಬಾಗಲಕೋಟೆ, ಸಿ.ಡಿ.ಜಟ್ಟಣವರ್ ಹುಬ್ಬಳ್ಳಿ, ಶಿವಾನಂದ ಎಸ್.ಹೂಗಾರ್ ಗದಗ, ಅಭಿಲಾಶ್ ಡಿ. ಮೈಸೂರು, ಜಿ.ಎಮ್.ಹೆಗ್ಡೆ ಶಿರಸಿ, ಚಿತ್ರ ಆಚಾರ್ಯ ಉಡುಪಿ, ಆಶಾರಾಣಿ ನಡೋಣಿ ಬೆಳಗಾವಿ, ರಶ್ಮಿ ಟಿ.ಎನ್.ಬೆಂಗಳೂರು ಭಾಗವಹಿಸುವ ಕಲಾವಿದರು.

0 comments:

Post a Comment