ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಕುಂದಾಪುರ ವರದಿ
ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ ಕಮಲಶಿಲೆ ಇಲ್ಲಿ ಅ.16ರಿಂದ 24ರ ತನಕ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಅ.16ರಿಂದ 23ರ ತನಕ ಪ್ರತಿದಿನ ತ್ರಿಕಾಲ ಪೂಜೆ, ನವರಾತ್ರಿ ವಿಶೇಷ ಪೂಜೆ,ಮಹಾಪೂಜೆ, ಸುತ್ತುಬಲಿ, ಅ.20ರಂದು ರಾತ್ರಿ ಶಾರದಾ ದೇವಿ ಪ್ರತಿಷ್ಠಾಪನೆ, ವಿಶೇಷ ಪೂಜೆ, 23ರಂದು ಮಧ್ಯಾಹ್ನ ಚಂಡಿಕಾ ಹವನ , ರಾತ್ರಿ ರಥೋತ್ಸವ, 24ರಂದು ಉದಯಕ್ಕೆ ಕದಿರು ಮುಹೂರ್ತ, ಕಣಜ ತುಂಬುವುದು, ಮಧ್ಯಾಹ್ನ ದಶಮಿ ಪೂಜೆ, ವಿಜಯೋತ್ಸವ, ಸಂಜೆ ದಶಮಿ ಉತ್ಸವ, ರಥೋತ್ಸವ ನಡೆಯಲಿದೆ. ಪ್ರತಿದಿನ ಸಂಜೆ 6ರಿಂದ 8ರ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಚಂಡಿಕಾಯಾಗ ಮತ್ತು ಸಂಜೆ ಶ್ರೀರಂಗ ಪೂಜಾ ಮತ್ತು ರಾತ್ರಿ ಬೆಳ್ಳಿ ರಥೋತ್ಸವ ಸೇವೆ ಅನ್ನಸಂತರ್ಪಣೆ ಸೇವೆ ನಡೆಯಲಿದೆ.

0 comments:

Post a Comment