ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:17 AM

ಕೃಷ್ಣ ಮಂಜರಿ

Posted by ekanasu

ರಾಷ್ಟ್ರ - ಅಂತಾರಾಷ್ಟ್ರಸುದ್ದಿ : ವೆಂಕಟ್ ಆರ್.

"ಕೃಷ್ಣ ಭಕ್ತರು" ಎಂಬ ವಿಷಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮ "ಕೃಷ್ಣ ಮಂಜರಿ-೨೦೧೨"ವನ್ನು ಹಿಂದೂ ಎಂಡೋಮೆಂಟ್ ಬೋರ್ಡ್ (ಸಿಂಗಪುರ)ದ ಆಶ್ರಯದಲ್ಲಿ ಗೀತ ಜಯಂತಿ ಸಂಸ್ಥೆ, ಇತರೆ ೩೬ ವಿವಿಧ ಸಂಸ್ಥೆಗಳು ಹಾಗೂ ದೇವಸ್ಥಾನಗಳ ಸಹಯೋಗದಲ್ಲಿ ಬಹು ವಿಜೃಂಭಣೆಯಿಂದ ಆಚರಿಸಲಾಯಿತು.

ಕನ್ನಡ ಸಂಘದ ವತಿಯಿಂದ ಪ್ರದರ್ಶಿಸಲ್ಪಟ್ಟ ಎರಡು ಅಮೋಘ ನೃತ್ಯಗಳು ಸಭಿಕರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾದವು.ಮೊದಲನೆಯದಾಗಿ ಸಾಧನ ರಾಜಾರಾಮ್ ಅವರ ನೃತ್ಯ ಸಂಯೋಜನೆಯಲ್ಲಿ "ಕುಣಿದಾಡೊ ಕೃಷ್ಣ... " ಎಂಬ ಹಾಡಿಗೆ ಕುಮಾರಿಯರಾದ ಶ್ರೀಲೇಖ ಚಂದ್ರಶೇಖರ್, ಅನನ್ಯ ಬಾಳೆಹಿತ್ಲು, ಜ್ಯೋತ್ಸ್ನ ರಾಮಕೃಷ್ಣ, ನಿಖಿತ ದಿವೆಕರ್ ಹಾಗು ಸೂಕ್ತಿ ಭಟ್ ಅವರು ಅದ್ಭುತವಾದಂತಹ ಭರತ ನಾಟ್ಯವನ್ನು ಪ್ರದರ್ಶಿಸಿದರು. ವಿನಿತಾ ಐತಾಳ್ ಅವರ ಪರಿಕಲ್ಪನೆ ಮತ್ತು ಸಹಯೋಗದ, ಶ್ರೀಲಕ್ಷ್ಮಿ ಹಾಗೂ ಕವಿತಾ ರಾಘವೇಂದ್ರ ಅವರ ನೃತ್ಯ ಸಂಯೋಜನೆಯ ಎರಡನೆಯ ನೃತ್ಯದಲ್ಲಿ ರೆಮೋ ಫೆರ್ನಾಂಡಿಸ್ ಅವರ ಪ್ರಖ್ಯಾತ "ಕೊಳಲು" ವಾದನಕ್ಕೆ ಕುಮಾರಿಯರಾದ ಸಿರಿ ಜರ್ಮಲೆ,ಅಪೂರ್ವ ಜರ್ಮಲೆ,ಶರಣ್ಯ ಜಮದಗ್ನಿ, ವೃಂದ ಕುಲಕರ್ಣಿ ಹಾಗು ಅಮಿತ ಕುಲಕರ್ಣಿ,ಗೀತ ಜರ್ಮಲೆ, ಕವಿತ ರಾಘವೇಂದ್ರ, ಮಮತ ಐಯ್ಯರ್,ರೂಪ ರಾಜಶೇಖರ್,ರಾಜೇಶ್ವರಿ, ಸಿಂಧು ಶಾಸ್ತ್ರಿ ಮತ್ತು ಸುಷ್ಮ ಬಸವರಾಜ್‌ಅವರನ್ನೊಳಗೊಂಡ ತಂಡವು ಕೃಷ್ಣನ ಪರಮ ಭಕ್ತೆ ಮೀರಾಬಾಯಿಯು ಹಾಡಿ ಕುಣಿಯುತ್ತಾ ತನ್ನ ನಲ್ಮೆಯ ಕೃಷ್ಣನು ಗೋಪಿಕಾ ಸ್ತ್ರೀಯರೊಂದಿಗಿನ ಆಟವನ್ನು ನಲಿಯುತ್ತಾ ಮಗ್ನಳಾಗಿರುವ ಸನ್ನಿವೇಶವನ್ನು ಪ್ರದರ್ಶಿಸಿತು.
ವಿವಿಧ ಸಂಘ ಸಂಸ್ಥೆಗಳು ವಿವಿಧ ರೂಪಗಳಲ್ಲಿ ಕೃಷ್ಣ ಭಕ್ತರ ಪ್ರಸಂಗಗಳನ್ನು ಪ್ರಸ್ತುತಪಡಿಸಿದ್ದನ್ನು ನೆರೆದಿದ್ದ ಪ್ರೇಕ್ಷಕ ಭಕ್ತರು ನೋಡಿ ಆನಂದಿಸಿದರು.0 comments:

Post a Comment