ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಧಾರಾವಾಹಿ : ಭಾಗ 25
-ಅನು ಬೆಳ್ಳೆ
ಮನಸ್ವಿತಾ ನಿಖಿಲ್ನ ಕ್ಯಾಬಿನ್ಗೆ ಹೋದಾಗ ಸಂಜೆ ಆರು ಗಂಟೆ ಮೇಲಾಗಿತ್ತು. ನಿಖಿಲ್ ಯಾವುದೊ ಗಹನವಾದ ಆಲೋಚನೆಯಲ್ಲಿ ಮುಳುಗಿದ್ದ. ಅವಳು ತಂದಿಟ್ಟ ಪೇಪರುಗಳನ್ನು ಪರಿಶೀಲಿಸುತ್ತಲೇ, ಮನಸ್ವಿತಾ, ನಿಮ್ಮ ಇನ್ನಷ್ಟು ಸಮಯವನ್ನು ನಿಖಿಲ್ ಎಂಟರ್ಪ್ರೈಸೆಸ್ಗಾಗಿ ಡಿವೋಟ್ ಮಾಡಬೇಕಾಗುತ್ತೆ.ಅವನ ಪೀಠಿಕೆ ಸುಲಭದಲ್ಲಿ ಅರ್ಥವಾಯಿತು. ನಿಖಿಲ್ ಎಂಟರ್ಪ್ರೈಸೆಸ್ ನಿರೀಕ್ಷೆಗೂ ಮೀರಿ ಬೆಳೆಯುತ್ತಿತ್ತು. ಅದರಲ್ಲೂ ಆಹಾರ ಉತ್ಪಾದನೆಯ ಘಟಕ ವಿಶ್ವ ಮಾರುಕಟ್ಟೆಯಲ್ಲಿ ತನ್ನ ಕದಂಬ ಬಾಹುಗಳನ್ನು ಚಾಚಿತ್ತು. ಅದಕ್ಕೆ ಆದಿತ್ಯ ಗ್ರೂಪ್ಸ್ನ ಸಹಕಾರವೂ ಇತ್ತು. ಸಂಸ್ಥೆ ಇಷ್ಟೊಂದು ವೇಗವಾಗಿ ಬೆಳೆಯುತ್ತಿರುವಾಗ ಸಿಬಂದಿಗಳ ಕೊರತೆಯಂತು ಇದ್ದೇ ಇತ್ತು. ಸರಿಯಾದ ಮ್ಯಾನ್ ಪವರ್ನ ಆಯ್ಕೆಗಾಗಿ ಹೆಚ್ಚುವರಿ ಸಮಯ ವ್ಯಯಿಸಲೇ ಬೇಕಿತ್ತು.

ಅದನ್ನು ನೇರವಾಗಿಯಲ್ಲದೆ ಈ ರೀತಿ ಪೀಠಿಕೆಯ ಮೂಲಕ ಮನದಟ್ಟು ಮಾಡುತ್ತಿದ್ದಾನೆ ಅನ್ನುವುದು ಸ್ಪಷ್ಟವಾಯಿತು.
ಖಂಡಿತವಾಗಿಯೂ ಸಾರ್. ನಿಖಿಲ್ ಎಂಟರ್ಪ್ರೈಸಸ್ನ ಅಭಿವೃದ್ಧಿಯಲ್ಲಿ ಖಂಡಿತವಾಗಿಯೂ ನನ್ನನ್ನು ಸಂಪೂರ್ಣ ತೊಡಗಿಸಿಕೊಳ್ಳಬಹುದು ಭರವಸೆಯ ಮಾತುಗಳನ್ನು ಹೇಳಿದ ಬಳಿಕ ಆತ ತಲೆಯೆತ್ತಿದ.ನಿಮ್ಮಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿದ್ದೆ. ಗುಡ್... ನೀವು ಸಂಸ್ಥೆಯ ಬಹು ದೊಡ್ಡ ಆಸ್ತಿಯಾಗಬಲ್ಲಿರಿ ಅನ್ನುವ ನನ್ನ ಭರವಸೆ ಸುಳ್ಳಾಗಲಿಲ್ಲ. ಅದಕ್ಕಾಗಿ ನಾವು ನಿಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು. ನಿಮ್ಮ ವಾಸಸ್ಥಾನಕ್ಕಾಗಿ ಒಂದು ಮನೆಯನ್ನು ಖರೀದಿಸಲಿದೆ ನಿಖಿಲ್ ಎಂಟರ್ಪ್ರೈಸೆಸ್. ಆದಷ್ಟು ಬೇಗನೆ ಶಿಪ್ಟ್ ಮಾಡಿಕೊಂಡರೆ ಅನುಕೂಲವಾಗುತ್ತೆ
ನಿಖಿಲ್ನ ಮಾತುಗಳನ್ನು ಕೇಳಿ ಏನು ಉತ್ತರಿಸಬೇಕೆನ್ನುವುದೇ ತಿಳಿಯಲಿಲ್ಲ. ತನ್ನ ತಂದೆ ತಾಯಿಯರ ಬಗ್ಗೆ ಚೆನ್ನಾಗಿ ತಿಳಿದಿದ್ದ ಅವಳಿಗೆ ಅದೆಲ್ಲಾ ಮರೀಚಿಕೆಯೆನಿಸಿತು.

ಆದರೆ ಇದನ್ನು ಒಪ್ಪಿಕೊಳ್ಳದಿದ್ದರೆ ಮುಂದೆ ಅನುಭವಿಸುವವಳು ತಾನೆ. ರಾತ್ರಿಯ ಹೊತ್ತು, ಹೊತ್ತು ಮೀರಿ ಮನೆಗೆ ಬರುವಾಗ ಅಕ್ಕ ಪಕ್ಕದವರೆಲ್ಲಾ ಆಡಿಕೊಳ್ಳದಿರಲಾರರು. ಆದ್ದರಿಂದ ಮನೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದು ಅಗತ್ಯವೆನಿಸಿತು.
ಕೂಡಲೇ ಅಂದ್ರೆ ಅಸಾಧ್ಯ ಅನ್ಸುತ್ತೆ. ಕನಿಷ್ಟ ಒಂದು ತಿಂಗಳ ಸಮಯಾವಕಾಶವನ್ನಾದರೂ ಕೊಡಿ. ಮನೆಯವರು ಒಪ್ಪಿದ ಮೇಲೆಯೆ ಮುಂದಿನದು ಅಂದಾಗ ಅವಳ ಮಾತಿನಲ್ಲಿ ಅದೇನೊ ನ್ಯೂನತೆ ಕಾಣಿಸಿತು. ತಾನು ಅವಳಿಗಾಗಿ ಕಾಳಜಿಯಿಂದ ಮಾಡುತ್ತಿರುವ ಕೆಲಸ ಅವಳಿಗೆ ಇಷ್ಟವಿಲ್ಲವೆ? ಅನಿಸಿತು ನಿಖಿಲ್ಗೆ.

ಸರಿ, ಆದರೂ ನೀವು ಇದನ್ನು ನಿರಾಕರಿಸಲಾರಿರಿ ಅನ್ನುವುದನು ಮನಸ್ಸು ಹೇಳುತ್ತಿದೆ. ಸಂದರ್ಭವನ್ನು ಅರ್ಥೈಸಿಕೊಳ್ಳಿ. ಯಾಕೆಂದರೆ ಇನ್ನು ಮುಂದಿನ ತಿಂಗಳಿನಲ್ಲಿ ನಮ್ಮ ಡ್ರೈಪ್ರುಟ್ಸ್ ವ್ಯವಹಾರ ಸಂಪೂರ್ಣ ಜಾರಿಗೆ ಬರುತ್ತಿದೆಯಲ್ಲವೆ? ಅದಕ್ಕಾಗಿ ನಾವಿಗ ಇರೊ ಪ್ರೆಮೈಸಿಸ್ ಸಾಕಾಗಲಾರದು. ಇಲ್ಲೇ ಪಕ್ಕದಲ್ಲಿರುವ ಜವಾಹರ್ಲಾಲ್ ನೆಹರು ಪ್ರದೇಶದಲ್ಲಿ ಹತ್ತು ಎಕರೆ ಭೂಮಿಯನ್ನು ಖರೀದಿಸುವ ಸಾಧ್ಯತೆಯಿದೆ. ಅದನ್ನು ಫೈನಲ್ ಮಾಡುವ ಮೊದಲು ನಮ್ಮ ಉದ್ಯೋಗಿಗಳಿಗೆ ಕ್ವಾರ್ಟಸ್ನ ವ್ಯವಸ್ಥೆಯಾಗಬೇಕಿದೆ. ಹಾಗೇ ಖರೀದಿಸಿದ ಮನೆಗಳಲ್ಲಿ ಅನುಕೂಲತೆಯಿರುವ ಒಂದನ್ನು ನಿಮಗಾಗಿ ಮೀಸಲಿರಿಸಿದ್ದೇವೆ ಅವನು ತನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಕೃತಜ್ಞತೆ ಸೂಚಿಸಿದಳು.


ರಾತ್ರಿ ಮನೆಗೆ ಬಂದಾಗ ಈ ವಿಷಯವನ್ನು ಅಪ್ಪಯ್ಯನ ಮುಂದೆ ಪ್ರಸ್ತಾಪಿಸಬೇಕೆಂದುಕೊಂಡಾಗ ಅವಳಿಗೆ `ಇಗೊ' ಅಡ್ಡ ಬಂತು. ತಾನು ಮಾತೆತ್ತಿದರೆ ಜಗಳಕ್ಕೆ ಕಾಯುತ್ತಿದ್ದರೇನೊ ಅನ್ನುವ ಅಳುಕು ಇಲ್ಲದಿರಲಿಲ್ಲ. ಆದರೂ ವಿಷಯವನ್ನು ಮುಂದಿಟ್ಟಳು.
ಈ ಮನೆ, ಜಾಗ ಎಲ್ಲಾ ಬಿಟ್ಟು ಹೋಗೋದು ಅಸಾಧ್ಯ. ಇಲ್ಲಿ ನಮ್ಮ ಬೆವರಿದೆ. ಅದರ ಬೆಲೆ ನಮಗೆ ಗೊತ್ತು ಶ್ರೀನಿವಾಸನವರು ಖಡಾಖಂಡಿತವಾಗಿ ನುಡಿದಾಗ ಅದನ್ನು ನಿರೀಕ್ಷಿಸಿಯೇ ಇದ್ದವಳಿಗೆ ಏನೂ ಅನಿಸಲೇ ಇಲ್ಲ. ತನ್ನ ಅನಾನುಕೂಲತೆಯ ಬಗ್ಗೆ ಹೇಳಬೇಕೆಂದುಕೊಂಡರೂ ಏನೂ ಉಪಯೋಗವಿಲ್ಲವೆನ್ನುವುದು ತಿಳಿದಿತ್ತು. ಆದರೂ ನಿರ್ಧಾರವನ್ನು ತಿಳಿಸದಿರಲಾಗಲಿಲ್ಲ.
ಕಂಪೆನಿಯಿಂದ ಅನುಕೂಲತೆಯಿರುವ ಮನೆ ಕೊಡ್ತಾ ಇದ್ದಾರೆ. ನನಗಂತೂ ಇಷ್ಟು ದೂರ ಪ್ರಯಾಣ ಮಾಡೋದು ಕಷ್ಟ ಅನಿಸ್ತಿದೆ. ಹಾಗಾಗಿ ಮುಂದಿನ ವಾರದಿಂದ ನಾನು ಅಲ್ಲಿಯೇ ಉಳಿಯಬೇಕಾದಿತು ಅಂದಾಗ ಭಾಮಿನಿಯವರಿಗೆ ಆತಂಕವಾಗದಿರಲಿಲ್ಲ. ಗಂಡನಿಗೆ ತಿಳಿ ಹೇಳುವ ಹಾಗೂ ಇರಲಿಲ್ಲ. ಏನಾದಾರಾಗಲಿ ಮಗಳೇ ನಿಧರ್ಾರ ತೆಗೆದುಕೊಳ್ಳಲಿ ಎಂದು ತಮಗಾದ ದುಃಖವನ್ನಾಗಲಿ, ಆತಂಕವಾಗಲಿ ತೋರಿಸಿಕೊಳ್ಳದೆ ಉಳಿದರು.

ಇಲ್ಲೇನು ನಿನಗೆ ಕಡಿಮೆಯಾಗಿರೋದು. ಬಂದು ಹೋಗುವುದಕ್ಕಾಗಿ ಕಂಪನಿಯದ್ದೇ ವಾಹನವಿದೆ. ಸ್ವಲ್ಪ ಬೇಗ ಹೊರಟು ಬಂದ್ರೆ ನಮ್ಮ ಮರ್ಯಾದೆ ಬೀದಿ ಪಾಲಾಗುವುದು ತಪ್ಪಬಹುದು ಒಬ್ಬ ಜವಾಬ್ದಾರಿಯುತ ತಂದೆಯಾಗಿ ಶ್ರೀನಿವಾಸರಾಯರು ಆ ರೀತಿ ಮಾತನಾಡಿದ್ದು ಅವಳಿಗೆ ರುಚಿಸಲಿಲ್ಲ.
ಅದಕೆಂತ್ಲೆ... ನಿಮಗೆ ತೊಂದರೆಯಾಗಬಾರದು, ನಿಮ್ಮ ಮರ್ಯಾದೆ ಬೀದಿ ಪಾಲಾಗಬಾರದೂಂತ ನಾನು ಈ ನಿಧರ್ಾರ ತೆಗೆದುಕೊಂಡಿರುವುದು. ದಯವಿಟ್ಟು ನನ್ನ ವಿಷಯಕ್ಕೆ ಅಡ್ಡ ಬರ್ಬೇಡಿ. ನನಗೆ ಬದುಕುವ ದಾರಿ ಗೊತ್ತಿದೆ ಅಗತ್ಯಕ್ಕಿಂತ ಹೆಚ್ಚಾಗಿ ಮಾತನಾಡಿದೆನೇನೊ ಅನಿಸಿತು. ಅವಳಿಗೆ ಶ್ರೀನಿವಾಸನವರು ಏನೊ ಗೊಣಗಿಕೊಂಡಿದ್ದು ಕೇಳಿಸಿತು. ಅವಳು ಅಲ್ಲಿ ನಿಲ್ಲಲಾರದೆ ಕೋಣೆ ಸೇರಿಕೊಂಡಳು.ತನ್ನ ಬದುಕು ಈ ರೀತಿಯಾಗಿ ಅರ್ಥ ಕಳೆದುಕೊಳ್ಳುತ್ತಿದೆಯೆನ್ನುವ ನೋವು ಅವಳಲ್ಲಿದ್ದರೂ ತನ್ನ ಗುರಿ ಸಾಧಿಸುವುದಕ್ಕಾದರೂ ಪರಿಸ್ಥಿತಿಯನ್ನು ಎದುರಿಸಲೇಬೇಕೆನ್ನುವ ಛಲವಿತ್ತು. ತನ್ನ ಕನಸುಗಳನ್ನು ಬುಡದಲ್ಲಿಯೇ ಚಿವುಟಿ ಹೊಸಕಿ ಹಾಕಿದವರ ಮೇಲೆ ಮಮಕಾರ ಬೆಳೆಯಲು ಆಸ್ಪದವೇ ಇರಲಿಲ್ಲ. ಪ್ರತಿಯೊಂದು ವಿಷಯಕ್ಕೂ ವ್ಯತಿರಿಕ್ತವಾದ ಪ್ರತಿಕ್ರಿಯೆ. ಸಾಧನೆಯ ಹಾದಿ ತನ್ನನ್ನು ಸೆಳೆದಿವೆ. ಯಾಕೆ ತನ್ನನ್ನು ಅವರುಗಳು ಅರ್ಥ ಮಾಡಿಕೊಂಡಿಲ್ಲ? ಬದಲಾದ ಕಾಲಕ್ಕೆ ಬದಲಾದ ಪರಿಸ್ಥಿತಿಗೆ ಮನುಷ್ಯ ಕೂಡ ಬದಲಾಗುತ್ತಾನೆ ಅನ್ನುವುದು ಸರ್ವಕಾಲಿಕ ಸತ್ಯ.

0 comments:

Post a Comment