ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ - ಮೂಡಬಿದಿರೆ ವರದಿ
ಮೂಡಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧವಾಗಿದೆ. ಇದರಿಂದ ಮೀನು ವ್ಯಾಪಾರಿಗಳು ಕೊಂಚ ತೊಂದರೆ ಅನುಭವಿಸುತ್ತಿದ್ದಾರೆ. ಮೀನು ವ್ಯಾಪಾರಿಗಳು ಮೀನುಗಳನ್ನು ಗ್ರಾಹಕರಿಗೆ ನೀಡಲು ಕಪ್ಪುಬಣ್ಣದ ಕಡಿಮೆ ದರ್ಜೆಯ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿದ್ದರು. ಈ ಪ್ಲಾಸ್ಟಿಕ್ ಚೀಲಗಳೇ ದೊಡ್ಡ ಮಟ್ಟದಲ್ಲಿ ತ್ಯಾಜ್ಯವಾಗಿ ಇಡೀ ಪರಿಸರವನ್ನು ಕಾಡುತ್ತಿದ್ದವು. ಆದರೆ ಮೂಡಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಖಡ್ಡಾಯ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿದ್ದೇ ತಡ ಮೀನು ವ್ಯಾಪಾರಿಗಳು ತಲೆಕೆಡಿಸಿಕೊಳ್ಳುವಂತಾಯಿತು. ಇದಕ್ಕಾಗಿ ಮೂಡಬಿದಿರೆ ಪುರಸಭೆಯ ಮುಖ್ಯಾಧಿಕಾರಿಗಳು ಇದೀಗ ಹೊಸ ತಂತ್ರವೊಂದನ್ನು ರೂಪಿಸಿದ್ದಾರೆ. ಮಳೆಗಾಲದಲ್ಲಿ ಬಳಸುವ ಕೊಡೆಗಳ ಬಟ್ಟೆ ಇದೆಯಲ್ಲಾ ಆ ಬಟ್ಟೆಯನ್ನೇ ಬಳಸಿ ಮೀನು ವ್ಯಾಪಾರಿಗಳಿಗಾಗಿ ಕನಿಷ್ಠ ವೆಚ್ಚದಲ್ಲಿ ಸುಂದರ ಚೀಲಗಳನ್ನು ಒದಗಿಸುವ ಹೊಸ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ. ಇದರ ತಯಾರಿಕೆಗಾಗಿ ಸಂಘಟನೆಯೊಂದನ್ನು ಸಂಪರ್ಕಿಸಿಯೂ ಆಗಿದೆಯಂತೆ... ಇನ್ನು ಈ ಚೀಲಗಳು ಮಾರ್ಕೆಟ್ ಗೆ ಲಗ್ಗೆಯಿಟ್ಟದ್ದೇ ಆದಲ್ಲಿ ಮೀನು ವ್ಯಾಪಾರಿಗಳಮುಖದಲ್ಲಿ ಮಂದ ಹಾಸ ಮೂಡಬಹುದು...

0 comments:

Post a Comment