ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಬೇಡ್ತಿ ತೀರದಲ್ಲಿ ಕರಾಳ ರಾತ್ರಿಯಲ್ಲಿ ಉಸಿರಾಟದ ಸದ್ದು... ಕಣ್ಣು ಕೋರೈಸುವ ಪ್ರಖರ ಬೆಳಕು... ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಎರಡು ಆಕೃತಿಗಳು ಓಡಿದ್ದಾದರೂ ಏಕೆ...ಹಾಗಾದರೆ ಬೇಡ್ತಿ ತೀರದಲ್ಲಿ ನಿಜಕ್ಕೂ ದೆವ್ವಗಳ ಕಾಣ ಇದೆಯೇ...? ಅಥವಾ ಹಣದ ಆಸೆಗೆ,ದರೋಡೆಕೋರರು ಈ ಕೃತ್ಯ ಮಾಡುತ್ತಿದ್ದಾರೆಯೇ...? ಇಂತಹ ಪ್ರಶ್ನೆ ಕಾಡುವುದು ಸಹಜ...ತಂಪಾದ ಗಾಳಿ, ಮೈ ನಡಗಿಸುವ ಚಳಿ, ಆಗಷ್ಟೆ ಆರಂಬವಾದ ತುಂತುರು ಹನಿ. ಮರಳಿನಲ್ಲಿ ಕಂಡುಬರುವ ಪಾದದ ಅಚ್ಚು, ಪದೇ ಪದೇ ಕೇಳುವ ಕೈ ಬಳೆಯ ಸದ್ದು, ದೂರದಲ್ಲಿ ಪುಟ್ಟನೆ ಉರಿಯುವ ಪುಟ್ಟ ದೀಪ, ಅದು ದೀಪವಲ್ಲ ಮೊಂಬತ್ತಿಯ ಬೆಳಕು.... ಮೊಂಬತ್ತಿಯೂ ಅಲ್ಲ ವಿದ್ಯುತ್ ದೀಪ... ವಿದ್ಯುತ್ ದೀಪವಾಗಿದ್ದರೆ ಇನ್ನಷ್ಟು ಪ್ರಕರವಾಗಿರುತ್ತಲಿತ್ತು ಹಾಗಾದರೆ ಅದು ಮೊಬೈಲ್ನ ಬೆಳಕಿರಬೇಕು....

ದೆವ್ವಗಳು ಮೊಬೈಲ್ ಬಳುಸುತ್ತವಾ..? ಇಂಥಹದೊಂದು ಪ್ರಶ್ನೆ ಹುಟ್ಟಿಕೊಂಡಿದ್ದು 21ರ ರಾತ್ರಿ ಬೇಡ್ತೀ ತೀರದಲ್ಲಿ. ದೂರದಲ್ಲೊಂದು ಪುಟ್ಟ ಬೆಳಕು ಮಿನುಗುತ್ತಲಿತ್ತು. ಅದು ಹಣತೆಯಂತೂ ಅಲ್ಲ, ಎಣ್ಣೆ ಬಳಸಿ ಅಂಟಿಸಿದ ದೀಪವೂ ಅಲ್ಲ. ವಿದ್ಯುತ್ ದೀಪವಂತೂ ಅಲ್ಲವೇ ಅಲ್ಲ. ಅದೊಂದು ಮೊಬೈಲ್ನ ಬೆಳಕು. ದೆವ್ವಗಳು ಮಾತನಾಡುತ್ತವೆ ಅಂದ್ಮೆಲೆ ಮೊಬೈಲ್ ಬಳಸುವದೇನು ತಪ್ಪಲ್ಲ ಬಿಡಿ. (ಹಾಗಾದರೆ ಅವು ಮೊಬೈಲ್ಗೆ ಕರೆನ್ಸಿ ಎಲ್ಲಿ ಹಾಕಿಸುತ್ತವೆ.? ) ಚಳಿಯ ಹಿತ ಇನ್ನು ಜೋರಾಯಿತು. ಮಳೆ ನಿಂತರೂ ತೊಟ್ಟಿಕ್ಕುವ ಹನಿಗಳಿದ್ದವು. ದೂರದಲ್ಲಿ ಯಾರೋ ಮಿಸುಕಾಡುವ ಚಾಯೆಯೂ ಕಾಣುತ್ತಲಿತ್ತು. ಅಲ್ಲಿ ಯಾರೊ ಒಂದಿಬ್ಬರು ಇರುವ ಸ್ಪಷ್ಟತೆ ಎದ್ದು ತೋರುತ್ತಲಿತ್ತು.


ನನ್ನ ಬಳಿ ಲೋಡ್ ಮಾಡಿದ ಬಂದೂಕು ಇತ್ತು. ಜೇಬಿನಲ್ಲಿ 4ಗುಂಡುಗಳು ಇದ್ದರೂ ಸಹ ಒಂಥರಾ ಅಂಜಿಕೆ. ನಾಡಿದ್ದು ವಿಜಯ ದಶಮಿಯಂದು ಆ ಬಂದೂಕನ್ನು ಪೂಜೆಗೆ ಸಿದ್ದಪಡಿಸಬೇಕು, ಅದಕ್ಕೂ ಮುನ್ನ (ದೆವ್ವವನ್ನು)!!! ಬಲಿ ತೆಗೆದುಕೊಳ್ಳುವದೇ..?! ಎಂಬ ಯೋಚನೆ ತಲೆಯಲ್ಲಿ ಗುಂಗು ಹಿಡಿಸಿತ್ತು. ನಮ್ಮ ನಡಿಗೆ ಚುರುಕಾದಂತೆ ಆ ಮೊಬೈಲ್ನ ಬೆಳಕು ಇನ್ನಷ್ಟು ಹತ್ತಿರವಾಗುತ್ತಲೇ ಇತ್ತು. ಪೊದೆಗಳು ಅಲುಗಾಡುತ್ತಲಿದ್ದವು. ಕಾಡು ಪ್ರಾಣಿಗಳ ಕಿರುಚಾಟ ಹಾರಾಟ ಮುಗಿಲೆತ್ತರದಲ್ಲಿತ್ತು. ಕೆಲ ಪ್ರಾಣಿಗಳಂತೂ ಅತಿ ಹತ್ತಿರದಿಂದ ನುಸುಳಿಹೊದವು. ಅರಿವಿಗೆ ಬಾರದಂತೆ ಹಸಿರ ಹಾವೊಂದು ಕಾಲಡಿ ಜೀವಕಳೆದುಕೊಂಡಿತ್ತು. ಬಾನಿನಲ್ಲಿ ಕಪ್ಪು ಮೋಡದ ನಡುವೆ ಅಪರೂಪಕ್ಕೊಮ್ಮೆ ಕಾಣುವ ನಕ್ಷತ್ರದ ಮಿನುಗುತ್ತಲಿತ್ತು.

ನಮ್ಮಲ್ಲಿದದ್ದು ಮೌನ, ಬರಿ ಮೌನದೊಂದಿಗೆ ಒಂದಷ್ಟು ಹುಂಬು ದೈರ್ಯ ಮತ್ತು ಕುತೂಹಲ. ಈಗಾಗಲೇ ಸುಮಾರು ಒಂದು ಕಿ.ಮೀ ದೂರ ಕತ್ತಲೆಯಲ್ಲಿಯೇ ಹೆಜ್ಜೆಯಿಟ್ಟಾಗಿದೆ. ಮೊಬೈಲ್ನ ಬೆಳಕು ತೀರಾ ಹತ್ತಿರದಲ್ಲಿದೆ. ಅಲ್ಲಿನ ಪಿಸು ಮಾತುಗಳು ಸ್ಪಷ್ಟವಾಗಿ ಕೇಳುತ್ತಲಿದೆ. ಎದೆಯುಸಿರಿನ ಶಬ್ದ, ಮುಸುಕು ಛಾಯೆ ಸನೀಹದಲ್ಲಿಯೇ ಇದೆ. ಅಲ್ಲಿನ ಉಸಿರಿನ ವೇಗ ಹೆಚ್ಚುತ್ತಲಿದೆ. ಇದು ಅತೃಪ್ತ ಆತ್ಮದ ಉಸಿರಾಟದ ಸದ್ದು...!
ಮುಂದೆ ಚಲಿಸಲು ದೈರ್ಯವಿಲ್ಲ. ಹಿಂದೆ ಹೊರಳಲು ಮನಸಿಲ್ಲ. ಸುಮಾರು ಮುಕ್ಕಾಲು ಗಂಟೆ ಕಳೆದದ್ದೆ ತಿಳಿಯಲಿಲ್ಲ. ಅಂತೂ ದೈರ್ಯ ಮಾಡಿ ಬಂದೂಕಿನ ಗುಂಡನ್ನು ಗಾಳಿಯಲ್ಲಿ ಆಕಾಶದತ್ತ ಮುಖಮಾಡಿ ತೇಲಿ ಬಿಟ್ಟ ಸದ್ದಿಗೆ ಎರಡು ದೈತ್ಯಾಕಾರಗಳು ಓಡುತ್ತಿರುವದು ಮಾತ್ರ ಕಂಡುಬಂತು.
ಆಗಲೇ ಅರಿವಾದದ್ದು "ಇಲ್ಲಿ ಉಸಿರಾಡುವದು ಬರಿ ಅತೃಪ್ತ ಆತ್ಮಗಳಲ್ಲ... ಅತೃಪ್ತ ದೇಹಗಳು ಕೂಡ...!"
- ಅಚ್ಯುತಕುಮಾರ

0 comments:

Post a Comment