ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:36 AM

ದಸರಾ-ನವರಾತ್ರಿ

Posted by ekanasuಭಾರತದ ನೆಲದಲ್ಲಿ-ನೆಮ್ಮದಿಗೆ,ನಲ್ಮೆಗೆ ವಿಷೇಷ ನೆಲೆಉಂಟೆಂದರೆ ಎರಡಲಾದೀತೇ? ಏಕೆ ಆಡಬೇಕು ತಾನೆ?ಇರಲಿ, ಎರಡು-ಎಡರು ಇವೆಲ್ಲಾ ಸಾಮಾನ್ಯ ಜೀವನದಲ್ಲಿ ಸತ್ಯವೇ!
ಎಲ್ಲಾ ಎಡರು-ತೊಡರು ಇವನ್ನೆಲ್ಲಾ ಸರಿಪಡಿಸಲು ಹಾತೊರೆಯದವರು ಎಲ್ಲಿದ್ದಾರೆ-ಯಾಕಿರಬೇಕು?ದೈನಿಕ ಜೀವನದಲ್ಲಿ-ದೈವವನ್ನು ನೆನೆಯಲು-ಪಡೆಯಲು ವ್ಯವಧಾನವಿಲ್ಲದ್ದರಿಂದಲೇ ಅನೂಚಾನವಾಗಿ-ವ್ಯವಸ್ಥಿತವಾಗಿ-ಹಸಿತರಾಗಿ-ಹಿತವಾಗಿ ಆ ಅಪರಂಪಾರವಾದ ಶಕ್ತಿಗೆ-ವಿದ್ಯೆ-ಹಣ ಎಲ್ಲಾ ನೀಡಿ ಹೈರಾಣವಾಗುವುದನ್ನು ತಪ್ಪಿಸು ಎಂತ ಒಪ್ಪಿಸಿಕೊಳ್ಳುವುದೇ ಎಲ್ಲಾ ದೈವಗಳ ಆರಾಧನೆಯ ತಳ!


ತಳಕ್ಕೆ ತಳಮಳಬೇಡ ಎಂತಲೇ ತಾಳತಪ್ಪದೇ ಜೀವಗಳು ತಮ್ಮನ್ನೇ ಪರಾತ್ಪರಕ್ಕೆ ಒಪ್ಪಿಸಿಕೊಳ್ಳುವ ಉದಾತ್ತ ದಾನವೇ ಎಲ್ಲಾ ದಾನವತೆಯನ್ನು ಮೆಟ್ಟುವ ಪರಮಪಾದ!
ಒಂದೊಂದು ದಿನದ ಅಥಾ೯ತ್ ಒಂದುದಿನದ ಆಚರಣೆಯ ಹಬ್ಬಗಳು ಹೇರಳವಾಗಿವೆ!
ಅಲ್ಲಿ -ಇಲ್ಲಿ, ಆಗ-ಈಗ, ಕೆಲವೊಮ್ಮೆ ೨ ಅಥವಾ ೩ ದಿನಗಳ ಅವಧಿಯ ಹಬ್ಬಗಳಿಲ್ಲ ಎಂತೇನಿಲ್ಲ!
ಆದರೆ ಇಲ್ಲಿ ಸತ್ಯವಾಗಿಯೂ ತತ್ ಆಚರಣೆಯ-ದೈವದ-ದೈವಗಳ ಆರಾಧನೆಗೂ ಮೀರಿ, ಅವುಗಳ ವಿಸಜ೯ನಾ ವಿಧಿ-ವಿಧಾನಗಳೇ-ಸೂತ್ರಧಾರರು-ಇಲ್ಲಿ!
ಆ ಬಾಬಿಗೆ-ನಮ್ಮ ಕನಾ೯ಟಕದಲ್ಲಿ ಗಣಪತಿ/ಗೌರಿ ಹಬ್ಬ ಹೆಸರಿಸಬಹುದಾದ ಸಂಗತಿ ಉಂಟು.
ಮಹಾರಾಷ್ಟ್ರಕ್ಕೆ ಬಂದರೆ ಇದೇ ಗಣಪತಿ ಅಲ್ಲಿ-೩,೫,೧೦ (ಅನಂತನ ಚತುದ೯ಶಿವರೆಗೂ) ಪೂಜೆಗೊಳ್ಳುವುದು ಸವ೯ವೇದ್ಯವಲ್ಲವೇ?
ಪಂಜಾಬಿನಲ್ಲಿ-ಅಥವಾ ಸಿಖ್ ಜನಸಮುದಾಯದಲ್ಲಿ-ಕೆಲವು ಸಂತರ ಹುಟ್ಟುಹಬ್ಬವನ್ನು ವಾರಗಟ್ಟಲೇ ಆಚರಿಸುವುದಿಲ್ಲವೇನು?
ಇರಲಿ ದಸರಾ-ನವರಾತ್ರಿಯ ವೈಷಿಷ್ಟ್ಯ ಏನೆಂದರೆ-ಸಮಗ್ರ ಭಾರತದಲ್ಲಿ ಉತ್ತರದ ಕಾಶ್ಮೀರದಿಂದ-ದಕ್ಷಿಣದ ಕನ್ಯಾಕುಮಾರಿಯವರೆಗೆ,
ಪೂವ೯ದ ಬಂಗಾಲಾದಿಂದ ಪಶ್ಚಿಮದ ಗುಜರಾತಿನವರೆಗೆ ಯಾವತ್ತೂ ೯ ದಿನಗಳ ಆಚರಣೆಯೇ ಜೀವಾಳ!
ಉಳಿದೆಲ್ಲಾ ಹಬ್ಬಗಳಿಗಿಂತ ಇಲ್ಲಿ-ಏಕತೆ,ಏಕಾಗ್ರತೆ ಇವೇ ಪ್ರಧಾನವು.
ಹಾಗೆ ನೋಡಿದರೆ, ಸ್ವಾತಂತ್ರ ಪೂವ೯ದಲ್ಲಿ ಮಹನೀಯರಾದ ಭ್ಹಾಳ ಗಂಗಾಧರನಾಥತಿಲಕರು ಮಹಾರಾಷ್ಟ್ರದಲ್ಲಿ ಗಣಪತಿಹಬ್ಬವನ್ನು ಜನಸಮುದಾಯದ ಒಗ್ಗಟ್ಟಿಗೆ ದುಡಿಯಲು ರೂಪಿಸಿದರೆ,
ಆಳುವ ಮಹಾಸ್ವಾಮಿಗಳು-ರಾಜಮಹರಾಜರುಗಳು ದಸರಾ-ನವರಾತ್ರಿಯನ್ನು ದೇಶವನ್ನೇ ಒಗ್ಗೂಡಿಸಲು ಬಯಸಿ ಬಳಸಿದರು.
ಹಾಗಾಗಿ, ನವರಾತ್ರಿಯಲ್ಲಿ-ಶಕ್ತಿ ದೇವತೆಯಾದ ಮಹಾತಾಯಿಗೇ ಎಲ್ಲಾ ಆಚರಣೆಗಳೂ ಬದ್ಧವು.
ಮಹಾತಾಯಿಗೇ ಏಕೆ ಮೀಸಲು ಎಂದರೆ-ವಿದ್ಯೆ,ಹಣ, ಸಂತಾನ,ವಿಜಯ ಹೀಗೆ ಜೀವನದ ಜೀವಿಯ-ಲಿಂಗಾತ್ ಭೇದಮರೆತು ಎಲ್ಲಾ ಸೌಕಯ೯,ಐಶ್ವಯ೯,ಸೌಂದಯ೯ಕ್ಕೆ ಸ್ಪಂದಿಸುವ, ಸಂಧಿಸುವ ಸಕಲ ಗುಣಸಂಪನ್ನೆ-"ಚತುಃ ಷಷ್ಟಿ ಕಲಾಮಯೀ" ಎಂಬ ಮಹಿಮೆ ಉಂಟು.
ಚಚೆ೯ಗೇ ಬಂದರೆ, ಪರಮಾತ್ಮನೂ-ಪುಲ್ಲಿಂಗದ ಮೇರು-ಬೇರು ಬೆವರಿಳಸನೇನು-ಕಾರಣ ಅವನೂ-ಸಕಲ ಕಲಾ ವಲ್ಲಭಂ-ಚತುಃ ಷಷ್ಟಿ ಕಲಾ ಪ್ರಪೂಣ೯!
ಹೇಗೇ ನೋಡಲಿ, ಯಾರೇ ನೋಡಲಿ, ಎಲ್ಲಿಯೇ ನೋಡಲಿ-
ವಿದ್ಯೆ,ಲಕ್ಶ್ಮೀ,ಸಂತಾನ,ವಿಜಯ ಇಲ್ಲೆಲ್ಲಾ ಸ್ತ್ರೀ ವಿಜಯವೇ ಪ್ರಚಲಿತವಲ್ಲವೇನು?
ಹೀಗಿದ್ದರೂ,
ದಸರಾ-೧೦ನೆಯ ದಿನ-ವಿಜಯ ದಶಮಿಗೆ-ಗಂಡಸು-ರಾಮ ಅವನೇ ನಿಸ್ಸೀಮ!
ಗುಜರಾತಿನಲ್ಲಿಯೂ-ದಾಂಡಿಯ-ಕೋಲಾಟ-ರಾಧಾ-ಕೃಷ್ಣ ರ ಜೋಡಿಯಾಟಕ್ಕೇ ಮೆರಗು.
ಒಟ್ಟಿನಲ್ಲಿ, ಉತ್ತಮ ಜೀವನಕ್ಕೆ-ಪತಿ-ಪತ್ನಿ ಎಂಬಂತೆ-ದೇವ-ದೇವತೆಗಳ ಜೋಡಿಯೂ, ಜತೆಯೂ ಮೆಚ್ಚು-ನೆಚ್ಚು.
ನವಕ್ಕೆ-ನವವೂ-ನವೀನವೂ ಅಥ೯ವಿಲ್ಲವೇ?
ಹೊಸದು,ಒಂಭತ್ತು ಏಂದರೆ-ಒಂಭತ್ತಕ್ಕೇ ಏಕೆ ನಿಲುಗಡೆ ಎಂಬ ಪ್ರಶ್ನೆ ತೀರ ಸರಳವಲ್ಲವೇನು?
ಒಂಭತ್ತಕ್ಕೆ-ನವದ್ವಾರದ-ಈ ಮಾನವ ಜನ್ಮ-ಶರೀರಾತ್-ಶ್ರಮಿಸಿ,ನಮಿಸಿ ನಡೆಸುವ ಆಧ್ಯಾತ್ಮಿಕ ಕೈಂಕಯ೯ಗಳೂ ಎಂತಲೂ ಒಂದು ವಾದವಿದೆ!
ದೈವದ ಹೆಸರಿನಲ್ಲಿ,ಹಬ್ಬ-ಒಬ್ಬಟ್ಟು-ಹೊಸಬಟ್ಟೆ ಜತೆಗೆರಜಾದಿನಗಳ ಸಾಲೂ ಸಲ್ಲವೇನು?
ದೇವರ ಹೆಸರಿನಲ್ಲಿ ಮಾನವ ಜನಾಂಗ, ಹೂವಿನ ಜತೆ ನಾರೂ ಸ್ವಗ೯ಸೇರಿತು ಎಂಬತೆ-
ಹಬ್ಬದ-ಅಬ್ಬರಗಳನ್ನೇ ಬಂಡವಾಳ ಮಾಡಿಕೊಳ್ಳಲ್ಲಿವೇನು?
ಹಬ್ಬ ಸರಿ. ಹಬ್ಬದ-ಹೂರಣ-ಮಾರಣ-ರಣ ವಾಗದೇ-ರಮಣನಾದರೆ ಆಗದೇ?
ಪರಾತ್ಪರವೂ ಅಪೇಕ್ಷಿಸುವುದು-ಹಬ್ಬ ಕೊಬ್ಬಾಗದೇ-ಕಬ್ಬಾಗಲೀ-ಸಿಹಿಯಾಗಲೀ-ಬೆಲ್ಲವಾಗಿ-ಬಲವಾಗಿ-ಬಲ್ಲವರಾಗಿ-ಬೆರೆಯಲೀ ಎಂತಲೇ!
ಹಬ್ಬಗಳು ಬಂದವು-ಹೊದವು.
ಹುಬ್ಬೇರುವುದು ನಿಲ್ಲಲೇ ಇಲ್ಲ.
ಭಾರತದಲ್ಲಿ ವಷ೯ದ ೩೬೫ ದಿನಗಳಿಗೂ ಒಂದೊಂದು-ಗುರಿ-ಗುರು ಎಲ್ಲಾ ಇದ್ದದ್ದೇ.
ಆದರೂ ಮೈಮೇಲಿನ "ಕುರುವಿನಂತೆ" ಆದವೇ ವಿನಃ "ಕುರು" ಎಂದರೆ ಮಾಡು ಎಂತ ಮಾಡನ್ನು ಮುಟ್ಟಲೇ ಇಲ್ಲ.
ಈಗಂತೂ ಅಧ್ಯಾತ್ಮ-ಪರಮಾತ್ಮ-ಪರಮಾಪ್ತ.
ಇನ್ನಾದರೂ ಭಗವಂತನಿಗೆ ಪ್ರೀತಿ ಎಂತ ಭೀತಿ ಮಾಡದೇ -ಮಾಡಿಸದೇ-ರೀತಿ ಯಾದರೆ ಲಾಭವಲ್ಲವೇನು?
ಇನ್ನಾದರೂ ಹಬ್ಬಗಳು-ಪ್ರೀತಿಗಳ ಸೆಲೆಯಾಗಿ-ಜೀವನದ-
"ನವ ನೀತಿ-ನವನೀತ "
ಆದರೆ-ಆಗಿಸಲ್ಪಟ್ಟರೆ ಧನ್ಯತೆ-ಮಾನ್ಯತೆ ಆಗವೇನು?
ಪರಮಾತ್ಮ-ಪರಾ ಶಕ್ತಿ ಇವಕ್ಕೆ ಅವರ ಸೃಷ್ಟಿಗೆ-ತುಷ್ಟಿಯೇ-ಪುಷ್ಟವಲ್ಲವೇನು?
ಆಗ ಎಲ್ಲರೂ ಎಲ್ಲರನ್ನೂ ಎಲ್ಲೆಲ್ಲೂ ಯಾವಾಗಲೂ ಪ್ರೀತಿಸುವುದೇ-ಪೂಜೆಯಲ್ಲವೇನು?
ಶೃತಿ ಮಾತೇ ಹೇಳುತ್ತದೆ- "ಸಂತೋಷಂ ಜನಯೇತ್ ಪ್ರಾಜ್ನಃ ತದೇವ ಈಶ್ವರ ಪೂಜನಂ " ಏಂತ.
ನವರಾತ್ರಿಯೂ-ಪ್ರತಿರಾತ್ರಿಯನ್ನೂ-ರಾತ್ರಿ ಏಂಬ ಹೆಸರಿಗಾಗಿ ಕತ್ತಲಾಗಿಸದೇ, ಕುತ್ತಾಗಿಸದೇ-ಎಲ್ಲರಿಗು ಸಿಹಿ ತುತ್ತಾಗಿಸಲಿ!
ಯಾರೂ ಯಾರಿಗೂ ತೊತ್ತಾಗದೇ ,ಸೊತ್ತಾಗದೇ,
"ಸ್ವಸ್ತವಾಗಿರಲಿ "
"ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ "
"ಓಂ ಶಾಂತಿಃ ಶಾಂತಿಃ ಶಾಂತಿಃ "

ಆರ್.ಎಂ. ಶಮ೯, ಮಂಗಳುರು

0 comments:

Post a Comment