ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ: ಬದಿಯಡ್ಕ ವರದಿ
ಶ್ರೀ ಭಾರತೀ ವಿದ್ಯಾಪೀಠದ ಮಕ್ಕಳ ಕ್ರೀಡೋತ್ಸವವು ಬದಿಯಡ್ಕ ಶ್ರೀ ಭಾರತೀ ನಗರದಲ್ಲಿ ಜರಗಿತು. ಮಂಜೇಶ್ವರ ಎಸ್.ಎ.ಟಿ. ಹೈಸ್ಕೂಲಿನ ಕ್ರೀಡಾ ಅಧ್ಯಾಪಕರಾದ ಶ್ಯಾಮಪ್ರಕಾಶ್ ಅವರು ಧ್ವಜಾರೋಹಣಗೈದು ವಂದನೆಯನ್ನು ಸ್ವೀಕರಿಸಿದರು.

ಅಧ್ಯಾಪಕರಾದ ವೆಂಕಟಕೃಷ್ಣ ಅವರು ಮಾತನಾಡಿ ಮಕ್ಕಳು ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಿ ತಮ್ಮ ತಂಡವನ್ನು ಗೆಲ್ಲಿಸಲು ಪ್ರಯತ್ನ ಪಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ, ಟಿ. ಕೃಷ್ಣಪ್ರಸಾದ ಅವರು ಮಾತನಾಡಿದರು. ಶಾಲಾ ನಾಯಕ ಚಿನ್ಮಯಕೃಷ್ಣ ಮಕ್ಕಳಿಗೆ ನೇತೃತ್ವ ನೀಡಿದರು.


ಮಕ್ಕಳ ತಂಡವು ಶಾಲಾ ಬ್ಯಾಂಡ್ ಬಾರಿಸುವ ಮೂಲಕ ಗಮನಸೆಳೆದರು. ಶಾಲಾ ಅಧ್ಯಾಪಕ ಅಧ್ಯಾಪಿಕೆಯರು, ಹೆತ್ತವರು ಹಾಗೂ ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.0 comments:

Post a Comment