ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಪುತ್ತೂರು ವರದಿ

ಗಿಡಗೆಳೆತನದಲ್ಲಿ ಆಸಕ್ತಿಯಿರುವ ಸಮಾನಾಸಕ್ತರ ಸಂಘಟನೆ - 'ಸಮೃದ್ಧಿ'. ಅದಕ್ಕೀಗ ಇಪ್ಪತ್ತರ ಹರೆಯ. ಕಾರ್ಯಕ್ಷೇತ್ರ ಪುತ್ತೂರು ಸುತ್ತಮುತ್ತ. ಆದರೆ ಎಫೆಕ್ಟ್ ಮಾತ್ರ ಜಿಲ್ಲಾ ವ್ಯಾಪ್ತಿ. ಸಸ್ಯಗಳು, ಬೀಜಗಳನ್ನು ಪರಸ್ಪರ ಹಂಚಿಕೊಳ್ಳುವುದು, ಔಷಧೀಯ ಸಸ್ಯಗಳ ಪರಿಚಯ, ಅವುಗಳ ಸಂರಕ್ಷಣೆ, ಬೆಳೆಯುವಲ್ಲಿ ಅನುಭವಗಳ ವಿನಿಮಯಗಳು ಸಮೃದ್ಧಿಯ ಕಾರ್ಯಚಟುವಟಿಕೆಗಳು.ಬನಾರಸ್ ನೆಲ್ಲಿ, ಕಾಂಚಿಕೇಳ ಬಾಳೆ, ಇದು ಪಾಲೂರು - ವನ್ ಹಲಸು', ಮಂತುಹುಳಿ, ಅಮ್ಚಿಕಾಯಿ, ಹನುಮಫಲ, ಭೀಮಫಲ, ಮುಳ್ಳು ಸೀತಾಫಲ, ಹಾವು ಬದನೆ, ಬಂಟಕೇಪುಳು, ರುದ್ರಾಕ್ಷಿ, ಮೊಟ್ಟೆಮುಳ್ಳು ಸೌತೆ, ಕರಿಯಾಲ ಹರಿವೆ, ಸಿಹಿದಾರೆಹುಳಿ.. ಹೀಗೆ ಸಮೃದ್ಧಿಯ ಕಡತದ ಪಟ್ಟಿ ಉದ್ದುದ್ದ.


ಬಾಂಗ್ಲಾ ಬಸಳೆ, ಸೆಲೋಶಿಯಾ ಅರ್ಜೆಂಟಿಯಾ ಎಲೆ ತರಕಾರಿ ಗಿಡ, ಸನ್ಸೆಟ್ ಸೋಲೋ ಪಪ್ಪಾಯಿಗಳು.. ಸಮೃದ್ಧಿಯ ಮೂಲಕ ಬಂದವುಗಳು. ಕಸಿಕಟ್ಟುವ ಮಾಹಿತಿ, ಪ್ರವಾಸ, ನಿರ್ವಿಷವಾಗಿ ತರಕಾರಿ ಬೆಳೆವ ರೀತಿ, ರೋಗ ಹತೋಟಿ, ಶ್ರಮ ಉಳಿಸುವ ಜಾಣ್ಮೆಗಳು, ಹೊಸ ಕೃಷಿಕರ ಪರಿಚಯ, ಯಂತ್ರೋಪಕರಣಗಳ ಮಾಹಿತಿ.. ಹೀಗೆ ಸಮೃದ್ಧಿಯ ಹೂರಣದಿಂದಾಗಿ ಸದಸ್ಯರಿಗೆ ಪ್ರಯೋಜನವಾಗಿದೆ. 'ಬೀಜ ನಿಧಿ'ಯು ಬೀಜಗಳ ತಿಜೋರಿ. ಇಪ್ಪತ್ತು ವರುಷಗಳ ಕಾಲ ಸದ್ದಿಲ್ಲದೆ ಕೃಷಿ ಮತ್ತು ಕೃಷಿಕನ ಮಧ್ಯೆ ಕೊಂಡಿಯಾಗಿದ್ದ ಸಮೃದ್ಧಿಗೆ ಈಗ ವಿಂಶತಿಯ ಸಂತಸ.

ಅಕ್ಟೋಬರ್ 12, ಶುಕ್ರವಾರದಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಪುತ್ತೂರು ತಾಲೂಕಿನ ಸವಣೂರಿನ 'ಆಶ್ವಿನಿ ಫಾರ್ಮ್ ನಲ್ಲಿ' ಇಪ್ಪತ್ತರ ಸಂತಸದ ಸಂಭ್ರಮ. ಸಮೃದ್ಧಿಯ ಆರಂಭದಿಂದಲೂ ಸಕ್ರಿಯರಾಗಿರುವ ಹಿರಿಯ ಕೃಷಿಕ ಡಾ. ಕೆ.ಎಸ್.ಕಾಮತರಿಂದ ಉದ್ಘಾಟನೆ. ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಮೃದ್ಧಿಯನ್ನು ಅಂದು ಉದ್ಘಾಟಿಸಿದ್ದ ಹಿರಿಯರಾದ ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸ್ ಮತ್ತು ಸ್ಥಾಪಕ ಅಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ ಅವರ ಉಪಸ್ಥಿತಿ. ಈ ಸಂದರ್ಭದಲ್ಲಿ ಕೃಷಿಕ ತಂತ್ರಜ್ಞ ಕೋಡಪದವಿನ ನಿಟಿಲೆ ಮಹಾಬಲೇಶ್ವರ ಭಟ್ ಅವರಿಗೆ ಗೌರವಾರ್ಪಣೆ.
ಪಾಣಾಜೆಯ ಜಯಲಕ್ಷ್ಮೀ ವೆಂಕಟ್ರಾಮ ದೈತೋಟರಿಂದ 'ಆಹಾರವೇ ಔಷಧ' ಎಂಬ ಮಾಹಿತಿ, ಸಮೃದ್ಧಿಯಿಂದ ಗಿಡ ಗೆಳೆತನ ಅನುಭವ ಕಥನ ನಡೆಯಲಿದೆ. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಅಡಿಕೆ ಪತ್ರಿಕೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಸವಣೂರು ವಲಯದ ಸಾವಯದ ಕೃಷಿಕರು ಸಮಾರಂಭಕ್ಕೆ ಹೆಗಲೆಣೆ.

0 comments:

Post a Comment