ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ನಾವು ಹೀಗೆ ಹೇಳಿದ್ದೇ ತಡ ಭಗವದ್ಗೀತೆಯನ್ನು ಅರೆದು ಕುಡಿದು ಅರಗಿಸಿಕೊಂಡಿರುವ ಭ್ರಮೆಯ ಸಂಭ್ರಮಶೀಲರು ನಮ್ಮನ್ನು ಮುತ್ತಿದರು-ಮುಕ್ಕಿದರು-ಕುಕ್ಕಿದರು!ಆದರೆ, ನಾವುಕೇಳಬೇಕೆ ಈ ಬಾಬಿನ ಆಭ೯ಟ-ಅಟಾಟೋಪ!ನಮ್ಮ ದೃಷ್ಟಿಯಲ್ಲಿ ಇವರು ಆಧ್ಯಾತ್ಮಿಕದಲ್ಲಿ ಟೋಪಿಹಾಕುವ ಮಂದಿ-ಕಾರಣ ಜನ ಎಂದರೆ ಮಂದಿಯಲ್ಲ-ಮಂದೆ ಎಂಬ ಹುಂಬರು!

ನಾವೀಗ ಚುಟುಕಾಗಿ-ಚುರಕಾಗಿ ಜಿಞ್ನಾಸೆಗೆ ಚುನಾಯಿಸಿದ ಮಹಾಭಾರತದ-೧೮ ದಿನಗಳ ಯುದ್ಧ-ತದ್ವಿರುದ್ಧ-ಕೃದ್ಧನಾದ-ಸವ್ಯಸಾಚಿ ಎಂಬ ಮರೆಮಾಚಿದ-ನಾಚಿಕೆ ಇಲ್ಲದ-ನಾಲಿಗೆ ಇಲ್ಲದ-ತಥಾಕಥಿತ ತ್ರಿಲೋಕವೀರ-ಅಜು೯ನನ ಬಗೆಗೇ!
ಮಹಾಭಾರತದ ಯುದ್ಧದ ನೇಪಥ್ಯದಲ್ಲಿ-ಶ್ರೀ ಕೃಷ್ಣನ ರಾಯಭಾರ-ಭಾರವಾಗದೆ-ಭರವಾಗಿ ಸಾಗಿತು-ಕಾರಣ-ದ್ರೌಪದಿ ಎಂಬ ಸ್ತ್ರೀ ಶಕ್ತಿಯ-ಯುಕ್ತಿ-ಉಕ್ತಿ!


ಇಲ್ಲಿ ರಣರಂಗಕ್ಕೆ ಮೊದಲೇ-ರಂಗ-ರಂಗು-ಹಂಗು-ಭಂಗಿ -ಭಂಗ-ಸಂಘ ಎಲ್ಲ ಪರಾತ್ಪರದ ತತ್ಪರತೆ ಎಂಬುದೇ ಭರತವಾಕ್ಯ!
ತನಗೆ ತಾನೆ ತೀಮಾ೯ನಿಸಿ, ಕೆಲವೋಮ್ಮೆ ಮತ್ತಾರಿನ್ನಾರನ್ನೋ,ಮತ್ತಿನ್ನೇನನ್ನೋ ಜಯಿಸಲು-ಹುಯಿಲೆಬ್ಬಿಸಲು ಬೊಬ್ಬೆ ಹಾಕಿದ ಹತ್ತು ಹಲವು ಬಿರುದಾಂಕಿತ ಕಿರೀಟಿಗೆ ಕಿರೀಟದ ಐತಿಹ್ಯ ಮಂಕಾಯಿತೇನು?
ದ್ರೌಪದಿಗೆ-ಹೆಂಡತಿಗೆ-ದುಸ್ಶಾಸನಿಂದ ಅಪಮಾನಿತವಾದ ಹೆಂಗಸಿಗೆ ಬೇಕೆನಿಸಿದ ಯುದ್ಧ-ಹೆಂಡತಿಗೆ ಸೀರೆ ಎಳೆದಾಗ ಬೇಡದ-ಬೆಂಡಾದ-ಭಂಡ ಗಂಡರಲ್ಲಿ-ಶೇ೨೦ (೨೦%)-೫ ಜನ ಗಂಡರಲ್ಲಿ ಒಬ್ಬನಾದ ಈ ಬಿಲ್ಗಾರನಿಗೆ ಗಲ್ಲು-ಗುಲ್ಲು-ಹುಲ್ಲು ಎನಿಸಿತೇನು?
ಮಹಾಭಾರತದ ಯುದ್ಧಕ್ಕೂ ಮೊದಲು ಮಾಡಿದ-ಮಾಡಿಸಿದ ಯುದ್ಧಗಳಲ್ಲಿ ಉಂಟುಮಾಡಿದ ಸಾವು ನೋವು ಲೆಕ್ಕಕ್ಕೆ ಬರಲಿಲ್ಲ!
ಮಹಾಭಾರತದ ಯುದ್ಧದಲ್ಲಿ ಆಪ್ತರು-ಸಂಬಂಧಿಗಳು-ಕರುಳಿನವರು-ಒಲವಿನವರು-ಸೋದರ ಸಂಬಂಧಿಗಳು ಇವೆಲ್ಲಾ ತಲೆಯ್ರೆತ್ತಿದವು-ತಲೆಕೆಡಿಸಿದವೇನು?
ಯುದ್ಧ-ಯೋಧ-ಗೆಲವು ಇದಕ್ಕೆ ಹೊರತಾದವು-ರಣರಂಗಕ್ಕೆ ತಕ್ಕವೇ-ಅಥವಾ ಇದ್ದರೆ-ಠಕ್ಕರೇ?
ಕನ್ನಡದ ಗಾದೆ-"ಸಮರದೋಳ್ ಸೋದರಮಾವನೇ"-
ಅಥಾ೯ತ್
ಯುದ್ಧ ಯುದ್ಧವೇ ವಿನಃ-ರಕ್ತ ಸಂಬಂಧವಿಲ್ಲ-
ಆದರೆ ಖಂಡಿತವಾಗಿಯೂ ರಕ್ತಪಾತವಿದೆ!
ಒಂದೊಮ್ಮೆ ಯಾದರೂ ಶ್ರೀಕೃಷ್ಣ-ಪರಮಾಪ್ತ-ಪರಮಾತ್ಮ-
ಅಜು೯ನನ್ನು ಈ ಮಹಾಭಾರತದ ಯುದ್ಧಕ್ಕೆ ಮೂಗುಮುರಿಯುತ್ತಿರುವುದು ಏಕೆ ಎಂತ ಪ್ರಶ್ನಿಸದಿರುವುದರಲ್ಲಿ ಔಚಿತ್ಯವಿದೆಯೇ-ಔನ್ನತ್ಯವಿದೆಯೇ?
ಸಹಜ ಪ್ರಶ್ನೆಗಳಿಲ್ಲದ-ಯುದ್ಧಭೂಮಿಯಲ್ಲಿ ಮತ್ತೇನೋ ಭೂಮಿಕೆಯ-ಭೌಮದ-ಭ್ರಮದ-
ಸಂಭ್ರಮವೇ ಅಲ್ಲವೇನು-ಶ್ರೀ ಭಗವದ್ಗೀತೆ?
ಕೋಪೀನ ಸ್ನೇಹಿತನಾದ-ಶ್ರೀ ಕೃಷ್ಣನ ಒಡನಾಡಿ-ಒಡ್ಡನೇ-ಅದ್ದದಾರಿಹಿಡಿದವನೇ-ರಡ್ಡುಸಾಧಿಸಿದವನೇ-
ಈ ಎಲ್ಲಾ ಜಿಡ್ಡುಗಳಿಗೆ-ಜಡ್ಡುಗಳಿಗೆ-ಗುಳಿಗೆ-ಗಳಿಗೆ-
ವಿಶ್ವರೂಪದಶ೯ನದಿಂದಲೇ-ಸ್ಪಶ೯ಪಡೆಯಬೇಕಾಗಿ ಬಂದದು-
"ಸದೈವವೇ-ಸುದೈವವೇ-ದುದೈ೯ವವೇ"
ಅದನ್ನೇ-
"ಯಃ ಪಶ್ಯತಿ-ಸಃ ಪಶ್ಯತಿ "
ಎನ್ನುತ್ತಾ ನಾವು ಈಗ ಉಪಸಂಹಾರ ಮಾಡುತ್ತೇವೆ!

1 comments:

Shankara Bhat said...

ರಾಮಾಯಣ,ಮಹಾಭಾರತಗಳು,ಶ್ರೇಷ್ಠಮಟ್ಟದ ಸಾಹಿತ್ಯಗಳು(ಮಹಾಕಾವ್ಯಗಳು).ಭಗವವದ್ಗೀತೆ ಉತ್ತಮ ಮಟ್ಟದ ರಾಜನೀತಿ,ಆಧ್ಯಾತ್ಮ ಚಿಂತನಾ ಗ್ರಂಥ.ಇವುಗಳಲ್ಲಿ ಬರುವ ಪಾತ್ರಗಳು ಮನುಷ್ಯ ಸಹಜ ದೌರ್ಭ್ಯಲ್ಯ,ಔನ್ನತ್ಯಗಳನ್ನು
ಹೊಂದಿರುವ ಪ್ರತಿಮೆಗಳು,ಹಾಗಿರುವಾಗ ಆ ಪಾತ್ರಗಳನ್ನು 'ಪಾತ್ರ'ಗಳಾಗಿಯೇ ನೋಡಿ ವಿಮರ್ಶೆ ಮಾಡಬೇಕು,ಹೊರತಾಗಿ ನಮ್ಮ ದೃಷ್ಠಿಕೋನದಿಂದ ನೋಡಿ ಅದುಸರಿಯಲ್ಲ,ಆ ಪಾತ್ರ ಹೀಗಿರಬೇಕಿತ್ತು,ಎನ್ನುವುದು ಸರಿಯೇ?.ಒಂದು ಸಾಹಿತ್ಯ ಕೃತಿಯಲ್ಲಿ ಬರುವ ಪಾತ್ರಗಳು,ಘಟನೆಗಳು,ಆ ಸಾಹಿತಿಯ(ಕವಿಯ)ಸೃಷ್ಠಿ,ಅದರ ಹೊಣೆ ಆತನದು ಅದು ನಾವು ಹೇಳುವಂತೆ,ನಮ್ಮ ಕಲ್ಪನೆಗೆ ಸರಿ ಹೊಂದಬೆಕಾಗಿಲ್ಲ,ಅಲ್ಲವೇ?

Post a Comment