ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:18 PM

ಐಸ್ಸಾಪ್ಪ....ಐಸ್

Posted by ekanasu

ಕನ್ನಡ ರಾಜ್ಯೋತ್ಸವ ವಿಶೇಷ ವರದಿ:ಹಾವೇರಿ ಸುದ್ದಿ
ಸ್ವಲ್ಪ ಚಳಿಯಾದರೆ ಸಾಕು ಬೆಚ್ಚಗಾಗಲು ಮನೆಯಲ್ಲಿರುವ ರಗ್ಗು,ಬೆಡ್ಸೀಟ್,ಇನ್ನು ಏನೆಲ್ಲಾ ಹುಡುಕುತ್ತೇವೆ ಮತ್ತು ಬಿಸಿ ಬಿಸಿ ಕಾಫಿ ಚಹಾ ಕುಡಿಯಲು ಹವಣಿಸತ್ತವೆ. ಆದರೆ ಇಲ್ಲಿ ಒಬ್ಬ ಹುಡುಗನಿದ್ದಾನೆ ಬರೀ ಮೈಯಲ್ಲಿ ಐಸ್ಸ್ ನ್ನು ಮೈಮೇಲೆ ಹಾಕಿಕೊಂಡು ಮಲಗುತ್ತಾನೆ ಎಂದರೆ ಅದು ವಿಸ್ಮಯವೇ ಅಲ್ಲದೇ ಮತ್ತೇನು. ಹಾಗಾದರೆ ಆ ಹುಡುಗ ಯಾರು ಅಂತೀರಾ ? ಈತನ ಹೆಸರು ವಿಕ್ರಮ ಅಡವಯ್ಯ ನಂದಯ್ಯಗೋಳ ವಯಸ್ಸು 24 ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಲೋಕಾಪುರ ದಲ್ಲಿದ್ದಾನೆ. ಒಂದು ದಿನ ಅಪ್ಪಿ ತಪ್ಪಿ ತಣ್ಣಿರಲ್ಲಿ ಸ್ನಾನ ಮಾಡಿದರೆ ಚಳಿಜ್ವರ ಬರುವ ಈ ಥಂಡಿಯಲ್ಲಿ ಈತ ಐಸ್ ಗಡ್ಡೆಗಳನ್ನು ತನ್ನ ಮೈಮೇಲೆ ಸತತ 120 ನಿಮಿಷಗಳ ಕಾಲ ಹಾಕಿಕೊಂಡು ಮಲಗುತ್ತಾನೆ ಎಂದರೆ ಈತನ ಸಾಹಸ ಮೆಚ್ಚಲೆಬೇಕು.

ದಿನಬೆಳಗಾದರೆ ಸಾಕು ಲಿಮ್ಕಾದಾಖಲೆ, ಗಿನ್ನಿಸ್ದಾಖಲೆ, ಆಂತಾ ಏನೇನು ಮಾಡುವವರನ್ನು ಪ್ರತಿ ದಿನ ಪತ್ರಿಕೆ ಟೀವಿಗಳಲ್ಲಿ ನೋಡುತ್ತಿದ್ದೇವೆ ಆದರೆ ಇದಾವುದರ ಪರಿವೇ ಇಲ್ಲದೇ ಸತತ 2 ವರ್ಷದಿಂದ ಈ ಒಂದು ಹವ್ಯಾಸವನ್ನು ಮೈಗೂಡಿಸಿಕೊಂಡು ಬಂದಿರುವ ವಿಕ್ರಮ್.


ಇಂಥ ಹಳ್ಳಿ ಪ್ರತಿಭೆಗಳು ಪ್ರಚಾರ ಅವಕಾಶ ಮತ್ತು ಆರ್ಥಿಕತೆಯಿಂದ ದೂರ ಉಳಿಯುವುದರಿಂದ ತಮ್ಮಲ್ಲಿರುವ ಪ್ರತಿಭೆಗಳು ಹಾಗೇ ನಸಿಸಿ ಹೋಗುತ್ತವೆ.ಇಂತಹ ನಸಿಸಿ ಹೋಗುತ್ತಿರುವ ಪ್ರತಿಭೆಗಳಲ್ಲಿ ಈ ವಿಕ್ರಮ್ ಸಹ ಒಬ್ಬ.
ವಿಕ್ರಮ್ ಓದಿದ್ದು ಪಿ.ಯೂ.ಸಿ. ಅದರಲ್ಲಿ ಫೇಲ್ ಆದಾಗ ತನ್ನ ಊರಿನಲ್ಲಿ ಎಲ್ಲರೂ ಈತನನ್ನು ಹೀಯಾಳಿಸಿದರು ಛೇ! ನನ್ನಿಂದೇನೂ ಸಾಧ್ಯವಿಲ್ಲವೇ? ಎಂದು ಈತನ ಮನಸ್ಸಿನಲ್ಲಿ ಕಾಡತೊಡಗಿತು.ಬೇರೆ ಬೇರೆ ಕೆಲಸಕ್ಕಾಗಿ ಊರೂರು ಅಲೆದ ಎಲ್ಲೂ ಫಲ ಸಿಗಲಿಲ್ಲ.


ನಮ್ಮೂರಲ್ಲೇ ಇದ್ದು ಕೊಂಡು ಇಡೀ ಜಗತ್ ನನ್ನತ್ತ ನೋಡುವಂತೆ ಮಾಡಬಾರದು ಎಂದು ತೀರ್ಮಾನಿಸಿ ಇಂಥ ಹವ್ಯಾಸವನ್ನು ಬೆಳಸಿಕೊಂಡ. ಈ ಒಂದು ಹವ್ಯಾಸ ಹೇಗೆ ಬೆಳೆದು ಬಂತು ಎಂದರೆ ಒಂದು ದಿನ ಟಿವಿಯನ್ನು ನೋಡುತ್ತ ಕುಳಿತುಕೊಂಡಾಗ ಚೀನಾದ ವ್ಯಕ್ತಿಯೊಬ್ಬ ಐಸ್ ಗಡ್ಡೆಯಲ್ಲಿ 108 ನಿಮಿಷ ಕೂತು ಗಿನ್ನಿಸ್ ದಾಖಲೆ ಸ್ಥಾಪಿಸಿದ್ದ. ಅದನ್ನು ನೋಡಿ ತಾನೇಕೆ ಮಾಡಬಾರದು ಅಂದುಕೊಂಡು ವಿಕ್ರಮ ಯೋಚಿಸಿದ ತನ್ನ ಸ್ನೇಹಿತರ ರೂಂ ಐಸ್ ಪ್ಯಾಕ್ಟರಿಯಲ್ಲಿ ಅಭ್ಯಾಸಮಾಡತೊಡಗಿದ. ಸತತ ಅಭ್ಯಾಸದಿಂದ ಈಗ ಚೀನಾದ ವ್ಯಕ್ತಿಗಿಂತ 12 ನಿಮಿಷ ಹೆಚ್ಚುವರಿ ಸಾಧನೆ ಮಾಡಿದ್ದಾನೆ ವಿಕ್ರಮ.ಮತ್ತು 'ಇಂಡಿಯಾ ಬುಕ್ ಆಫ್ ರೆಕಾರ್ಡ್ ' ಪ್ರಶಸ್ತಿ ನೀಡಿ ಗೌರವಿಸಿದೆ.


ಈಗ ವಿಕ್ರಮ ಗಿನ್ನಿಸ್ ದಾಖಲೆಯ ಕನಸು ಕಾಣುತ್ತಿದ್ದಾನೆ. ಈತನಿಗೆ ಗಿನ್ನೆಸ್ ದಾಖಲೆ ನಿರ್ಮಿಸುವ ಅವಕಾಶ ಇದೀಗ ವಿಕ್ರಮನಿಗೆ ಸಿಕ್ಕಿದೆ. ತಂದೆ-ತಾಯಿ ಅಷ್ಟೇ ಅಲ್ಲಾ ಲೋಕಾಪುರದ ಜನರು ತನ್ನ ಹಳ್ಳಿಯ ಕುಡಿ ಗಿನ್ನಿಸ್ ದಾಖಲೆ ಮಾಡಲಿ ಎಂದು ಬೆಂಬಲಿಸುತ್ತಿದ್ದಾರೆ. ಆದರೆ ಬಡತನದಿಂದ ಬಂದ ಈತನಿಗೆ ಆರ್ಥಿಕತೆಯ ಅವಶ್ಯಕತೆ ಇದೆ. ಈತನಿಗೆ ಜಾಹೀರಾತು, ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಕನಸೂ ಇದೆ.ಆದರೆ ಅದಕ್ಕೆಲ್ಲಾ ಹಣದ ಅವಶ್ಯಕತೆ ಇದೆ. ಬಡ ಕುಟುಂಬದಿಂದ ಬಂದಿರುವ ವಿಕ್ರಮಗೆ ಇದನ್ನೆಲ್ಲಾ ಸಾಧಿಸುವುದು ಕಷ್ಟ ಇಂಥ ಗ್ರಾಮೀಣ ಪ್ರತಿಭೆಗಳನ್ನು ಸರಕಾರ, ಸಂಘ ಸಂಸ್ಥೆಗಳು ಗುರುತಿಸುವ ಕಾರ್ಯ ನಡೆಯಬೇಕಿದೆ.
ನಾವೆಲ್ಲಾ ಸಹಾಯ ಮಾಡಿದರೆ ಇಂಥ ಒಂದು ಗ್ರಾಮೀಣ ಪ್ರತಿಭೆ ಗಿನ್ನಿಸ್ ದಾಖಲೆ ಮಾಡಿದರೆ ದೇಶಕ್ಕೆ ಕೀರ್ತಿ ಸಿಗುತ್ತದೆ ಅಲ್ಲವೇ? ಈತನನ್ನು ಸಂಪರ್ಕಿಸಬೇಕೆ. ಹಾಗಾದರೆ ಹಲೋ ಎನ್ನಿ 8050664860

ಟಿ.ಶಿವಕುಮಾರ್ ಸಹ-ಶಿಕ್ಷಕ
ಸ.ಹಿ.ಪ್ರಾ.ಶಾಲೆ ಅರಳೇಶ್ವರ (ತಾ) ಹಾನಗಲ್ಲ
(ಜಿ) ಹಾವೇರಿ

0 comments:

Post a Comment