ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ : ಪದ್ಮಾಭಟ್
ಬೆಳದಿಂಗಳ ಚುಕ್ಕಿ
ತಂಗಾಳಿಯ ಹಾಡು
ನಿನ್ನ ಪ್ರೀತಿಯ ನೆನೆಯುತ,
ಕವನ ಬರೆಯುತ್ತಿದ್ದೆ
ಜಗದ ಪರಿವಿಲ್ಲದೇ,

ಆ ಅಕ್ಷರಗಳೂ ನಿನ್ನ ಬಗೆಗೇ
ಜೋಡಿಸುವುದು ಪ್ರೇಮಕಾವ್ಯವಾಗಿ,
ಮುಡಿದ ಹೂವಿನ ಎಸಳು ನಿನ್ನ
ಪರಿಮಳವ ಸೂಸುವುದು,
ನಿನ್ನ ಜೊತೆ ಕಳೆದ ಒಂದು ಕ್ಷಣವೂ
ಮರಳಿ ಮರಳಿ ಬರುವವು
ಒಲುಮೆಯ ಪ್ರಪಂಚಕ್ಕೆ,
ನನ್ನ ಜೀವನದ ಪ್ರತೀ ಕ್ಷಣವೂ
ನಿನ್ನೊಂದಿಗೇ
ಇರಬೇಕೆಂದು ಬಯಸುವುದು
ಈ ತುಂಟ ಮನಸು ಪ್ರತೀ ದಿನ ನಿನ್ನ ಜೊತೆಗಿರಲು
ಕಾಯವುದು ಒಂದಷ್ಟು ವರುಷವ

0 comments:

Post a Comment