ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಮನುಷ್ಯನಿಗೆ ಯಾವುದು ಬೇಡ ಹೇಳಿ...ಎಲ್ಲವೂ ಬೇಕು. ಆತನ ಆಸೆಗೆ ಮಿತಿಯೇ ಇಲ್ಲ...ಗದ್ದೆ, ತೋಟಗಳ ಬದಿಯಲ್ಲಿ , ಬೇಲಿಗೆ ಆಧಾರವಾಗಿ ನೆಡುತ್ತಿದ್ದ ಕತ್ತಾಳೆಯನ್ನೂ ಈ ಮಾನವ ಬಿಡುವುದಿಲ್ಲ ಎಂದರೆ ಅಚ್ಚರಿಯಾಗದಿರದು. ಕತ್ತಾಳೆಯನ್ನು ಕಿತ್ತೊಗೆಯದಿರಿ ಎಂಬಂತಾಗಿದೆ ಇಂದಿನ ಸ್ಥಿತಿ. ಹಿಂದೆಲ್ಲಾ ಈ ಕತ್ತಾಳೆಯ ನಾರನ್ನು ಉಪಯೋಗಿಸಿ ದಾರ ತಯಾರಿಸುತ್ತಿದ್ದರು. ಆದರೆ ಇಂದು ಇದೇ ದೊಡ್ಡ ಉದ್ಯಮದಂತಾಗಿದೆ...!


ಕ್ಯಾಕ್ಟಸ್ ವರ್ಗಕ್ಕೆ ಸೇರಿದ ಗಿಡಗಳು ಹೂಕುಂಡಗಳಲ್ಲಿ ಶೋಭಿಸುವುದಕ್ಕೆ ಮಾತ್ರ ಲಾಯಕ್ಕು ಎಂದು ತಿಳಿದಿದ್ದೆ. ಈ ವರ್ಗಕ್ಕೆ ಸೇರಬಹುದಾದ 'ಕತ್ತಾಳೆ' ಎಂಬ ಗಿಡದ ಎಲೆಯಿಂದ ಹಗ್ಗ ತಯಾರಿಸಬಹುದು ಎಂದು ಮೊನ್ನೆ ತಾನೇ ತಿಳಿಯಿತು. ನಂಜನಗೂಡಿನ ಬದನವಾಳು ಸಮೀಪ ಹಳ್ಳೀ ದಾರಿಯಲ್ಲಿ ನಡೆಯುತ್ತಿದ್ದಾಗ ಕ್ಲಿಕ್ಕಿಸಿದ ಚಿತ್ರಗಳಿವು.
ಹಿಂದೆ ಈ ಎಲೆಗಳನ್ನು ನೀರಲ್ಲಿ ದಿನಗಟ್ಟಲೆ ನೆನೆಸಿ ನಾರು ತೆಗೆಯುತ್ತಿದ್ದರಂತೆ. ಈಗ ಈ ಕೆಲಸವನ್ನು ಯಂತ್ರ ಕ್ಷಣಾರ್ಧದಲ್ಲಿ ಮಾಡುತ್ತದೆ. ನಾರನ್ನು ಬಿಸಿಲಿನಲ್ಲಿ ಒಣಗಿಸಿ ಹಗ್ಗ ತಯಾರಿಸುತ್ತಾರೆ.


ಹೇಮಮಾಲಾ . ಬಿ. ಮೈಸೂರು.

0 comments:

Post a Comment