ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ರಾಷ್ಟ್ರ ಮಟ್ಟದ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಪ್ರಥಮವಾಗಿ ಆಯೋಜಿಸಿದ್ದ ಅಂತರ್ಜಾಲ ಗಣೇಶ ಮೂರ್ತಿಗಳ ಸ್ವರ್ಧೆಯಲ್ಲಿ ರಾಜ್ಯದ ಹಾವೇರಿ ಜಿಲ್ಲೆ ಹಾನಗಲ್ಲ ಪಟ್ಟಣದ ಶ್ರೀ ಜ್ಞಾನೇಶ್ವರ ಯುವಕ ಮಂಡಳದವರು ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿ ಪ್ರಥಮ ಬಹುಮಾನ ಗಳಿಸಿದೆ.
ಸತತ 15 ವರ್ಷದಿಂದ ಶ್ರೀ ಜ್ಞಾನೇಶ್ವರ ಯುವಕ ಮಂಡಳದವರು ಪ್ರತಿ ವರ್ಷ ಈ ಹಬ್ಬದಲ್ಲಿ ಏನಾದರೊಂದು ವಿಷೇಶತೆಯಿಂದ ಕೂಡಿಸಿರುವಂತಹ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಈ ಯುವಕ ಮಂಡಳದಲ್ಲಿ 10 ಜನ ಸದಸ್ಯರಿದ್ದಾರೆ.

ಎಲ್ಲರೂ ಉತ್ಸಾಹಿ ಯುವಕರು ಈ ಬಾರಿ ಪಾಂಡುರಂಗನ ಅವತಾರವಿರುವ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಇಡೀ ಹಾನಗಲ್ಲಿನ ಜನತೆಯನ್ನಲ್ಲದೇ ಹಾವೇರಿ ಜಿಲ್ಲೆಯಲ್ಲಿಯೇ ಎಲ್ಲರ ಗಮನ ಸೆಳೆಯಿತು. ಮತ್ತು ಈ ಬಾರಿ ಬಾಂಬೆಯಲ್ಲಿ ಏರ್ಪಡಿಸಿದ್ದ ಅಂತರ್ಜಾಲ ಗಣೇಶನ ಮೂರ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಹಾನಗಲ್ಲಿಗೆ ಹೆಸರು ತಂದು ಕೊಟ್ಟಿದ್ದಾರೆ.
ಬಾಂಬೆಯಲ್ಲಿ ನೆಡೆದ ಸಮಾರಂಭದಲ್ಲಿ ಹಾನಗಲ್ಲಿನ ಶ್ರೀ ಜ್ಞಾನೇಶ್ವರ ಯುವಕ ಮಂಡಳದ ಸದಸ್ಯರಾರ ಪ್ರವೀಣ ಸುಲಾಖೆ, ಪ್ರಸನ್ನ ಸುಲಾಖೆ, ವಿನಯ್ ಬೇದ್ರೆ, ಕಿಶೋರ ಬೇದ್ರೆ, ಪ್ರವೀಣ ಬೇದ್ರೆ, ಸಂತೋಷ ಬೇದ್ರೆ, ಚೇತನ ಬೆಂಡಿಗೇರಿ, ವಿಜಯ ಬೇದ್ರೆ, ವಿಶ್ವನಾಥ ಬೇದ್ರೆ, ವಿನಾಯಕ ಬಗರೆ ಭಾಗವಹಿಸಿದ್ದರು.


ಈ ಸಮಾರಂಭದ ಅಧ್ಯಕ್ಷತೆ ನೀಲೇಶ ಕ್ಷೀರಸಾಗರ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಸಿಕಲಾಲ ಭಾವಸಾರ, ರಾಜು ಮಹೇಂದ್ರಕರ, ವಿನೋದ ಹಂಚಾಟೆ, ಉದಯಬಾನು , ಹರಿಶ ರಾಮಪುರ ರವರು ಭಾಗವಹಿಸಿದ್ದರು. ಪ್ರಾರ್ಥನೆ ಸುಪ್ರಿಯಾ ಧೋಯಿಜೋಡೆ, ಸ್ವಾಗತ ಸ್ಮಿತಾ ಧೋಯಿಜೋಡೆ ಯವರು ಹಾಗೂ ನಿರೂಪಣೆ ಮತ್ತು ವಂದನಾರ್ಪಣೆ ವಿಶಾಲ ಸುತ್ರಾವೆ ನೆರವೇರಿಸಿದರು.

0 comments:

Post a Comment