ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯೋತ್ಸವ ವಿಶೇಷ - ಚಿತ್ರ ಲೇಖನ: ಟಿ.ಶಿವಕುಮಾರ್

ಕಂಡಕ್ಟರ್ ಎಂದರೆ ಸೀಟಿ ಊದಿ ಟಕೇಟ್ ಹಿಂದೆ ಚಿಲ್ಲರೆ ಬರೆದು ಮರೆತು ಹೋದರೆ ಹೋಗಲಿ ಎಂದು ತಿಳಿದುಕೊಂಡಿರುವುದು ಸಾಮಾನ್ಯ ಜನರ ಆಭಿಪ್ರಾಯ.


ಆದರೆ ಇಲ್ಲೋಬ್ಬ ಕಂಡಕ್ಟರ್ 'ಕನ್ನಡವೇ ಸತ್ಯ ಕನ್ನಡವೇ ನಿತ್ಯ' ಎಂದು ನವೆಂಬರ್ ತಿಂಗಳಲ್ಲಿ ಅಷ್ಟೇ ಅಲ್ಲಾ ವರ್ಷದ ಹನ್ನೆರಡು ತಿಂಗಳಲ್ಲಿ ತನ್ನ ಬಸ್ಸಿನಲ್ಲಿ ಕನ್ನಡ ಕಲರವವನ್ನು ಮೊಳಗಿಸುತ್ತಾರೆ. ಅವರೇ ದಾವಣಗೆರೆ ಜಿಲ್ಲೆಯ ಹೋನ್ನಾಳಿ ತಾಲ್ಲೂಕು ಕುಂದೂರು ನ ಕನ್ನಡ ಕಂಡಕ್ಟರ್ ನಟರಾಜ್.

ಹೀಗೆ ಏಳು ವರ್ಷಗಳಿಂದ ಕ.ರಾಜ್ಯ ರಸ್ತೆ ಸಾರಿಗೆ ನಿಗಮ, ಗುಂಡ್ಲುಪೇಟೆ ಘಟಕದಲ್ಲಿ ಕಂಡಕ್ಟರ್ ಸೇವೆ ಸಲ್ಲಿಸುತ್ತಿರುವ ನಟರಾಜ್ ಗುಂಡ್ಲುಪೇಟೆ-ಮೈಸೂರು-ಶಿವಮೊಗ್ಗ-ದಾವಣಗೆರೆ ಸಂಚರಿಸುವ ಬಸ್ಸಿನಲ್ಲಿ ಕಂಡಕ್ಟರ್ ಕೆಲಸದ ಜೊತೆಗೆ ಪ್ರತಿಯೊಬ್ಬರಲ್ಲಿಯೊ ಕನ್ನಡ ಪ್ರೀತಿಯನ್ನು ಸತತ ಏಳು ವರ್ಷಗಳಿಂದ ಬೆಳೆಸುತ್ತಿದ್ದಾರೆ.


ಇವರ ಕನ್ನಡ ಪೀತಿಗೆ ಬಲವಾದ ಕಾರಣವಿದೆ ಗುಂಡ್ಲಪೇಟೆ ಕೇರಳದ ಅಂಚಿಗೂ ಮತ್ತು ಇನ್ನೊಂದು ಕಡೆ ತಮಿಳುನಾಡು ಅಂಚಿಗೆ ಹೊಂದಿಕೊಂಡಿರುವ ಕನ್ನಡ ಸೀಮೆ ಮೊದಲು ಈ ರಾಜ್ಯಗಳಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ನಿರ್ವಾಹಕರಾಗಿ ಹೋಗುತ್ತಿದ್ದರು ನಟರಾಜ್. ಆಗ ಅಲ್ಲಿನ ಜನರ ಭಾಷಾಭಿಮಾನವನ್ನು ಕಂಡು ಇವರು ದಂಗಾಗಿಹೋದರು ಕೂಡಲೇ ಇದರ ಕಿಂಚಿತ್ ಭಾಗದಷ್ಟಾದರೂ ನಾನು ಕನ್ನಡಕ್ಕೇನಾದರೂ ಮಾಡಬೇಕು ಎಂಬ ಜ್ಞಾನೋದಯ ಇವರಿಗಾಯಿತಂತೆ! ಇದರ ಫಲವಾಗಿ ಕ್ರಮೇಣ ಇವರು ಬಸ್ಸಿನಲ್ಲಿ ಪ್ರಯಾಣಿಕರೊಂದಿಗೆ ಕನ್ನಡದಲ್ಲೇ ಮಾತನಾಡಲು ಪ್ರಾರಂಭಿಸಿದರು.

ತೀರಾ ಅನಿವಾರ್ಯವಾದರೆ ಮಾತ್ರ ಬೇರೆ ಭಾಷೆ ಬಳಸುವ ಪ್ರತಿಜ್ಞೆಯೂ ಆಯಿತು. ಆಮೇಲೆ 2006 ರಿಂದ ತಮ್ಮ ಬಸ್ಸಿನಲ್ಲೇ ವಿಶೇಷ ರೀತಿಯಲ್ಲಿ ಕನ್ನಡ ರಾಜೋತ್ಸವ ಆಚರಣೆ ಆರಂಭಿಸಿದರು. ಆದರೆ ಈಗ ಎರಡು ವರ್ಷಗಳಿಂದ ಪ್ರತಿ ನಿತ್ಯ ಇವರ ಬಸ್ಸಿನಲ್ಲಿ ಕನ್ನಡ ರಾಜ್ಯೋತ್ಸವ ನೆಡೆಯುತ್ತಿದೆ.

2006 ರಿಂದ ಒಂದೇ ಬಸ್ಸನ್ನು ಉಪಯೋಗಿಸುತ್ತಿರುವ ನಟರಾಜ್ ಈ ಬಸ್ಸನ್ನು 'ನಿತ್ಯೋತ್ಸವ ಕನ್ನಡ ರಥ' ಎಂದು ನಾಮಕರಣ ಮಾಡಿದ್ದಾರೆ. ಈ ಬಸ್ಸಿನೊಳಗೆ ಕನ್ನಡ ನಾಡಿನ ಪ್ರಖ್ಯಾತ ಕವಿಗಳ, ಸಾಹಿತಿಗಳ, ಚಿತ್ರನಟರ ಭಾವಚಿತ್ರಗಳು ಉಚಿತವಾಗಿ ಸಿಗುತ್ತವೆ. ಮತ್ತು ಕನ್ನಡದ ಹಿರಿಯ ಕವಿಗಳ, ಚಿತ್ರನಟರ, ವಿಜ್ಞಾನಿಗಳ, ಸಂಗೀತಗಾರರ ಭಾವಚಿತ್ರಗಳು ರಾರಾಜಿಸುತ್ತವೆ. ಮತ್ತು ಕನ್ನಡ ಚಳುವಳಿಯಲ್ಲಿ ಭಾಗವಹಿಸಿದ ಸಾಹಿತಿಗಳ, ಜ್ಞಾನಪೀಠ-ಪಂಪ ಮೊದಲಾದ ಪ್ರಶಸ್ತಿಗಳನ್ನು ಪಡೆದವರ ಭಾವಚಿತ್ರಗಳನ್ನು ದೊಡ್ಡದಾಗಿ ಅಂಟಿಸಿದ್ದಾರೆ. ಜತೆಗೆ 1915 ರಿಂದ 2011 ರವರೆಗೆ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾವಚಿತ್ರಗಳನ್ನು ಮನಸೊರೆಗೊಳ್ಳುವಂತೆ ತೂಗು ಹಾಕಿದ್ದಾರೆ. ನವಂಬರ್ ತಿಂಗಳ 30 ದಿನಗಳಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಕನ್ನಡ ನಾಡು ನುಡಿಯ ಬಗ್ಗೆ ರಸಪ್ರಶ್ನೆಯನ್ನು ಕೇಳುತ್ತಾರೆ ಬಸ್ಸಿನೊಳಗೆ ಮೈಕ್ ನ ವ್ಯವಸ್ಥೆಯನ್ನು ಮಾಡಿದ್ದಾರೆ ಯಾಕೆಂದರೆ ರಸಪ್ರಶ್ನೆಗಳನ್ನು ಕೇಳಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು ಸರಿಯಾದ ಉತ್ತರವನ್ನು ಹೇಳಿದವರಿಗೆ ಪುಸ್ತಕಗಳನ್ನು ಬಹುಮಾನ ರೂಪವಾಗಿ ನೀಡುತ್ತಾರೆ. ಇದಕ್ಕಾಗಿ ಸುಮಾರು 4000 ಸಾವಿರ ಪ್ರಶ್ನೆಗಳನ್ನು ಸಂಗ್ರಹಿಸಿದ್ದಾರೆ ನಟರಾಜ್.

ಇಷ್ಟೇ ಅಲ್ಲಾ ಬಸ್ಸಿನೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳ ರೇಖಾ ಚಿತ್ರಗಳು, ಕನ್ನಡನಾಡಿನ ನದಿಗಳ ಹೆಸರು ಮತ್ತು ಪರಿಚಯ, ರಾಜ್ಯದ ಎಲ್ಲಾ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಇಷ್ಟೇಲ್ಲಾ ಇವರ ಬಸ್ಸಿನ ಆಕರ್ಷಣೆ.

ಇದಕ್ಕಾಗಿ ಸಾಕಷ್ಟು ಹಣ ಖರ್ಚಾಗುತ್ತದೆ. ಆದರೆ ಇವರು ಯಾರ ಹತ್ತಿರವೂ ಕೈಯೊಡ್ಡುವುದಿಲ್ಲ 'ನಮ್ಮ ಭಾಷೆಯನ್ನು ನಾವೇ ಉಳಿಸಬೇಕು;ಪ್ರೀತಿಸಬೇಕು' ಎನ್ನುವ ಇವರು ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ 600 ರೂಪಾಯಿಗಳನ್ನು ಕನ್ನಡದ ಕೆಲಸಗಳಿಗೆ ವಿನಿಯೋಗಿಸುತ್ತಾರೆ. ಈ ಒಂದು ಕಾರ್ಯಕ್ರಮಕ್ಕೆ ಅವರ ಸಂಸ್ಥೆಯ ಅಧಿಕಾರಿಗಳು ಮತ್ತು ಅವರ ಬಸ್ಸಿನ ಚಾಲಕರ ಸಹಕಾರವೂ ಇದೆ. ಆದರೂ ಕೆಲ ಕನ್ನಡ ಆಭಿಮಾನಿಗಳಾದ ಬೇರಿಯಾ ರಾಮಕುಮಾರ್, ಗುಂಡ್ಲಪೇಟೆ ಜವರೇಗೌಡ, ಗುಂಡ್ಲಪೇಟೆಯ ಬಾಲಾಜಿ ಪುಸ್ತಕ ಅಂಗಡಿಯವರು ಸಹ ನಟರಾಜ್ನಿಗೆ ಪುಸ್ತಕಗಳನ್ನು ನೀಡುವುದರ ಮೂಲಕ ಇವರು ಕನ್ನಡ ಪೇಮವನ್ನು ಮೆರೆದಿದ್ದಾರೆ. ನಟರಾಜ್ಜೊತೆ ಸತತ ಮೂರು ವರ್ಷದಿಂದ ಚಾಲಕ ಗುಡ್ಡಪ್ಪ ಪಶುಪತಿ ಹಾಳ್ ಇವರು ಸಹ ನಟರಾಜ್ ನಿಗೆ ಸಾಥ್ ನೀಡಿದ್ದಾರೆ.

ಇವರ ಕನ್ನಡ ಸೇವೆಯನ್ನು ಗುರುತಿಸಿ ಮೈಸೂರಿನ ಕನ್ನಡ ಅಭಿಮಾನಿ ಸಂಘದವರು ಕರ್ನಾಟಕ ಸುವರ್ಣ ಪ್ರಶಸ್ತಿ, ತುಮಕೂರಿನವರು ಅಪ್ಪಟ ಕನ್ನಡ ಅಭಿಮಾನಿ ಪ್ರಶಸ್ತಿ, ಕಾಸರಗೋಡಿನ ಕನ್ನಡ ಅಭಿಮಾನಿ ಸಂಘದವರು ಗಡಿನಾಡು ಕನ್ನಡ ಅಭಿಮಾನಿ ಎಂಬ ಬಿರುದುಗಳನ್ನು ಕೊಟ್ಟಿದ್ದಾರೆ. ದೆಹಲಿಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಇವರ ಕನ್ನಡ ಸೇವೆಯನ್ನು ಗುರುತಿಸಿ ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ.


ಓದುವ ದಿನಗಳಿಂದ ವಿವಿಧ ರೀತಿಯ ಚಿತ್ರಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿದ್ದ ಇವರು ಸ್ವಲ್ಪ ಕಾಲ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಬರೆದಿರುವ 'ನನ್ನ ಶಾಲೆ' ಎಂಬ ಕವನ ಸಂಕಲನಕ್ಕೆ ಪ್ರಶಸ್ತಿಯೂ ಬಂದಿದೆ.

ಹಾಗಾದರೆ ಈ ಅಪ್ಪಟ ಕನ್ನಡ ಪ್ರೇಮಿಯನ್ನು ಅಭಿನಂದಿಸಬೇಕೇ? ಹಲೋ ಎನ್ನಿ 9900478868

0 comments:

Post a Comment