ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಈ ಕನಸು .ಕಾಂ ವಿಶೇಷ ವರದಿ
ಬಾಣಲೆಯಿಂದ ಬೆಂಕಿಗೆ...ಇದು ನಮ್ಮ ಇಂದಿನ ವಿಶೇಷ ವರದಿ. ಪ್ಲಾಸ್ಟಿಕ್ - ಪ್ಲಾಸ್ಟಿಕ್...ಎಲ್ಲರ ಮುಂದಿರುವ ದೊಡ್ಡ ಸಮಸ್ಯೆ...ಇತ್ತೀಚೆಗೆ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ನಿಶೇದ ನಿಯಂತ್ರಣದ ಮಾತು ಕೇಳಿಬರುತ್ತಿದೆ.


ಆದರೆ ಇದು ನಿಜಕ್ಕೂ ಪರಿಸರದ ಮೇಲಣ ಪ್ರೀತಿ ಕಾಳಜಿಯ ದೃಷ್ಠಿಯಿಂದಲೇ...? ಅಥವಾ ಇನ್ಯಾವುದೋ ಷಡ್ಯಂತ್ರ ಈ ನಿಶೇದದ ನಡುವೆಯೂ ಇದೆಯೇ ಎಂಬ ಸಂಶಯ ಇದೀಗ ಎಡೆಮಾಡಿದೆ.

ರಾಜ್ಯ ಪುರಸ್ಕಾರ ಪಡೆದಂತಹ ನಿರ್ಮಲ ಗ್ರಾಮಗಳು, ಪುರಸಭೆಗಳು ಇಂದು ಸ್ವಚ್ಛಪರಿಸರದ ಹೆಸರಿನಲ್ಲಿ ಪ್ಲಾಸ್ಟಿಕ್ ನಿಶೇದದ ಕಾರ್ಯಕ್ಕೆ ಮುಂದಡಿಯಿಟ್ಟಿದೆ. ಒಂದು ಉತ್ತಮ ಪ್ರಯತ್ನ...ಪ್ಲಾಸ್ಟಿಕ್ ನಿಂದಾಗಿ ಪರಿಸರಕ್ಕೆ ತೀವ್ರ ತೊಂದರೆಯುಂಟಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಪರಿಸರ ಹಾಳಾಗುತ್ತದೆ. ಅದು ಮಣ್ಣಿನೊಂದಿಗೆ ಮಣ್ಣಾಗದೆ ಇಡೀ ಮಣ್ಣಿನ ಗುಣಮಟ್ಟ ಹಾಳು ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜೊತೆಗೆ ಇಡೀ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ.ಇದು ಕಳೆದ ಕೆಲವಾರು ವರುಷಗಳಿಂದ ಕೇಳಿಬರುತ್ತಿರುವ ಮಾತಾಗಿದೆಯಾದರೂ ಪರಿಸರಾಸಕ್ತರ ನಿರಂತರ ಪ್ರಯತ್ನದ ಫಲವಾಗಿ ಕೆಲವೊಂದು ಪ್ರದೇಶಗಳಲ್ಲಿ ಪ್ರಾಮಾಣಿಕವಾಗಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕೆಲವೊಂದು ಉತ್ತಮ ಕೆಲಸ ಕಾರ್ಯಗಳು ನಡೆದಿವೆ ಎಂಬುದನ್ನು ಮರೆಯುವಂತಿಲ್ಲ...


ಪ್ಲಾಸ್ಟಿಕ್ ಬದಲಿಗೆ ಕಾಗದ ಏಕಿಲ್ಲ...?
ಕಳೆದ ಸುಮಾರು ಒಂದೂವರೆ ದಶಕಗಳ ಹಿಂದಿನ ಸ್ಥಿತಿಯನ್ನೊಮ್ಮೆ ಅವಲೋಕಿಸಿನೋಡಿ...ಅದೂ ಕಷ್ಟಸಾಧ್ಯವಾದರೆ ನೆರೆಯ ಕೇರಳ ರಾಜ್ಯವನ್ನೊಮ್ಮೆ ಗಮನಿಸಿ.ಪ್ಲಾಸ್ಟಿಕ್ ಚೀಲಗಳ ಬದಲಾಗಿ ಕಾಗದದ ಪೊಟ್ಟಣಗಳನ್ನು ಬಳಸುವ ರೀತಿ ಎಷ್ಟೊಂದು ಅಚ್ಚುಕಟ್ಟು. ಇದರಿಂದಾಗಿ ಹಳೆಯ ಪತ್ರಿಕೆಗಳು ಈ ರೀತಿಯಲ್ಲಿ ಪೊಟ್ಟಣಗಳಾಗಿ ಬಳಕೆಯಾಗುತ್ತವೆ. ಬಳಕೆಯಾದ ಪೊಟ್ಟಣ ಪರಿಸರ ಸೇರಿದರೂ ಅದು ಮಣ್ಣಿನೊಂದಿಗೆ ಮಣ್ಣಾಗಿ ಹೋಗುತ್ತವೆ. ನೆರೆಯ ಕೇರಳ ರಾಜ್ಯದಲ್ಲಿ ಇಂದಿಗೂ ಕಾಗದದ ಪೊಟ್ಟಣಕ್ಕೆ ಪ್ರಮುಖ ಪ್ರಾಧಾನ್ಯತೆ ನೀಡಲಾಗುತ್ತದೆ. ಆದರೆ ಕರ್ನಾಟಕಕ್ಕೆ ಮಾತ್ರ ಪ್ಲಾಸ್ಟಿಕ್ ಯಾಕೆ ಅನಿವಾರ್ಯ ? ಇಲ್ಲೂ ಯಾಕೆ ಕಾಗದಗಳ ಪೊಟ್ಟಣ ಬಳಕೆಯಾಗುತ್ತಿಲ್ಲ...ಸರಕಾರ ಈ ನಿಟ್ಟಿನಲ್ಲಿ ಯಾಕಾಗಿ ಸಮರ್ಪಕ ನೀತಿ ಜಾರಿಗೊಳಿಸುತ್ತಿಲ್ಲ...???

ಪ್ಲಾಸ್ಟಿಕ್ ಬೇಡ... Nonwoven ಯಾಕೆ ಅನಿವಾರ್ಯ...?

ಇಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ, ಪುರಸಭೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕವರ್ ಗಳ ನಿಶೇದವಾಗಿದೆ.ಪ್ಲಾಸ್ಟಿಕ್ ಬದಲಾಗಿ Nonwoven ಫ್ಯಾಬ್ರಿಕ್ ಚೀಲಗಳ ಬಳಕೆಯಾಗುತ್ತಿದೆ. ಈ Nonwoven ಪ್ಯಾಬ್ರಿಕ್ ಚೀಲಗಳು ಪ್ಲಾಸ್ಟಿಕ್ ಚೀಲಗಳಿಂದಲೂ ಹಾನಿಕಾರಕ ಎಂಬ ಅಂಶ ಬಯಲಾಗುತ್ತಿದೆ. ಇದು ಪರಿಸರ ಸ್ನೇಹಿಯಲ್ಲ...ಮರುಬಳಕೆಯೂ ಅಷ್ಟೊಂದು ಸುಲಭವಲ್ಲ...ಆದರೂ ಈ ಚೀಲಗಳೇ ಇಂದು ಹೆಚ್ಚಿನ ಮುತುವರ್ಜಿಯಿಂದ ಖರ್ಚಾಗುತ್ತದೆಯಲ್ಲಾ...ಇದಕ್ಕೆ ಕಾರಣವೇನು...ಇದರ ಹಿಂದೆ ಏನಾದರೂ ಸ್ಪಷ್ಟ ಉದ್ದೇಶಗಳಿವೆಯೇ... ಇಲ್ಲೂ ಕಾಣದ ಕೈಗಳ ಕೈವಾಡವಿದೆಯೇ... ಒಟ್ಟಿನಲ್ಲಿ ಬಾಣಲೆಯಿಂದ ಬೆಂಕಿಗೆ ಎಂಬ ಗಾದೆಯಂತಾಗಿದೆ...ಈ ನಿಯಂತ್ರಣ ಪ್ರಹಸನ...


ಈ ಸುದ್ದಿ ಇಷ್ಟಕ್ಕೇ ಮುಗಿಯುತ್ತಿಲ್ಲ...ಇದು ಮೊದಲ ಕಂತು..ಇನ್ನೂ ಅನೇಕ ವಿಚಾರಗಳು ಸದ್ಯದಲ್ಲೇ ನಿರೀಕ್ಷಿಸಿರಿ...

- ಟೀಂ ಈಕನಸು.

1 comments:

ಯತೀಂದ್ರ.ಬಿ.ಎಚ್ said...

ಸಮಾಜಿಕ ಚಿಂತನೆಗಳ ಪ್ರತಿಫಲ ಸಮಾಜಮುಖಿ ಬ್ಲಾಗ್ http://samajamuki.blogspot.in/

Post a Comment