ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಗೋಸಂರಕ್ಷಣೆಗೆ ಕಂಕಣಬದ್ಧವಾಗಿರುವ ಮಠದ ವತಿಯಿಂದ ನಾಡಿನಲ್ಲಿ ಗೋವುಗಳಿಗೆ ಸುಸಜ್ಜಿತವಾದ ಅತ್ಯಾಧುನಿಕ ಆಸ್ಪತ್ರೆ ಕಟ್ಟಲಾಗುವುದು. ಈ ಮೂಲಕ ಗೋಸಂರಕ್ಷಣೆಯ ಕೈಂಕರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನೆರವೇರಿಸಲಾಗುವುದು ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದ್ದಾರೆ.
ನಂದನ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯನ್ನು ಪೂರ್ತಿಗೊಳಿಸಿದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗಿರಿನಗರ ರಾಮಾಶ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಆಶೀರ್ವಚನದಲ್ಲಿ ಈ ವಿವರ ನೀಡಿದರು.

ಇದೇ ವೇಳೆ ಕೋಲ್ಕತ್ತದ ರಾಧೇಶ್ಯಾಮ್ ಅಗರ್‍ವಾಲ್ ಮತ್ತು ರಾಧೇಶ್ಯಾಮ್ ಗೋಯೆಂಕಾಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ನೀಡಿ ಆಶೀರ್ವಾದ ಮಾಡಿದರು.

ಇದಕ್ಕೂ ಮುನ್ನ ಭಾನುವಾರ ಬೆಳಗ್ಗೆ ಶ್ರೀರಾಮ ದೇವರ ಪೂಜೆ ಮುಗಿಸಿ ರಾಘವೇಶ್ವರ ಶ್ರೀಗಳು ಬಳಿಕ ಸಾವಿರಾರು ಭಕ್ತರ ಮೆರವಣಿಗೆಯೊಂದಿಗೆ ಅರ್ಕಾವತಿ ನದಿಯ ಸೀಮೋಲ್ಲಂಘನ ಮಾಡಿದರು. ಅರ್ಕಾವತಿ ದಾಟಿದ ಶ್ರೀಗಳು ರಾಮೋಹಳ್ಳಿ ಬಳಿಯ ಶ್ರೀ ಕ್ಷೇತ್ರ ಮುಕ್ತಿನಾಗ ಸ್ವಾಮಿಗೆ ಪೂಜೆ ನೆರವೇರಿಸಿದರು. ಸುಮಾರು ಆರು ಸಾವಿರಕ್ಕೂ ಹೆಚ್ಚು ಭಕ್ತರು ಸ್ವಾಮಿಜಿ ಅವರ ಆಶೀರ್ವಾದ ಪಡೆದು ಪುನೀತರಾದರು. ಈ ಬಾರಿಯ ಚಾತುರ್ಮಾಸ್ಯ ಕಾರ್ಯಕ್ರಮದ ವೇಳೆ ಶ್ರೀಗಳು ಬೆಂಗಳೂರು ನಗರ ವಿವಿಧೆಡೆಯಲ್ಲಿ ವಿಶಿಷ್ಟವಾದ ರಾಮಕಥಾ ಕಾರ್ಯಕ್ರಮ ನಡೆಸಿಕೊಟ್ಟರು.

0 comments:

Post a Comment