ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಇದು ಈ ಕನಸು ವಿಶೇಷ


ಮುಂದೆ ಓದಿ...ರೋಚಕ ಕಥೆ....

ಆಗುಂಬೆ ಎಂದಾಕ್ಷಣ ಪ್ರೇಮ ಕಾವ್ಯ ನೆನಪಾಗುತ್ತದೆ...ಆಗುಂಬೆ ನಿಸರ್ಗ ಸೌಂದರ್ಯಕ್ಕೆ ಇನ್ನೊಂದು ಹೆಸರು. ದಿನಂಪ್ರತಿ ಸಹಸ್ರಾರು ಸಂಖ್ಯೆಯ ವಾಹನಗಳು ಈ ಘಾಟಿ ರಸ್ತೆಯನ್ನೇರಿಳಿದು ಮಾಡುತ್ತವೆ. ಒಂದೂರಿಂದಿನ್ನೊಂದೂರಿಗೆ ಸಂಪರ್ಕ ಕೊಂಡಿಯಾಗಿ ಇದೇ ಘಾಟಿ ರಸ್ತೆಯಿದೆ. ಲಕ್ಷಾಂತರ ಪ್ರಯಾಣಿಕರು ಇದೇ ಘಾಟಿ ರಸ್ತೆಯಲ್ಲಿ ನಿಸರ್ಗ ಸವಿಸವಿಯುತ್ತಾ ಪ್ರಯಾಣಿಸುತ್ತಾರೆ. ಆದರೆ ಇವರ ಸವಿಗೆ ಭಂಗವೊಡ್ಡುತ್ತಿದೆ ಇಲ್ಲಿನ ಬೃಹದಾಕಾರದ ರಸ್ತೆ ಹೊಂಡಗಳು...


ಆಗುಂಬೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಒಂದು ಊರು. ಪಶ್ಚಿಮ ಘಟ್ಟದಲ್ಲಿರುವ ಈ ಊರು ಒಂದು ಪ್ರವಾಸಿ ಸ್ಥಳ. ಇಲ್ಲಿನ ಪ್ರಕೃತಿ ಸೌಂದರ್ಯ ಅದ್ವಿತೀಯ. ಸಾಯಂಕಾಲದಲ್ಲಿ ಸೂರ್ಯಾಸ್ತದ ದೃಶ್ಯ,ವನ್ನು ನೋಡಲು ಸಾವಿರಾರು ಜನ ಬರುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಆಕಾಶ ನಿರ್ಮಲವಾಗಿರುವುದರಿಂದ, ಮುಳುಗುವ ಸೂರ್ಯನ ದೃಶ್ಯ ಅತ್ಯಂತ ಮುದನೀಡುತ್ತದೆ. ಆದರೆ ಮಳೆಯೇ ಮಲೆನಾಡಿನ ಜೀವಾಳ. ಮಳೆಗಾಲದಲ್ಲಿ ಕಾದಿದ್ದು, ಸೂರ್ಯಾಸ್ತವನ್ನು ಕಾಣುವುದೇ ಒಂದು ಸಡಗರದ ಸನ್ನಿವೇಶ.

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಆಗುಂಬೆಯೂ ಒಂದು. ಈ ಕಾರಣಕ್ಕಗಿಯೆ ಆಗುಂಬೆಯನ್ನು "ದಕ್ಷಿಣದ ಚಿರಾಪುಂಜಿ" ಎಂದೂ ಕರೆಯುತ್ತಾರೆ. ಭಾರತದ ಏಕೈಕ ಶಾಶ್ವತ ಹರಿದ್ವರ್ಣವನ ಸಂಶೋಧನ ಕೇಂದ್ರ ಆಗುಂಬೆಯಲ್ಲಿದೆ. ಹೆಸರುವಾಸಿ ಉರಗತಜ್ಞ ರೊಮುಲುಸ್ ವಿಟೆಕರ್ ಆಗುಂಬೆಯನ್ನು "ಕಾಳಿಂಗ ಸರ್ಪಗಳ ರಾಜಧಾನಿ" ಎಂದು ಕರೆದಿದ್ದಾರೆ.

೨೦೦೫ ನಿಂದೀಚೆಗೆ ಆಗುಂಬೆಯಲ್ಲಿ ನಕ್ಸಲ್ ಚಟುವಟಿಕೆ ಶುರುವಾಗಿದೆಯಾದರೂ ಬರುವ ಪ್ರವಾಸಿಗಳು ಕಡಿಮೆಯೇನಾಗಿಲ್ಲ. ಏನೇ ಇರಲಿ ಆಗುಂಬೆಯ ಕಡಿದಾದ ತಿರುವುಗಳಲ್ಲಿ ಸಂಚರಿಸುವುದೇ ಒಂದು ರೋಚಕ ಅನುಭವ. ಆದರೆ ಇದೀಗ ಈ ತಿರುವುಗಳಲ್ಲೇ ಬೃಹದಾಕಾರದ "ಬಾವಿ"ಗಳು ಸೃಷ್ಠಿಯಾಗಿಬಿಟ್ಟಿವೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗುತ್ತಿದೆ. ನಿಸರ್ಗ ಸವಿ ಸವಿಯುತ್ತಾ ಬೆಟ್ಟ ಹತ್ತಲು ತೊಂದರೆಯುಂಟಾಗುತ್ತಿದೆ. ಘಾಟಿ ರಸ್ತೆಯಂತೂ ತೀರಾ ಕಿರಿದು...ಆದರೆ ಕೆಲವೆಡೆಗಳಲ್ಲಿ ರಸ್ತೆ ಬದಿಯ ನೀರು ಹರಿದು ಹೋಗಲು ಚರಂಡಿ ಮಾಡಲಾಗಿತ್ತು. ಇದೀಗ ರಸ್ತೆಯನ್ನು ಅಗಲಗೊಳಿಸುವ ನೆಪವೊಡ್ಡಿ ಈ ಚರಂಡಿಗಳಿಗೆ ಕಾಂಕ್ರೀಟ್ ಹಾಕಿ ತುಂಬಿ ರಸ್ತೆ ಅಗಲಗೊಳಿಸುವ ಕಾರ್ಯ ಮಾಡಲಾಗಿದೆ. ಇದರಿಂದಾಗಿ ರಸ್ತೆ ಬದಿಯಲ್ಲಿ ಮಳೆನೀರು ಹರಿದು ಹೋಗಲು ಸ್ಥಳಾವಕಾಶವೇ ಇಲ್ಲವೆಂಬಂತಾಗಿದೆ. ಮೊದಲೇ ಮರಗಿಡಗಳಿಂದ ನೀರು ರಸ್ತೆಗೆ ಬಿದ್ದು ರಸ್ತೆಯ ಡಾಂಬರು ಕಿತ್ತುಹೋಗಿದೆ. ಇನ್ನು ಚರಂಡಿಯೂ ಇಲ್ಲದೆ ಮಳೆನೀರು ಪೂರ್ತಿ ರಸ್ತೆಮೇಲೆಯೇ ಹರಿದುಹೋಗುವಂತಹ ಪರಿಸ್ಥಿತಿ. ಇತ್ತ ಬೃಹದಾಕಾರದ ಹೊಂಡಗುಂಡಿಗಳು...ಒಟ್ಟಾರೆಯಾಗಿ ಘಾಟಿ ರಸ್ತೆಯ ಗೋಳು ಹೇಳ ತೀರದು. ಮಂತ್ರಿ ಮಹೋದಯರಿಗೆ ಇದರ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ. ಈ ಭಾಗದ ಜನಪ್ರತಿನಿಧಿಗಳಿಗಂತೂ ಹೀಗೊಂದು ಘಾಟಿ ರಸ್ತೆ ಇದೆ ಎಂಬುದು ಗೊತ್ತಿದೆಯೋ ಇಲ್ಲವೋ...ಒಟ್ಟಿನಲ್ಲಿ ಪ್ರಮುಖ ರಸ್ತೆಯೊಂದು ತೀರಾ ಹದಗೆಟ್ಟು ಹೋಗಿದೆ.2 comments:

Anonymous said...

ಈ ಕನಸು.ಕಾಂ ತಂಡಕ್ಕಾದರೂ ಈ ರಸ್ತೆಯ ಅವ್ಯವಸ್ಥೆ ಗೋಚರವಾಯ್ತಲ್ಲಾ.. thank u ಈ ಕನಸು...

ಪ್ರಕಾಶ್ ತೀರ್ಥಹಳ್ಳಿ...

Raymond Cardoza said...

recently i went to modubelle near by ARBI Nagar , my god Roads , no i cant find road at all not even single vehicle is going there totally dump roads..

I cant understand what the area panchayath officer is doing there

Post a Comment