ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ನಮ್ಮ ರಾಜ್ಯದಲ್ಲಿ ಪ್ರವಾಸಿ ತಾಣಗಳಿಗೇನೂ ಕೊರತೆ ಇಲ್ಲ. ಅಂತಹ ಪ್ರವಾಸಿ ತಾಣಗಳಲ್ಲಿ ಕಲ್ಹತ್ತಿಗಿರಿ ಜಲಪಾತವೂ ಒಂದು. ಅಹ್ಲಾದಕರ ಹವಾಮಾನ, ಹಸಿರು ಹೊದ್ದ ಬೆಟ್ಟಗುಡ್ಡಗಳು, ನಿಸರ್ಗ ನಿರ್ಮಿತ ವೀಕ್ಷಣಾ ಕೇಂದ್ರಗಳಂತಿರುವ ಗಿರಿಶಿಖರಗಳು, ಕಣಿವೆಯ ನಡುವಿನ ಕಾಫಿತೋಟಗಳು, ನಿತ್ಯ ಹರಿದ್ವರ್ಣದ ಶೋಲಾ ಕಾಡುಗಳಿಂದ ಕೂಡಿರುವ ಕೆಮ್ಮಣ್ಣುಗುಂಡಿ ರಾಜ್ಯದ ಪ್ರಮುಖ ಗಿರಿಧಾಮ.ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಜಲಪಾತಗಳು ಅಮೋಘ ಕಾಣಿಕೆಯನ್ನು ಕೊಟ್ಟಿವೆ.


ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿದೆ. ಕಲ್ಹತ್ತಿಗಿರಿಗೆ ಇನ್ನೂಂದು ಹೆಸರಿದೆ ಅದೇ ಕಾಳಹಸ್ತಿ ಜಲಪಾತ ಎಂದೂ. ಸಮುದ್ರ ಮಟ್ಟದಿಂದ ಸುಮಾರು ಆರು ಸಾವಿರಕ್ಕೂ ಅಧಿಕ ಅಡಿಗಳಷ್ಟು ಎತ್ತರದ ಗಿರಿಯನ್ನು ಕಲ್ಹತ್ತಿಗಿರಿ ಎನ್ನುತ್ತಾರೆ.ಇದರ ತುದಿಯಿಂದ ಜಲಧಾರೆಯೊಂದು ಸುಮಾರು 400 ಅಡಿಗಳಷ್ಟು ಆಳಕ್ಕೆ ಎರಡು ಹಂತಗಳಲ್ಲಿ ಧುಮುಕುತ್ತದೆ. ಕಲ್ಹತ್ತಿಗಿರಿಯ ನೆತ್ತಿಯಿಂದ ಹರಿದು ಬಂದ ನೀರು ವಿಜಯನಗರ ಅರಸರ ಕಾಲದ ವೀರಭದ್ರ ಗುಡಿ ಬಳಿ ಜಲಧಾರೆಯಾಗಿ 8-10 ಅಡಿ ಎತ್ತರದಿಂದ ಅನೆಯ ಆಕಾರದಲ್ಲಿರುವ ಬಂಡೆಗಳ ನಡುವಿನಿಂದ ಧುಮುಕುತ್ತದೆ.

ಯಾವುದೇ ಅಪಾಯವಿಲ್ಲದ ವೀರಭದ್ರ ಗುಡಿಯ ಬದಿಯ ನೀರ ಧಾರೆಗೆ ಮೈಯೊಡ್ಡುವ ಪ್ರವಾಸಿಗರು ದಣಿದ ದೇಹಕ್ಕೆ ತಣ್ಣನೆಯ ಜಲಧಾರೆ ಮನಕ್ಕೆ ತಂಪೆರೆಯುತ್ತದೆ. ಆಯಾಸ ದೂರ ಮಾಡುತ್ತದೆ. ಹೀಗೆ ದೈಹಿಕ ಮತ್ತು ಮಾನಸಿಕ ಶ್ರಮಗಳೆರಡೂ ಒಟ್ಟೊಟ್ಟಿಗೆ ಪರಿಹಾರವಾದಂತೆನಿಸುತ್ತದೆ. ಇಲ್ಲಿ ಸ್ನಾನವನ್ನು ಮಾಡಿದರೆ ಚರ್ಮ ಕಾಯಿಲೆ ಬರುವುದಿಲ್ಲ ಎಂದೂ ಹೇಳುತ್ತಾರೆ. ಏಕೆಂದರೆ ಕಾಡಿನ ಮಧ್ಯ ನೂರಾರು ಕಿ. ಮೀ ದೂರದಿಂದ ಬರುವ ನೀರು ಅನೇಕ ಗಿಡಮೂಲಿಕೆ ಸಸ್ಯಗಳ ಬುಡದಿಂದ ಬರುವುದರಿಂದ ಇಲ್ಲಿಯ ನೀರು ಔಷಧಿ ಗುಣವನ್ನು ಹೊಂದಿರುತ್ತದೆ ಎನ್ನುವ ನಂಬಿಕೆ ಇಲ್ಲಿಗೆ ಬರುವ ಪ್ರವಾಸಿಗರಲ್ಲಿದೆ.ಜಲಪಾತದ ಸನಿಹವೇ ಪ್ರವಾಸಿ ಮಂದಿರದ ವ್ಯವಸ್ಥೆ ಇದೆ. ತಿಂಡಿ ತಿನಿಸು ಪಾನಿಯಗಳ ಅಂಗಡಿಗಳಿವೆ. ಇಲ್ಲಿನ ಮತ್ತೊಂದು ಪ್ರಮುಖ ಜಲಪಾತ ಹೆಬ್ಬೆ 10 ಕಿ. ಮೀ ದೂರದಲ್ಲಿದೆ. ಬಾಬುಬುಡನ್ಗಿರಿ ಪರಿಸರ ಸವಿಯಲು 30 ಕಿ.ಮೀ ಸಾಗಬೇಕು. 40 ಕಿ.ಮೀ ಕ್ರಮಿಸಿದರೆ ರಾಜ್ಯದ ಅತಿ ಎತ್ತರದ ಶಿಖರವೆನ್ನಲಾದ ಮುಳ್ಳಯ್ಯನಗಿರಿ ಸಹ ನೋಡಬಹುದು.

ದುರಾದೃಷ್ಟವೆಂದರೆ ಪ್ರಕೃತಿ ಸೊಬಗಿನ ಈ ಸುಂದರ ಪರಿಸರ ಪ್ರವಾಸಿಗರಿಂದಾಗಿ ಮಾಲಿನ್ಯಕ್ಕೆ ಒಳಗಾಗಿದೆ. ತ್ಯಾಜ್ಯ ವಸ್ತುಗಳ ಗೋಡೌನ್ನಂತೆ ಯಾರಿಗಾದರೂ ಕಂಡರೆ ಆಶ್ಚರ್ಯವಿಲ್ಲ. ಈ ಜಲಧಾರೆಯಲ್ಲಿ ಸ್ನಾನ ಮಾಡಿದ ಬಳಿಕ ಒದ್ದೆ ಬಟ್ಟೆಗಳನ್ನು ಪ್ರವೇಶ ಹಾದಿಯ ಮೆಟ್ಟಿಲಿನ ಪಕ್ಕದ ಕಬ್ಬಿಣದ ಕಂಬಿಗಳ ಮೇಲೆ ಹಾಕುತ್ತಾರೆ. ತಾವು ತಿನ್ನಲು ಕುಡಿಯಲು ತಂದ ಪ್ಲಾಸ್ಟಿಕ್ ತಟ್ಟೆ, ಲೋಟ, ಮಧ್ಯದ ಬಾಟಲಿಗಳು ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ.

ಪ್ರವಾಸ, ಪ್ರವಾಸಿ ತಾಣಗಳು ಕೇವಲ ಮೋಜು ಮತ್ತು ಮನೋರಂಜನೆಗೆಷ್ಟೇ ಸೀಮಿತವಾಗಬಾರದು. ಸ್ಥಳ ಚರಿತ್ರೆ, ಸಂಸ್ಕ್ರತಿ ಪರಂಪರೆ ಅರಿಯುವ ತಾಣವಾಗಬೇಕು.ರಾಜ್ಯ ಸರಕಾರ ಪ್ರವಾಸೋದ್ಯಮವನ್ನು 'ಮಾರ್ಕೆಟ್' ಮಾಡಿಕೋಳ್ಳಲು ಯತ್ನಿಸುತ್ತಿದೆ. ಇದರಲ್ಲಿ ತಪ್ಪಿಲ್ಲ ಆದರೆ ಈ ಬರದಲ್ಲಿ ಪ್ರವಾಸಿ ತಾಣಗಳಿಗೆ ಕಳಂಕ ತಟ್ಟದಿರಲಿ.

ಟಿ.ಶಿವಕುಮಾರ್
ಶಿಕ್ಷಕರು.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಳೇಶ್ವರ
(ತಾ) ಹಾನಗಲ್ಲ (ಜಿ) ಹಾವೇರಿ


0 comments:

Post a Comment