ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಮಂಗಳೂರು ವರದಿ

ಭಾರತೀಯ ಅಣುಶಕ್ತಿ ನಿಗಮ ದ ಕೈಗಾ ಅಣು ವಿದ್ಯುತ್ ಯೋಜನೆಯಲ್ಲಿ ವೈಜ್ಞಾನಿಕ ಸಹಾಯಕರಾಗಿರುವ ಉಂಡೆಮನೆ ಸುಬ್ರಹ್ಮಣ್ಯ ಕುಮಾರ ಇವರು ಅಣುಶಕ್ತಿ ನಿಗಮದ 2011-12 ನೇ ಸಾಲಿನ ಶ್ರೇಷ್ಠ ನಿರ್ವಹಣಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜಪಾನಿನ ಫ್ಯುಕುಶಿಮಾ ಅವಗಢದ ಹಿನ್ನೆಲೆಯಲ್ಲಿ ಕೈಗಾ ಅಣುವಿದ್ಯುತ್ ಘಟಕಗಳಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳು ಮತ್ತು ಅಣುವಿದ್ಯುತ್ತಿನ ಬಗ್ಗೆ ಜನಸಾಮಾನ್ಯರಲ್ಲಿರುವ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಲು ಕೈಗೊಂಡ ಕಾರ್ಯಕ್ರಮಗಳಲ್ಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ನಿರ್ವಹಣೆ ತೋರಿರುವುದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.


ಅಣುಶಕ್ತಿ ನಿಗಮದ ಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಕೈಗಾ ಅಣುವಿದ್ಯುತ್ ಯೋಜನೆಯ ನಿರ್ದೇಶಕರಾದ ಟಿ.ಜೆ.ಕೊಟ್ಟೀಶ್ವರನ್ ಅವರು ಸುಬ್ರಹ್ಮಣ್ಯ ಕುಮಾರ ಅವರಿಗೆ ಪ್ರದಾನ ಮಾಡಿದ್ದಾರೆ. ಇನ್ನಿಬ್ಬರು ನಿರ್ದೇಶಕರುಗಳಾದ ಯಚ್. ಯನ್. ಭಟ್ ಮತ್ತು ಜಯಪ್ರಕಾಶ ಗುಪ್ತ ವೇದಿಕೆಯಲ್ಲಿದ್ದರು . ಪ್ರಶಸ್ತಿಯು ರೂ ೧೦,೦೦೦ ನಗದು, ಬೆಳ್ಳಿಯ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ.

ಉಂಡೆಮನೆಯವರಾದ ಇವರು ರಾಷ್ತ್ರಪ್ರಶಸ್ತಿ ವಿಜೇತ ಶಿಕ್ಷಕ ಶ್ರೀಯುತ ಉಂಡೆಮನೆ ಶಿವಶಂಕರ ಭಟ್ಟರ ತಮ್ಮ ಮತ್ತು ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆ, ಪಟ್ಟೆ ಮತ್ತು ನವೋದಯ ಪ್ರೌಢಶಾಲೆ, ಬೆಟ್ಟಂಪಾಡಿಯ ವಿದ್ಯಾರ್ಥಿ.

0 comments:

Post a Comment