ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಷ್ಟ್ರ- ಅಂತಾರಾಷ್ಟ್ರ ಸುದ್ದಿ: ಸಿಂಗಾಪುರ ವರದಿ
ಸಿಂಗಪುರ ಮಕ್ಕಳಿಗೆ ಕನ್ನಡ ಅಕ್ಷರಗಳ ಜ್ಞಾನವನ್ನು ಕಲಿಸಿಕೊಡಲು ಕನ್ನಡ ಸಂಘ(ಸಿಂಗಪುರ)ದ ಸಹ ಕಾರ್ಯದರ್ಶಿಯಾದ ರಾಮನಾಥ್ ಅವರ ಮುಂದಾಳತ್ವದಲ್ಲಿ ವೆಂಕಟ್, ಶ್ರೀನಿವಾಸ್ ಹಾಗೂ ರಾಜೇಶ್‌ ಹೆಗಡೆ ಅವರ ತಂಡವು ಸೆಪ್ಟೆಂಬರ್ 30ರಿಂದ ಅಕ್ಟೋಬರ್ 28ರವರೆಗೆ ಪ್ರತಿ ಭಾನುವಾರ ಬೆಳಿಗ್ಗೆ 9.30ರಿಂದ 12.30ರವರಗೆ SINDA(Singapore Indian Association)ನಲ್ಲಿ ತರಗತಿಯ ಕೊಠಡಿಗಳಲ್ಲಿ ನಡೆಸಿಕೊಟ್ಟ "ಕನ್ನಡ ಕಲಿ" ತರಗತಿಯಲ್ಲಿ 35 ಮಕ್ಕಳು ಭಾಗವಹಿಸಿದ್ದರು. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರದ ಪ್ರೋತ್ಸಾಹ, ಸಲಹೆ, ಸೂಚನೆ ಹಾಗೂ ಪಠ್ಯಪುಸ್ತಕ-ಸಲಕರಣೆಗಳು ಬಹಳ ಸಹಕಾರಿಯಾದವು.

ಮೊದಲ ವಾರದಲ್ಲಿ "ಅ" ಇಂದ "ಅಃ" ವರೆಗೆ ಓದಲು, ಬರೆಯಲು ಕಲಿತ ಮಕ್ಕಳು ಎರಡನೆಯ ವಾರದಲ್ಲಿ "ಕ" ದಿಂದ "ಮ"ವರೆಗೆ ಕಲಿತು,ಮೂರನೆಯ ವಾರದಲ್ಲಿ ಕನ್ನಡ ವರ್ಣಮಾಲೆಯ ಅಕ್ಷರಗಳನ್ನೆಲ್ಲಾ ಕಲಿತು ಮುಗಿಸಿದ್ದರು.
ಇದಲ್ಲದೇ "ಅ, ಆ, ಇ, ಈ ಕನ್ನಡದಾ ಅಕ್ಷರ ಮಾಲೆ.." ಮುಂತಾದ ಶೈಕ್ಷಣಿಕ, ನೈತಿಕ ಚಲನಚಿತ್ರಗೀತೆಗಳನ್ನು; ಅನೇಕ ವ್ಯಂಗ್ಯಚಿತ್ರ ಮಾಧ್ಯಮದ ನೀತಿಕಥೆಗಳನ್ನು; "ಒಂದು, ಎರಡು, ಬಾಳೆಲೆ ಹರಡು", "ಕರಡಿ ಬೆಟ್ಟಕೆ ಹೋಯಿತು", "ಆನೆ ಬಂತೊದಾನೆ" ಮುಂತಾದ ಶಿಶುಗೀತೆಗಳನ್ನು ನೋಡಿ, ಕೇಳಿ ಕಲಿತರು. ಇದಲ್ಲದೇ ಸ್ವರ-ವ್ಯಂಜನಗಳನ್ನು; ಗುಣಿತಾಕ್ಷರಗಳನ್ನು; ಸರಳ ಪದಗಳನ್ನು ಮತ್ತು ತಮ್ಮ ಹೆಸರುಗಳನ್ನು ಓದಿ, ಬರೆಯುವುದನ್ನು ಕೂಡ ಕಲಿತರು. ಅಕ್ಟೋಬರ್ ೨೮ರಂದು ತಮ್ಮ ಕೊನೆಯ ತರಗತಿಯಲ್ಲಿ ಶಿಕ್ಷಕರು ಆಯೋಜಿಸಿದ್ದ ಕಿರು-ಪರೀಕ್ಷೆಯನ್ನೂ ಎದುರಿಸಿದರು.
ಹೀಗೆ ಪ್ರತಿವಾರವೂ ಮೂರು ಘಂಟೆಗಳ ಕಾಲ ಅಕ್ಷರಗಳ ಅಭ್ಯಾಸ ಮಾತ್ರವಲ್ಲದೆ, ಮಕ್ಕಳಿಗೆ ಕನ್ನಡದ ಕಥೆಗಳು, ಶಿಶುಗೀತೆಗಳ ಜೊತೆಗೆ ಹಾಗೂ ಅಕ್ಷರ ಹಾಗು ಪದಗಳೊಂದಿಗಿನ ಆಟಗಳನ್ನು ಆಡಿಸಿದ ಶಿಕ್ಷಕರು "ಕನ್ನಡ ಕಲಿ"ಕೆಯನ್ನು ಮಕ್ಕಳಿಗೆ ಅರ್ಥಪೂರ್ಣ ಹಾಗೂ ವಿನೋದದಿಂದ ತುಂಬಿದ ಅನುಭವವಾಗಿಸಿದ್ದರು. ಈಮಕ್ಕಳುಕನ್ನಡಕಲಿತರಗತಿಯಲ್ಲಿಕಲಿತಶಿಶುಗೀತೆಗಳನ್ನುಮಕ್ಕಳುನವೆಂಬರ್ ೩ರಂದು ನಡೆಯುವದೀಪೋತ್ಸವಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಅಲ್ಲದೇಮಕ್ಕಳಿಗೆಲ್ಲಾ ಕನ್ನಡಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಮುಖ್ಯಮಂತ್ರಿ ಚಂದ್ರು ಅವರಸಹಿಯನ್ನೊಳಗೊಂಡಪ್ರಶಸ್ತಿಪತ್ರ ದೊರಕುತ್ತಿರುವುದುಮಕ್ಕಳಿಗಿಂತ ಹೆಚ್ಚಾಗಿಅವರತಂದೆ ತಾಯಿಯರಿಗೆಹಾಗೂ ಕಲಿಸಿದಗುರುಗಳಿಗೆ, ಕನ್ನಡಸಂಘಕ್ಕೆಹೆಮ್ಮೆಯವಿಷಯ.

ವರದಿ: ಸುರೇಶ ಭಟ್ಟ / ವೆಂಕಟ್ ಅರ್. , ಛಾಯಾಚಿತ್ರ: ರಾಜೇಶ್ ಹೆಗಡೆ

0 comments:

Post a Comment