ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಕಾದಂಬರಿ - ಭಾಗ 24 :ಅಧ್ಯಾಯ 8
ಅನು ಬೆಳ್ಳೆ.

ಅತ್ತ ಕಡೆಯಿಂದ ನಿಖಿಲ್ ಎರಡು ಮೂರು ಬಾರಿ 'ಹಲೋ' ಎಂದು ಎಚ್ಚರಿಸಿದಾಗಲೇ ವಾಸ್ತವಕ್ಕಿಳಿದಂತೆ, ನಿಜವಾಗಿಯೂ ನನಗೆ ತುಂಬಾ ಸಂತೋಷ ಆಗ್ತಿದೆ ಕಣೊ. ನಿನ್ನ ಡ್ಯಾಡ್ಗೆ ಹೇಗೆ ಕೃತಜ್ಞತೆ ಹೇಳ್ಬೇಕೂಂತಲೇ ತೋಚ್ತಾ ಇಲ್ಲ. ದಯವಿಟ್ಟು ಅವರಿಗೆ ನನ್ನ ಸಂತೋಷವನ್ನು ತಿಳಿಸಿ ಬಿಡು ಭಾವ ತುಂದಿಲನಾಗಿ ಹೇಳಿದಾಗ ನಿಖಿಲ್ಗೂ ಆಶ್ಚರ್ಯವೇ. ಆಶುತೋಶ್ನ ಕಣ್ಣುಗಳಲ್ಲಿ ಆಗ ಇದ್ದ ಹತಾಶೆಯ ನೆರಳನ್ನು ಸೂಕ್ಮವಾಗಿ ಗಮನಿಸಿದ್ದ ನಿಖಿಲ್ ಆ ಮನೆಯನ್ನು ವ್ಯವಹಾರಕ್ಕೆ ಬಳಸದೆ ಉಳಿಸಿದ್ದರ ಹಿಂದಿರುವ ಸತ್ಯ.ಖಂಡಿತವಾಗಿಯೂ ಅಶು. ದಯವಿಟ್ಟು ಈ ಅವಕಾಶನ ಕಳೆದುಕೊಳ್ಳಬೇಡ. ನಿನ್ನ ವೆಕೆಶನ್ ಸಮಯದಲ್ಲಿಯೇ ನಾವು ಅದರ ಉದ್ಘಾಟನೆಯನ್ನು ಇಟ್ಟುಕೊಳ್ಳೋದು.

ಆಗ್ಲೆ ನಿನ್ನಂತಹ ದೇಶ ಸೇವೆ ಮಾಡೋರಿಗೂ ಗೌರವ ಸೇರೋದು.
ಅಷ್ಟೊಂದು ದೊಡ್ಡ ಪದಗಳನ್ನು ಉಪಯೋಗಿಸ್ಬೇಡ. ನನ್ನ ವೆಕೆಶನ್ ಪಿರಿಯೆಡ್ ತಿಳೀಸ್ತೀನಿ. ಖಂಡಿತವಾಗಿಯೂ ನನ್ನ ತಂದೆಯ ನೆನಪಿಗೆ ಉಳಿಯುವ ಆ ಮನೆಯನ್ನು ಮರೆತು ಬಿಡಲಾರೆ. ಆ ಸಮಯಕ್ಕೆ ಬರ್ತೀನಿ ಅಂದ ಅಶುತೋಶ್.
ಆಶುತೋಶ್ಗೆ ನಿಖಿಲ್ನಿಂದ ವಿಷಯ ತಿಳಿದ ಬಳಿಕ ನೆಮ್ಮದಿಯೆನಿಸಿತು. ತಾನೇ ಅದನ್ನು ತಂದೆಯ ನೆನಪಾಗಿ ಉಳಿಸಿಕೊಳ್ಳಬೇಕಿಂದಿರುವುದನ್ನು ತನ್ನ ಅನುಪಸ್ಥಿತಿಯಲ್ಲಿಯಾದರೂ ಕಾರ್ಯರೂಪಕ್ಕೆ ಬರುತ್ತಿರುವುದಕ್ಕೆ ಮನಸ್ಸು ಹಿಗ್ಗಿತು.

ಒಂದು ರೀತಿ ಶಿಸ್ತಿನ ಜೀವನಕ್ಕೆ ಒಗ್ಗಿಕೊಂಡ ಮೇಲೆ ಸಂಬಂಧಗಳು, ಸಂಪರ್ಕಗಳು ತೀರಾ ವ್ಯವಹಾರಿಕವಾಗಿ ಬಿಡುತ್ತವೆನೊ ಅಂದುಕೊಂಡಿದ್ದೆಲ್ಲಾ ಸುಳ್ಳಾಯಿತು. ಅನಾಥನಂತೆ ಬದುಕಿದ್ದರೂ ಈಗ ದೇಶಸೇವೆಗೆ ನಿಂತಿರುವುದರ ಹಿಂದೆ ತನ್ನ ತಂದೆಯ ಪ್ರೋತ್ಸಾಹವೂ ಇತ್ತು. ಅವರು ಎಷ್ಟೇ ದೂರವಿದ್ದರೂ ಅವರು ಹಾಕಿಕೊಟ್ಟ ಶಿಸ್ತಿನ ಬದುಕನ್ನು ಎಂದೂ ಮರೆಯಲಾರ.
ಅವರ ಹಾಗೂ ಇಂದ್ರಸೇನ್ರ ಕುಟುಂಬದ ಒಡನಾಟ ಬಹಳವಾಗಿದ್ದರೂ ಆಗ ಇಂದ್ರಸೇನ್ ಕೂಡ ದೂರವೇ ಇದ್ದವರು. ಅಶುತೋಶ್ನ ತಾಯಿ ಸಾಯುವಾಗಲೂ ಇಂದ್ರಸೇನ್ರು ಇದ್ದಿದ್ದೆಲ್ಲಾ ಉತ್ತರ ಭಾರತದ ಕಡೆಯೇ. ಆದರೆ ಆ ಸಮಯದಲ್ಲಿ ಮಧ್ಯಮ ವರ್ಗದ ಜೀವನಕ್ಕೆ ಒಗ್ಗಿಕೊಂಡಿದ್ದ ಅವರು ಅಶುತೋಶ್ನನ್ನು ಕರೆದುಕೊಂಡು ಹೋಗಿ ಸಾಕುವಷ್ಟು ಅನುಕೂಲತೆಯಿರಲಿಲ್ಲ. ಹಾಗಂತ ಸುಮ್ಮನೆ ಬಿಟ್ಟವರು ಅಲ್ಲ. ತನ್ನದೇ ಸಂಬಂಧಿಕರೊಬ್ಬರನ್ನು ಅಶುತೋಶ್ನನ್ನು ಸಾಕಲು ಗೊತ್ತು ಮಾಡಿದ್ದರು.

ಮೇಜರ್ ಮಗನನ್ನು ಮಿಲಿಟಿರಿ ಶಾಲೆಗೆ ಸೇರಿಸುವ ಇಚ್ಚೆ ಪ್ರಕಟಿಸಿದಾಗ ತಡೆದವರೇ ಇಂದ್ರಸೇನ್ರು.
ಒಂದೆರಡು ವರ್ಷ ಇಲ್ಲೆ ಎಲ್ಲಾದರೂ ಇರಲಿ. ಮುಂದೆ ನಿನಗೆ ಕಷ್ಟ ಆಗೋದಾದ್ರೆ ನಾನೇ ಅವನನ್ನು ಸಾಕ್ತೀನಿ ಕಣೊ ಅಂದಿದ್ದರು. ಆದರೆ ಆ ಮಾತನ್ನು ಉಳಿಸಿಕೊಳ್ಳಲು ಅವರ ಕೈಯಿಂದ ಸಾಧ್ಯವಾಗಲಿಲ್ಲ. ಮತ್ತೊಂದು ಐದು ವರ್ಷಗಳು ಉತ್ತರ ಭಾರತದ ಕಡೆಯೇ ಉಳಿಯುವಂತಾಯಿತು. ಅದರೂ ಕೊಟ್ಟ ಮಾತು ತಪ್ಪಿಸಿಕೊಳ್ಳಲಾರರು. ವಿ.ಆರ್.ಎಸ್. ಪಡೆದುಕೊಂಡು ಬಂದಳಿದಿದ್ದ ನೇರವಾಗಿ ಬೆಂಗಳೂರಿಗೆ. ಆಗ ಮೇಜರ್ ಮನೆಯ ಪಕ್ಕದಲ್ಲಿಯೇ ಒಂದು ಪ್ಲಾಟ್ ಖರೀದಿಸಿ ಅಶುತೋಶ್ ಬಗ್ಗೆ ಕ್ಯಾರ್ ತೆಗೆದುಕೊಂಡಿದ್ದವರು ನಿಖಿಲ್ನಂತೆ ಅವನನ್ನು ಮುದ್ದಿನಿಂದ ಸಾಕಿದ್ದರು.
ಬರಬರುತ್ತಾ ಎರಡು ಕುಟುಂಬಗಳ ನಡುವೆ ಆತ್ಮೀಯತೆ ಬೆಳೆಯಿತು. ಅಷ್ಟು ಹೊತ್ತಿಗಾಗಲೇ ಸಿಡಿಲಿನಂತ ವಾರ್ತೆ ಬಂದಿತ್ತು. ಮೇಜರ್ ಇಲ್ಲವಾಗಿದ್ದರು.

0 comments:

Post a Comment