ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಬೆಂಗಳೂರು ವರದಿ

ಬೆಂಗಳೂರು : ವಿದ್ಯಾಸಂಸ್ಥೆಗಳು ಮಕ್ಕಳ ಪಾಲಿಗೆ ಅರಿವು ಹಾಗೂ ಆನಂದದ ಸಮಿಶ್ರಣವಾಗಿರಬೇಕು ಎಂದು ರಾಮ ಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ. ನಗರದ ಆರ್ ಪಿಸಿ ಲೇಔಟ್ ನಲ್ಲಿರುವ ಭಾರತೀ ವಿದ್ಯಾಲಯದ ದಶಮಾನೋತ್ಸವ ಹಾಗೂ ಹೊಸ ಬ್ಲಾಕ್ ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾಸಂಸ್ಥೆಗಳು ಅರಿವು ಹಾಗೂ ಆನಂದದ ಆಗರ ವಾಗಿರಬೇಕು. ವಿದ್ಯಾರ್ಥಿಗಳಿಗೆ ಕೇವಲ ಆನಂದ ದೊರಕಿದರೆ ಅವರು ದಾರಿ ತಪ್ಪುವ ಸಾಧ್ಯತೆಗಳಿವೆ. ಇದು ಜೀವನದ ಪತನಕ್ಕೆ ಹಾದಿಯಾಗುತ್ತದೆ. ಕೇವಲ ಅರಿವು ಮೂಡಿಸುವ ಪ್ರಯತ್ನ ನಡೆಸಿದರೆ ಅಂತಹ ಶಿಕಣ ಶುಷ್ಕವಾಗುತ್ತದೆ. ಆದ್ದರಿಂದ ಈ ಎರಡರ ನಡುವೆ ಸಮತೋಲನ ಕಾಪಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಮಗು ಎಂದೆಂದಿಗೂ ನಗುವಾಗಿರಬೇಕು. ಮಕ್ಕಳು ನಗುತ್ತಿದ್ದರೆ ಅವರ ಆತ್ಮ, ಅಂತರಾತ್ಮ ಅರಳುತ್ತದೆ. ಮಕ್ಕಳು ಎಂದೆಂದಿಗೂ ನಗುವಿನ ಚಿಲುಮೆಯಾಗಿರಲಿ ಎಂದು ಹಾರೈಸಿದರು.

ಡಾ|| ಸೀತರಾಮ್ ಪ್ರಸಾದ್, ಸಿ.ಹೆಚ್.ಎಸ್ ಭಟ್, ಜಿ.ಜಿ ಹೆಗಡೆ, ಎಮ್.ಎನ್ ಭಟ್ ಮುಂತಾದವರು ಉಪಸ್ಥಿತರಿದ್ದರು.

0 comments:

Post a Comment