ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ರಾಷ್ಟ್ರ - ಅಂತಾರಾಷ್ಟ್ರ ಸುದ್ದಿ: ಸಿಂಗಾಪುರ್ ವರದಿ - ಸುರೇಶ್ ಭಟ್
ಕನ್ನಡ ಸಂಘ ಸಿಂಗಪುರ ಹಾಗೂ ವುಡ್‌ಲ್ಯಾಂಡ್ಸ್ ಸಿ.ಸಿ. ಸಿಂಗಪುರ ಇದರ ಜಂಟಿ ಆಯೋಜನೆಯಲ್ಲಿ ನಡೆಸಲಾದ "ರಾಗಾಂಜಲಿ" ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಕ್ಕೆ ಕನ್ನಡ ಹಾಗೂ ಕನ್ನಡೇತರ ಸಭಿಕರು ಬಹುಸಂಖ್ಯೆಯಲ್ಲಿ ಆಗಮಿಸಿ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ ಹಾಗೂ ಭರತನಾಟ್ಯಗಳ ರಸದೌತಣ ಸವಿದರು. ಕಾರ್ಯಕ್ರಮ ನಡೆಸಿಕೊಟ್ಟ ಬಹುತೇಕ ಕಲಾವಿದರು ಸಿಂಗನ್ನಡಿಗರೇ ಆಗಿದ್ದು ಈ ಕಾರ್ಯಕ್ರಮದ ವಿಶೇಷ.

ಕನ್ನಡ ಸಂಘದ ಅಧ್ಯಕ್ಷರಾದ ಡಾ. ವಿಜಯಕುಮಾರ್ ಅವರ ಸ್ವಾಗತದಿಂದ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಕಲಾವಿದರಾದ ಶೃತಿ ಆನಂದ್, ಶೋಭಾ ರಘು, ಸಹನಾ ರಾಮಚಂದ್ರ, ಭಾಗ್ಯ ಮೂರ್ತಿ, ಅಶ್ವಿನಿ ಸತೀಶ್ ಅವರು ಕರ್ನಾಟಕ ಶಾಸ್ತ್ರೀಯ ಶೈಲಿಯಲ್ಲಿ ಕನ್ನಡ, ತಮಿಳು, ಮಲಯಾಳಂ, ತೆಲುಗು ಹಾಗೂ ಸಂಸ್ಕೃತದ ಕೃತಿಗಳನ್ನು ಹಾಡಿದರೆ ಪ್ರತಿಮಾ ಬೆಳ್ಳಾವೆ ಅವರು ಹಿಂದುಸ್ತಾನಿ ಶೈಲಿಯಲ್ಲಿ ಬಂದಿಶ್ ಮತ್ತು ತರಾನಾ ಹಾಡಿದರು.

ನಾಟ್ಯವಿದುಷಿ ಸಿರಿರಾಮ ಹಾಗೂ ಶ್ರೀಲಕ್ಷ್ಮಿ ಅವರ ಭರತನಾಟ್ಯ ಸಭಿಕರನ್ನು ರಂಜಿಸಿತು. ಉದಯೋನ್ಮುಖ ಸಿಂಗನ್ನಡಿಗ ಪ್ರತಿಭೆಗಳಾದ ಪ್ರಜ್ವಲ್ ಶ್ರೀಕಾಂತ್‌ನ ಕರ್ನಾಟಕ ಶಾಸ್ತ್ರೀಯ ಕೊಳಲು ವಾದನ ಹಾಗೂ ಮೇಘನಾ ಹೆಬ್ಬಾರಳ ಭರತನಾಟ್ಯ ಮುಂದಿನ ಪೀಳಿಗೆಯ ಪ್ರತಿಭೆಯ ಕುರುಹು ಎಂಬಂತಿತ್ತು. ಆದಿತ್ಯ (ವಯೊಲಿನ್), ಅಶೋಕ್ ಹೆಬ್ಬಾರ್ (ತಬಲ), ವಿಜಯಾ ಹಲಗೇರಿ (ತಾನ್ಪುರ), ರಾಮಕುಮಾರ್ (ವೀಣೆ) ಮತ್ತು ವೆಂಕಟ್ (ಮೃದಂಗ) ವಿವಿಧ ಕಾರ್ಯಕ್ರಮಗಳಿಗೆ ಹಿತವಾದ ಪಕ್ಕವಾದ್ಯ ನೀಡಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಈ ಕಾರ್ಯಕ್ರಮಕ್ಕೆಂದೇ ರಚಿಸಿ ಪ್ರಸ್ತುತಪಡಿಸಿದ "ರಾಗಾಂಜಲಿ", ಅಂತ್ಯದಲ್ಲಿ ಸಮೂಹಗಾಯನದಲ್ಲಿ ಮೂಡಿ ಬಂದ "ವಿಶ್ವ ಕನ್ನಡ ಗೀತೆ" ಹಾಗೂ ತಿಲ್ಲಾನ ಕೃತಿಗಳು ಜನ-ಮನ ಸೆಳೆದವು. ಈ ಕಾರ್ಯಕ್ರಮಕ್ಕೆ ಭಾರತೀಯ ದೂತಾವಾಸದ ಜಿ. ಟಿ. ವೆಂಕಟೇಶ್ವರ ರಾವ್ ಹಾಗೂ ವುಡ್‌ಲ್ಯಾಂಡ್ಸ್ ಸಿ.ಸಿ.ಯ ಅಜೇಯನ್ ಅವರು ಆಗಮಿಸಿದ್ದರು. ವಿನಿತ ಐತಾಳ್ ಅವರು ವಂದನಾರ್ಪಣೆ ಮಾಡಿದರು. ಸಿಂಗ್-ಹೆಲ್ತ್ ಮತ್ತು ಹೆಚ್.ಡಿ. ಎಫ್. ಸಿ. (ಸಿಂಗಪುರ) ಸಂಸ್ಥೆಗಳು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದವು.

ಸುಮಾರು ೨೫೦ ಅಸನಗಳಿರುವ ವುಡ್ ಲ್ಯಾಂಡ್ಸ್ ಸಿ.ಸಿ. ಸಭಾಂಗಣದಲ್ಲಿ 3 ಘಂಟೆಗಳ ಕಾಲ ನಿರಂತರವಾಗಿ ನಡೆದ ಈ ಕಾರ್ಯಕ್ರಮವನ್ನು ಉಚಿತವಾಗಿ ಆಯೋಜಿಸಲಾಗಿತ್ತು. ನಿರರ್ಗಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸಿಂಗನ್ನಡಿಗರ ಅಮೋಘ ಪ್ರತಿಭೆ, ವಿವಿಧ ರಾಗಗಳ ಬಳಕೆ, ಹಾಡು ಮತ್ತು ನೃತ್ಯಗಳ ಸುಂದರ ಸಮ್ಮಿಶ್ರಣ ಸಭಿಕರನ್ನು ಮೂಕವಿಸ್ಮಿತರನ್ನಾಗಿಸಿದವು. ಈ ಕಾರ್ಯಕ್ರಮವನ್ನು ಆಸ್ವಾದಿಸಿದ ಸಭಿಕರಿಂದ ದೊರೆತ ಅದ್ಭುತ ಪ್ರತಿಕ್ರಿಯೆ, ಇದೊಂದು ಯಶಸ್ವೀ ಕಾರ್ಯಕ್ರಮ ಎಂದು ನಿರೂಪಿಸಿತ್ತು.

0 comments:

Post a Comment