ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಮೂಡಬಿದಿರೆ(Moodabidri) ವರದಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನವಂಬರ 16, 17, 18ರಂದು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ 2012'ರಲ್ಲಿ ಪುಸ್ತಕ ಮಾರಾಟ ಮಾಡಲು ಬಯಸುವ ಸಂಘ ಸಂಸ್ಥೆಗಳಿಂದ ಪ್ರವೇಶ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕನ್ನಡ ಮನಸ್ಸು : ಜನಪರ ಚಳವಳಿಗಳು ಎಂಬ ಮುಖ್ಯ ಪರಿಕಲ್ಪನೆಯಡಿ ಜರಗುವ ಈ ವರ್ಷದ ಆಳ್ವಾಸ್ ನುಡಿಸಿರಿಯ ಆಧ್ಯಕ್ಷತೆಯನ್ನು ಡಾ. ಕೆ.ಸ್. ನಿಸಾರ್ ಅಹಮ್ಮದ್ ವಹಿಸಲಿದ್ದು ಡಾ. ಯು.ಆರ್. ಅನಂತ ಮೂರ್ತಿ ಉದ್ಘಾಟಿಸಲಿದ್ದಾರೆ. ಮೂರು ದಿನ ನಡೆಯಲಿರುವ ಈ ಸಮ್ಮೇಳನದಲ್ಲಿ ನಾಡಿನ ಹಿರಿಯ ವಿದ್ವಾಂಸರು, ಖ್ಯಾತ ಕವಿಗಳು, ಸಾಹಿತಿಗಳು ಭಾಗವಹಿಸಲಿದ್ದಾರೆ. ನಾಡಿನ ಉದ್ದಗಲ ಸುಮಾರು 20 ಸಾವಿರಕ್ಕೂ ಅಧಿಕ ಸಾಹಿತ್ಯಾಸಕ್ತರು, ವಿದ್ಯಾಥರ್ಿಗಳು ಭಾಗವಹಿಸಲಿದ್ದಾರೆ. ಈ ಸಮ್ಮೇಳನದ ಅಂಗವಾಗಿ ನಡೆಯುವ ಪುಸ್ತಕ ಮೇಳದಲ್ಲಿ ವಿಶ್ವವಿದ್ಯಾಲಯದ ಪ್ರಸಾರಾಂಗಗಳು, ವಿವಿಧ ಪ್ರಕಾಶಕರು, ಅಕಾಡೆಮಿಗಳು ಮತ್ತಿತರ ಮಾರಾಟಗಾರರು ಮಳಿಗೆಗಳನ್ನು ನೋಂದಾಯಿಸಬಹುದಾಗಿದೆ.

ನೋಂದಾಯಿಸಲು ಬಯಸುವವರು ನವಂಬರ 5 ರೊಳಗೆ ಮಳಿಗೆ ಒಂದಕ್ಕೆ ರೂ.500/- ನ್ನು 'ಆಳ್ವಾಸ್ ನುಡಿಸಿರಿ' ಹೆಸರಿಗೆ ಡಿ.ಡಿ. ಮಾಡಿ ವಿವರಗಳನ್ನು 'ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ), ಮೂಡುಬಿದಿರೆ - 574227' ವಿಳಾಸಕ್ಕೆ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08258-261229 ಅಥವಾ 9448625877 ನ್ನು ಸಂಪರ್ಕಿಸಬಹುದು.


0 comments:

Post a Comment