ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ : ಹರೀಶ್ ಕೆ.ಆದೂರು
ನಾವೂ ಮನುಷ್ಯರೇ...ನಮ್ಮ ಮೈಯಲ್ಲೂ ಹರಿಯುತ್ತಿರುವುದು ಕೆಂಬಣ್ಣದ ರಕ್ತವೇ... ನಾವೂ ಉಸಿರಾಡೋದು ಇದೇ ಪರಿಸರದ ಗಾಳಿಯನ್ನೇ...ನಮಗೂ ಹೃದಯವಿದೆ...ನಮಗೂ ಆಸೆ , ಆಕಾಂಕ್ಷೆಗಳಿವೆ...ನಮ್ಮನ್ನೂ ನಿಮ್ಮಂತೆ ಕಾಣಿ... ಎಂಬ ಮಾತು ಹೊರಬರುತ್ತಿದ್ದಂತೆಯೇ ಕಣ್ಣಂಚಿಂದ ಎರಡು ಹನಿ ಕಣ್ಣೀರು ಜಿನುಗಿತು...ಇದು ಮಂಗಳ ಮುಖಿ ರಾಣಿ ಅವರ ಅಂತರಾಳದ ಮಾತುಗಳು.


ಇವರು ಆಂಧ್ರ ಮೂಲದವರು. ಜಿಂದಾಲ್ ರಾಣಿ ಎಂದೇ ಪ್ರಸಿದ್ಧಿ ಹೊಂದಿದವರು. ಐದನೇ ತರಗತಿ ತನಕ ಓದಿದ್ದಾರೆ.ಅಪ್ಪ, ಅಮ್ಮ, ಅಣ್ಣ ತಮ್ಮಂದಿರೊಂದಿಗೆ ಬಾಲ್ಯದ ಬದುಕು...ಮೂಲ ಹೆಸರು ರಾಘವೇಂದ್ರ. ರಾಘು ಎಂದೇ ಅಕ್ಕರೆಯಿಂದ ಕರೆಯುತ್ತಿದ್ದರು. ನೋಡಲು ಸಂದರ ...ಸ್ಫುರದ್ರೂಪಿ...ಶಾಲೆಗೆ ಹೋಗುತ್ತಿದ್ದಂತೆಯೇ ಪುರುಷ ದೇಹದಲ್ಲಿ ಸ್ತ್ರೀ ಮನಸ್ಸು ಮೂಡಲಾರಂಭಿಸಿತು. ಶಾಲೆಯಲ್ಲಿ ಎಲ್ಲರಿಂದಲೂ ತಿರಸ್ಕಾರ. ಮನೆಯಲ್ಲೂ ಅಸಡ್ಡೆ...ನಂತರ ದೇಹದಲ್ಲಿ ಬದಲಾವಣೆಗಳಾದವು.ಮನೆ ಬಿಡುವುದು ಅನಿವಾರ್ಯ ಎಂಬಂತಹ ಸ್ಥಿತಿ. ಮುಂದಿನ ಜೀವನ ಅದು ವೈರಿಗೂ ಬೇಡ ಎಂಬಂತಹ ಸ್ಥಿತಿ. ಮುಂಬೈ ಪಯಣ.

ಅಲ್ಲಿ ಮಂಗಳ ಮುಖಿಯರೊಂದಿಗೆ ಜೀವನ. ಮಂಗಳ ಮುಖಿಯರ ವಿಧಿ ವಿಧಾನಗಳಿಗೆ ಹೊಂದಿಕೊಂಡು ಜೀವನ ನಡೆಸತೊಡಗಿದರು. ಸಮಾಜವನ್ನು ನೋಡುತ್ತಿದ್ದಂತೆಯೇ ನನಗೂ ಮನೆಗೆಹೋಗಬೇಕು.ಅಪ್ಪ ಅಮ್ಮ, ಅಣ್ಣ, ತಮ್ಮ, ಅಕ್ಕ ತಂಗಿಯರೊಂದಿಗೆ ಬೆರೆಯ ಬೇಕೆಂಬ ಭಾವನೆ.ನನ್ನ ಈಗಿನ ಸ್ಥಿತಿಯನ್ನು ನೋಡಿದರೆ ಅದು ಅಸಾಧ್ಯದ ಮಾತು. ಮನೆಯವರಿಗೆ ನಾನು ಗಂಡಾಗಿ ಬಂದರೆ ಬೇಕು.ಈ ಮಂಗಳ ಮುಖಿಯಾಗಿರುವುದಕ್ಕೆ ವಿರೋಧ. ಒಟ್ಟಿನಲ್ಲಿ ಈ ಸ್ಥಿತಿ ಯಾರಿಗೂ ಬರಬಾರದು ಎಂಬ ವೇದನೆಯ ಮಾತು.
ಇದು ಕೇವಲ ರಾಣಿಯೊಬ್ಬರ ಸ್ಥಿತಿಯಲ್ಲ... ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಮಂಗಳ ಮುಖಿಯರು ಇದ್ದಾರೆ. ಅವರೆಲ್ಲರ ಮನದಾಳದ ನೋವು ಇದೊಂದೇ ಆಗಿದೆ.

ಸಮಾಜದ ದೃಷ್ಠಿಯಲ್ಲಿ ತಿರಸ್ಕಾರದ ಭಾವಕ್ಕೊಳಗಾಗುವ ಈ ಮಂಗಳ ಮುಖಿಯರ ನೈಜ ಜೀವನದ ಕಥಾನಕವನ್ನೊಮ್ಮೆ ಅವಲೋಕಿಸಿದರೆ ಕಲ್ಲು ಹೃದಯವೂ ಕರಗದಿರದು... ಮಂಗಳ ಮುಖಿಯರು ಎಂಬ ಸುಂದರ ಹೆಸರಿನ ಹಿಂದಿರುವ ಕಷ್ಟ, ನೋವು, ವೇದನೆ ಎಂಥಹವರನ್ನೂ ಅರೆಕ್ಷಣ ಕಣ್ಣೀರಿಡುವಂತೆ ಮಾಡುತ್ತದೆ.
ಮನೆ ಮಂದಿಯಿಂದ ತಿರಸ್ಕಾರ, ಸಮಾಜದಿಂದ ತಾತ್ಸಾರ, ಸರಕಾರ, ಕಾನೂನಿನ ದೃಷ್ಠಿಯಿಂದಲೂ ಸೂಕ್ತ ಸ್ಪಂದನೆಯಿಲ್ಲ..."ಮನುಷ್ಯ" ಎಂದೇ ಪರಿಗಣಿಸದಂತಹ ವ್ಯವಸ್ಥೆ, ಯಾರಿಗೂ ಬೇಡದಂತಹ ಸ್ಥಿತಿ...

ಈ ರೀತಿ ಸಾಗುತ್ತಿದೆ ಮಂಗಳ ಮುಖಿಯರ ಜೀವನ.
ಸಮಾಜದ ತಾತ್ಸಾರಕ್ಕೆ ಒಳಗಾಗಿ ಸೂಕ್ತ ನೌಕರಿಯೂ ಸಿಗುತ್ತಿಲ್ಲ... ಇದರಿಂದಾಗಿ ದುಡಿದು ಬದುಕುತ್ತೇನೆಂಬ ಬಯಕೆಗೂ ತಣ್ಣೀರು... ಬೇಡಿ ತಿನ್ನುತ್ತೇನೆಂದರೂ ಅಲ್ಲೂ ಅವಮಾನ...ತಾತ್ಸಾರ...ಮುಖ್ಯವಾಹಿನಿಗೆ ತರಲಾಗುವುದು ಎಂಬ ಸರಕಾರದ ಭರವಸೆಯ ಮಾತುಗಳು, ತುಂಬಿದ ಸಭೆಯಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸಚಿವರಾದಿಯಾಗಿ ಮುಖ್ಯಮಂತ್ರಿಯ ತನಕದ ವಾಗ್ಧಾನಗಳಿಗೆ ಪುಡಿಕಾಸಿನ ಬೆಲೆಯೂ ಸಿಗದಂತಾಗಿದೆ.
ನಿರಂತರ ದೌರ್ಜನ್ಯ, ತಾತ್ಸಾರ, ನಿರ್ಲಕ್ಷ್ಯ, ಅವಮಾನ ಇದರಲ್ಲಿ ಬೆಂದು ಹೋಗಿದ್ದಾರೆ ಈ ಮಂಗಳ ಮುಖಿಯರು.
ದೇವರು ನಮಗ್ಯಾಕೆ ಇಂತಹ ಸ್ಥಿತಿ ನೀಡಿದನೋ ...ಅತ್ತೂ ಅತ್ತೂ ಇಂದು ಬೇಕೆಂದರೂ ಕಣ್ಣೀರು ಬರುತ್ತಿಲ್ಲ ಎಂಬ ಮಂಗಳ ಮುಖಿಯರ ಮಾತು ಹೃದಯ ಕದಡುವಂತೆ ಮಾಡುತ್ತದೆ...

ಶಿಕ್ಷಣ, ಉದ್ಯೋಗ, ಆರೋಗ್ಯ, ಕಾನೂನು, ಸಾಮಾಜಿಕ ಸ್ಥಾನಮಾನ ಎಲ್ಲದರಲ್ಲೂ ಮಂಗಳ ಮುಖಿಯರಿಗೆ ಅವಕಾಶ ವಂಚಿತ. ಮಂಗಳಮುಖಿಯರನ್ನು ಪ್ರತ್ಯೇಕ ಲಿಂಗದವರೆಂದು ಪರಿಗಣಿಸಲಾಗುವುದು ಎಂಬ ಸಚಿವರೊಬ್ಬರ ಮಾತು ಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಮುದ್ರಣವಾಗುವುದರೊಂದಿಗೆ ಮುಗಿದುಹೋಗಿದೆ. " ರಾಜ್ಯದಲ್ಲಿ ಮಂಗಳ ಮುಖಿಯರಿಗೆ ಪಡಿತರ ಸೌಲಭ್ಯ , ಪಡಿತರ ಚೀಟಿ ನೀಡಲಾಗುವುದು" ಎಂಬ ಶೋಭಾ ಕರಂದ್ಲಾಜೆ ಅವರ ಹೇಳಿಕೆ ವೇದಿಕೆಗಷ್ಟೇ ಸೀಮಿತವಾಗಿದೆಯೋ ಎಂಬ ಮಾತು ಮಂಗಳ ಮುಖಿಯರಿಂದ ಕೇಳಿಬರುತ್ತಿದೆ.
ಸರಕಾರ , ರಾಜಕಾರಣಿಗಳು ಹುಟ್ಟುಹಬ್ಬ, ಸಮ್ಮೇಳನಗಳೆಂದು ಕೋಟ್ಯಾಂತರ ರುಪಾಯಿ ದುಂದು ವೆಚ್ಚ ಮಾಡುವ ಬದಲಾಗಿ ಮಂಗಳ ಮುಖಿ ಸಮಾಜದ ಕಲ್ಯಾಣಕ್ಕಾಗಿ ಕಿಂಚಿತ್ತು ಖರ್ಚು ಮಾಡಬಾರದೇ ಎಂಬ ಮಾರ್ಮಿಕ ಪ್ರಶ್ನೆ ಮಂಗಳ ಮುಖಿಯರಿಂದ ಕೇಳಿ ಬರುತ್ತಿದೆ.

8 comments:

Sampath Kumar D said...

Good concern..But we have think about their after castration life. I think it has more painful.


Sampath Kumara D

shrigouri shripad joshi said...

sooooo hearttouching

shrigouri shripad joshi said...


sooooo heart touching. society should have concern about them.

shrigouri shripad joshi said...

soooooooo heart touching. society should have concern about them.

shrigouri shripad joshi said...

soooooooo heart touching. society should have concern about them.

shrigouri shripad joshi said...

soooooooo heart touching. society should have concern about them.

shrigouri shripad joshi said...

soooooo heart touching.society should have concern about them.

shrigouri shripad joshi said...

sooooo heart touching . society should have concern about them.

Post a Comment