ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಭಾರತ ಕಂಡ ಎರಡನೆ ಅತಿ ಜನಪ್ರೀಯ ನಾಯಕ ನಟ, ದೇಶದ ಇತಿಹಾಸದಲ್ಲೆ ಬಂದ ಎರಡನೆ ಅತಿ ಜನಪ್ರೀಯ ಮುಖ್ಯಮಂತ್ರಿ ನಂದಮೂರಿ ತಾರಕ ರಾಮಾರಾವ್ [ಎನ್.ಟಿ.ಆರ್ ]. ಅವರು ಪಕ್ಷ ಕಟ್ಟಿದರು, ಕಟ್ಟಿ ಒಂದು ವರ್ಷವಾದ ಸಂದರ್ಭದಲ್ಲೇ ರಾಜ್ಯದಾದ್ಯಂತ ಚುನಾವಣೆಯ ಪಕ್ಷ ವಿಜಯಶಾಲಿಯಾಯಿತು. ಎನ್.ಟಿ.ಆರ್ ಮುಖ್ಯಮಂತ್ರಿಯಾದರು ಇಂದೂ ಕೂಡ ಅವರ ಪೊಟೊಗೆ ಕೈ ಮುಗಿಯುವವರು ಆಂಧ್ರದಲ್ಲಿ ಇದ್ದಾರೆ. ಇಷ್ಟೆಲ್ಲ ಗಳಿಸಿದ ವ್ಯಕ್ತಿ ಸಾಯುವಾಗ ಅವರ ಕುಟುಂಬದವರೆ ಜೊತೆಯಲ್ಲಿ ಇರಲಿಲ್ಲ !


1994ರ ನಂತರ ಎನ್.ಟಿ.ಆರ್.ರ ಕೊನೆಗಾಲ ಪ್ರಾರಂಭವಾಯಿತು. ಅವರು ಸತ್ತರೆ ಯಾರು ಉತ್ತರಾಧಿಕಾರಿ ಎಂದು ಚರ್ಚೆಯಾಗುತ್ತಿತ್ತು. ಅವರ ಮಕ್ಕಳು, ಅಳಿಯ ಚಂದ್ರಬಾಬು ನಾಯ್ಡು ನಡುವೆ ಸ್ಪರ್ಧೆ ಪ್ರಾರಂಭವಾಯಿತು. ಮನುಷ್ಯನೊಬ್ಬ ಬದುಕಿರುವಾಗಲೇ ಆತ ಸತ್ತ ನಂತರ ಯಾರು ಉತ್ತರಾಧಿಕಾರಿ ಎಂದು ಮನೆಯಲ್ಲಿ ಜಗಳವಾದರೆ ಆ ಮನುಷ್ಯನ ಮಾನಸಿಕ ಸ್ಥಿತಿ ಹೇಗಾಗಬೇಡ. ಅದೇ ಸ್ಥಿತಿ ಎನ್.ಟಿ.ಆರ್ ರಿಗೂ ಬಂತು. ಸಮಸ್ತ ಆಂಧ್ರ ಪ್ರದೇಶವನ್ನು ಮೊದಲು ತನ್ನ ಸಿನಿಮಾಗಳ ಮೂಲಕ ನಂತರ ರಾಜಕೀಯದ ಮೂಲಕ ಆಳಿದ ಎನ್.ಟಿ.ಆರ್ ಸಾಯುವಾಗ ಅವರ ಕುಟುಂಬದವರೇ ಬೌದ್ಧಿಕವಾಗಿ ಜೊತೆಯಲ್ಲಿ ಇರಲಿಲ್ಲ.
ದೇಶ ಕಂಡ ಅತಿ ಜನಪ್ರೀಯ ನಾಯಕ ನಟ, ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ (ಎಂ.ಜಿ.ಆರ್) ಸಾಯುವಾಗ ದುಖಃ ಪಡಬೇಕಿದ್ದ ಅವರ ಹೆಂಡತಿ ಜಾನಕಿ ಹಾಗೂ ಆಪ್ತೆ ಜಯಲಲಿತಾ ಉತ್ತರಾಧಿಕಾರತ್ವಕ್ಕಾಗಿ ಜಗಳವಾಡುತ್ತಿದ್ದರು ! ತಮಿಳು ನಾಡಿನಲ್ಲಿ ಸಾಕ್ಷಾತ್ ದೇವರಂತೆ ಪೂಜಿಸಲ್ಪಟ್ಟ ಭಾರತ ರತ್ನ ಎಂ.ಜಿ.ಆರ್. ಸಾಯುವಾಗ ಮನೆಯಲ್ಲಿ ಜಗಳವಾಗುತ್ತಿತ್ತು!

ಕರುಣಾನಿಧಿ ನಡೆದಾಡಲು ಸಾಧ್ಯವಾಗದಿದದ್ದರೂ 5 ವರ್ಷ ಮುಖ್ಯಮಂತ್ರಿಯಾಗಿ ವೀಲ್ಚೇರ್ ನಲ್ಲಿದ್ದು ರಾಜ್ಯಭಾರ ಮಾಡಿದರು. ಕಾರಣ ಅವರು ಹುದ್ದೆ ಬಿಟ್ಟರೆ ಎನ್.ಟಿ.ಆರ್.ರ ಪರಿಸ್ಥಿತಿಯೇ ಅವರಿಗೂ ಬರುತ್ತಿತ್ತು ! ಅವರ ಮಕ್ಕಳಾದ ಅಳಗಿರಿ ಹಾಗೂ ಸ್ಟಾಲಿನ್ ನಡುವೆ ಉತ್ತರಾಧಿಕಾರತ್ವಕ್ಕಾಗಿ ಜಗಳ ಪ್ರಾರಂಭವಾಗಿದೆ. ಇಂದು ಎಮ್.ಜಿ.ಆರ್. ಮತ್ತು ಎನ್.ಟಿ.ಆರ್ ಪಕ್ಷಕ್ಕೆ ವೊಟ್ ಪಡೆಯುವ ಹೆಸರುಗಳು ಮಾತ್ರ. ಆದರೆ ಅವರು 2ರೂಪಯಿಗೆ ಅಕ್ಕಿ ನೀಡಿದರು ಬಡ ನಿರುದ್ಯೋಗಿಗಳಿಗೆ ಉಚಿತವಾಗಿ ರಿಕ್ಷ ನೀಡಿದ್ದಾರೆ. ಆ ಕಾರಣಕ್ಕಾಗಿ ಅವರನ್ನು ಲಕ್ಷಾಂತರ ಜನ ಹೃದಯದಲ್ಲೆ ಸ್ಥಾನ ನೀಡಿದ್ದಾರೆ. ರಾಜಕಾರಣಿಯೊಬ್ಬ ಎಷ್ಟು ಅಧಿಕಾರದಲ್ಲಿದ್ದರೂ ಕೊನೆಗೆ ಆತನ ಹೆಸರು ಉಳಿಯುವುದು ಮಾಡಿದ ಒಳ್ಳೆಯ ಕೆಲಸಗಳಿಂದ ಮಾತ್ರ.
ಇಂತಹ ನೂರಾರು ಉದಾಹರಣೆಗಳು ಕಣ್ಣೆದುರೆ ಇದ್ದರು ನಮ್ಮ ರಾಜಕಾರಣಿಗಳು, ಅವರ ಮಕ್ಕಳು ಹಣ ದೊಚುತ್ತಾರೆ, ಪಕ್ಷಾಂತರ ಮಾಡುತ್ತಾರೆ, ಉತ್ತರಾಧಿಕಾರತ್ವಕ್ಕಾಗಿ ಜಗಳವಾಡುತ್ತಾರೆ. ನನ್ನ ಕೈಗಳನ್ನು ಮೇಲೆ ಮಾಡಿ ಹೂಳಿರಿ, ಜಗತ್ತು ಗೆದ್ದ ಅಲೆಕ್ಸಾಂಡರ್ ಬರಿಗೈಯಲ್ಲಿ ಸತ್ತ ಎಂದು ಜನರಿಗೂ ಗೊತ್ತಾಗಲಿ ಎಂದಿದ್ದ ಅಲೆಕ್ಸಾಂಡರ್ ಎನ್.ಟಿ.ಆರ್., ಎಂ.ಜಿ.ಆರ್. ಇವರೆಲ್ಲ ಬರಿಗೈಯಲ್ಲಿ ಸತ್ತವರೇ. ಸುಡಲು ಕರೆದುಕೊಂಡು ಹೋದ ಕೈಯಲ್ಲೂ ಆಪ್ತ ಸ್ಪರ್ಶ ಇರಲಿಲ್ಲ. ಬದುಕಿನುದ್ದಕ್ಕೂ ರಾಜರಂತೆ ಬದುಕಿ ಕೊನೆಗಾಲದಲ್ಲಿ ಮನೆಯವರಿಗೆ ಬೇಡವಾದದ್ದನ್ನು ನೋಡಿದರೆ ಅಧಿಕಾರದ ಆಡಂಬರ ಲೊಳಲೊಟ್ಟೆ ಅನಿಸುತ್ತದೆ.

0 comments:

Post a Comment