ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಅತೃಪ್ತ ಆತ್ಮಗಳು ಇಲ್ಲಿ ಉಸಿರಾಡುತ್ತವೆ..!
ಸತ್ತ ಪ್ರೇತಾತ್ಮಗಳು ನಲಿದಾಡುತ್ತವೆ.!
ಬಾಯಿಮುಚ್ಚಿಕೊಂಡ ಅಂತರಾತ್ಮಗಳು ನಡೆದಾಡುತ್ತವೆ.!>>ವಾಸ್ತವವನ್ನು ಮೀರಿದ ಜಗತ್ತಿನಲ್ಲಿ ಪಯಣ<< "ಇದೇ ಅಕ್ಟೊಬರ21 ರಂದು ಬೇಡ್ತಿತೀರದಲ್ಲಿ ಅಹೋರಾತ್ರಿ ನಡಿಗೆ"
..ಭೂತ ಪ್ರೇತ ಪಿಶಾಚಿಗಳ ಬಗ್ಗೆ ಕುತೂಹಲವಿರುವವರು ನಮ್ಮೊಂದಿಗೆ ಭಾಗವಹಿಸಿ...
ದೈರ್ಯವಂತರಿಗೆ ಮಾತ್ರ ಪ್ರವೇಶ ಈ ರೀತಿ ಹೇಳಿದ್ದಾರೆ ಯಲ್ಲಾಪುರದ ..ಅಚ್ಯುತಕುಮಾರ... ಅಚ್ಯುತ ಕುಮಾರ್ ಬೇಡ್ತಿ ತೀರದ ದೆವ್ಗಳ ಕಾಟದ ಬಗ್ಗೆ ಈ ಕನಸು.ಕಾಂ ನಲ್ಲಿ ಲೇಖನವೊಂದನ್ನು ಹಲವು ಸಮಯಗಳ ಹಿಂದೆಯೇ ಬರೆದಿದ್ದಾರೆ.
ಈ ಕನಸು.ಕಾಂನಲ್ಲಿ ಪ್ರಕಟಗೊಂಡ ಲೇಖನ ಅತೃಪ್ತ ಆತ್ಮಗಳು ಇಲ್ಲಿ ಉಸಿರಾಡುತ್ತವೆ...!http://www.ekanasu.com/2012/05/blog-post_6409.htmlಬೇಡ್ತಿ ಸೇತುವೆ ನಿರ್ಮಿಸುವಾಗ ನೀಡಲಾಗಿದೆ ಎನ್ನುವ ಮಾನವ ಬಲಿಗಳು, ಪದೇ ಪದೇ ಇಲ್ಲಿ ಕೆಟ್ಟು ನಿಲ್ಲುವ ವಾಹನಗಳು, ಇಲ್ಲಿ ದೊರೆಯುವ ಅಪರಿಚಿತ ಶವಗಳು, ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದವರ ಹಿನ್ನಲೆಗಳು, ರಸ್ತೆ ಅಪಘಾತ ಕೊಲೆ ಆತ್ಮಹತ್ಯೆಯ ಪ್ರಕರಣಗಳು, ನೀರಿನಲ್ಲಿ ಕೊಚ್ಚಿಹೋದ ದೇಹಗಳು ಇನ್ನಷ್ಟು ಬಯಾನಕ..
ಗಾಳಿಯಲ್ಲಿ ತೇಲಿ ಬರುವ ಮಾತಿನಂತೆ ಕಾರಿನಲ್ಲಿ ಸಂಚರಿಸುವಾಗ ಕಿಡಕಿಯ ಬಳಿ ದೆವ್ವ ಬಂದು ಪಿಸುಗುಡುವದಂತೆ. ಮೊನ್ನೆಯಷ್ಟೆ ಕಾರ್ಮಿಕನೋರ್ವ ದೆವ್ವವನ್ನು ನೋಡಿದನಂತೆ, ಹಳದಿ ಸೀರೆಯುಟ್ಟ ನಾರಿ ಕಂಡು ಕಾಣದಂತೆ ಮಾಯವಾದಳಂತೆ. ದ್ವೀಚಕ್ರ ವಾಹನ ಸವಾರನನ್ನು ಹಿಂಬಾಲಿಸಿದಂತೆ, ತನ್ನ ಹೆಸರನ್ನು ಕೂಗಿ ಕರೆದಂತೆ, ಕಾಪಾಡಿ ಎಂದು ಕಿರುಚಿದಂತೆಲ್ಲ ಇಲ್ಲಿ ಅನುಭವವಾಗುವದಂತೆ..!
ಅಂತೆ ಕಂತೆಗಳ ಸಂತೆಯನ್ನೆಲ್ಲ ಬದಿಗೊತ್ತಿ ಸುಮ್ಮನೆ ಒಪ್ಪಿಕೊಳ್ಳದೇ ಇದಕ್ಕೆಲ್ಲ ಕಾರಣವನ್ನೆರೆಸುತ್ತ ವಾಸ್ತವಿಕತೆಯಿಂದ ಬಲುದೂರ ಎನಿಸಿದರೂ ಪರಿಕ್ಷಿಸಿ ನೋಡುವ ತವಕದಲ್ಲಿ ದಾವಂತ ಸೃಷ್ಟಿಸಿರುವ ಕಥೆಗಳ ಬೆನ್ನತ್ತಿ ಪಯಣ. ಕುತುಹಲಿಗಳು ನಮ್ಮೊಂದಿಗೆ ಬನ್ನಿ, ಭಾಗವಹಿಸಿ....
ಮದ್ಯರಾತ್ರಿಯಿಂದ ಮುಂಜಾನೆಯವರೆಗೆ... ನಮ್ಮದೇ ಊರಿನಲ್ಲಿ.. ಬೇಡ್ತೀ ತೀರದಲ್ಲಿ......
ದೆವ್ವಗಳೊಂದಿಗೆ ಮಾತುಕಥೆ
- ಅಚ್ಯುತಕುಮಾರ0 comments:

Post a Comment