ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ : ಅರವಿಂದ ಚೊಕ್ಕಾಡಿ

ರಾಜ್ಯದ ಮೊರಾರ್ಜಿ ವಸತಿ ಶಾಲೆಗಳ ಶಿಕ್ಷಕರಿಗೆ 24 ಗಂಟೆಯೂ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಆದರೆ 8 ಗಂಟೆ ಕೆಲಸ ಮಾಡುವ ಹೈಸ್ಕೂಲ್ ಶಿಕ್ಷಕರಿಗೆ ಇರುವ ಭತ್ತೆಗಳು, ಗ್ರಾಚ್ಯುಯಿಟಿ, ಇ ಪಿ ಎಫ್, ಜಿ.ಪಿ.ಎಫ್ ಯಾವ ಸೌಲಭ್ಯವೂ ಇವರಿಗಿಲ್ಲ. ಹೈಸ್ಕೂಲ್ ಶಿಕ್ಷಕರಿಗೆ 75.25 ಶೇ. ತುಟ್ಟಿ ಭತ್ತೆ ಕೊಟ್ಟಾಗ ಮೊರಾರ್ಜಿ ಶಾಲೆಗಳ ಶಿಕ್ಷಕರಿಗೆ 69 ಶೇ. ತುಟ್ಟಿ ಭತ್ತೆ ಕೊಡಲಾಗುತ್ತದೆ! ಎಲ್ಲರಿಗೂ ಎಪ್ರಿಲ್ ನಿಂದ 6ನೆಯ ವೇತನ ಆಯೋಗ ಆಧಾರಿತ ವೇತನ ಅನ್ವಯವಾದರೆ ಮೊರಾರ್ಜಿ ಶಾಲೆಯ ಶಿಕ್ಷಕರಿಗೆ ಆಗಸ್ಟ್ ನಿಂದ ಅನ್ವಯವಾಗುತ್ತದೆ.
ಹೀಗೆ ಅನ್ವಯವಾಗುವುದು ಮೂಲ ವೇತನ ಮಾತ್ರ. ಇತರೆ ಭತ್ತೆ ಮತ್ತು ಸೌಲಭ್ಯಗಳಿಲ್ಲ. ಈಗಾಗಲೇ ಮರಿಸಿರುವ ಮೂವರು ಶಿಕ್ಷಕರ ಕುಟುಂಬಕ್ಕೆ ಅನುಕಂಪ ಆಧಾರಿತ ಉದ್ಯೋಗವಾಗಲೀ , ಗ್ರಾಚ್ಯುಯಿಟಿ ಸೌಲಭ್ಯವಾಗಲಿ ದೊರೆಯದೆ ಅನ್ಯಾಯ ನಡೆಯುತ್ತಿದೆ. ಆಶ್ಚರ್ಯವೆಂದರೆ ಹೈಸ್ಕೂಲ್ ಶಿಕ್ಷಕರಿಗೆ ದೊರೆಯುವ ಎಲ್ಲ ಸೌಲಭ್ಯಗಳೂ ಅದೇ ರೀತಿಯಲ್ಲಿ ಮೊರಾರ್ಜಿ ಶಾಲೆಗಳ ಶಿಕ್ಷಕರಿಗೆ ದೊರೆಯುವಂತೆ ಸಚಿವ ಸಂಪುಟದ ನಿರ್ಣಯ ಹೇಳಿದ ಮೇಲೆಯೂ , ಸ್ವತಃ ಸಮಾಜ ಕಲ್ಯಾಣ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರು ಸೂಚಿಸಿದ ಬಳಿಕವೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಮನಸೋ ಇಚ್ಛೆ ಶಿಕ್ಷಕರ ಸೌಲಭ್ಯಗಳನ್ನು ಕಡಿತಗೊಳಿಸುತ್ತಾರೆ ಮತ್ತು ಕೊಟ್ಟಿರುವುದನ್ನು ವಾಪಸ್ ಪಡೆಯಲು ಆದೇಶಿಸುತ್ತಾರೆ.

ಇದು ಖಾಯಂ ಶಿಕ್ಷಕರ ಪರಿಸ್ಥಿತಿಯಾದರೆ, ಕೆಲವು ಜಿಲ್ಲೆಗಳಲ್ಲಿ ಇದೇ ಶಾಲೆಗಳ ಹೊರಗುತ್ತಿಗೆ ಶಿಕ್ಷಕರಿಗೆ 7 ತಿಂಗಳುಗಳಿಂದ ವೇತನ ಕೊಟ್ಟಿಲ್ಲ.ಒಬ್ಬ ಕೆ.ಎ.ಎಸ್.ಅಧಿಕಾರಿಯು ತನ್ನ ನಿರ್ಧಾರವನ್ನು ತಿರುಚಿ ಅನುಷ್ಠಾನಕ್ಕೆ ತರುವುದನ್ನು ತಡೆಯುವ ಶಕ್ತಿಯೂ ಸರಕಾರಕ್ಕಿಲ್ಲವೇ ?

0 comments:

Post a Comment