ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:17 PM

ಪ್ರೇಮ ಗೀತೆ

Posted by ekanasu

ಸಾಹಿತ್ಯ : ಜಬೀವುಲ್ಲಾ ಖಾನ್
ಸಾವಿರ ಯೋಚನೆ ಕೋಟಿ ಕನಸು
ಶುಭದಿನ ಬಂತು ಕನಸಾಯಿತು ನನಸು
ಕಪ್ಪು ಬಾಳಲಿ ಬಿಳುಪಾಗಿ ಬಂದೆ
ಈ ಜೀವಕೆ ಅದಮ್ಯಚೇತನ ತಂದೆ


ಹೃದಯದ ಹೂದೋಟದಲಿ ಹೂವಾಗಿ ಅರಳು
ಬಾಳ ಬನದಲಿ ಮಮತೆಯ ಪರಿಮಳ ಚೆಲ್ಲು

ಲೋಕಕೆ ಸೂರ್ಯನಿಂದ ಬದುಕು
ನನ್ನೀ ಬುದುಕಿಗೆ ನೀನೇ ಬುದುಕು

ಆಕಾಶದಲಿ ತಾರೆಗಳು ಮಿನುಗವಂತೆ
ಇಂದು ಮಿನುಗುತಿದೆ ಈ ಮನವು

ಸಾವಿರ ಯೋಚನೆ ಕೋಟಿ ಕನಸು
ಶುಭದಿನ ಬಂತು ಕನಸಾಯಿತು ನನಸು

0 comments:

Post a Comment