ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಭಾರತ ಸರಕಾರವು ತನ್ನ ಪರಮೋಚ್ಚ ಅಧಿಕಾರಿ-ಅಟಾನಿ೯ಜನರಲ್ ಮುಖೇನ ಭಾರತ ಸವೋ೯ಚ್ಚನ್ಯಾಯಾಲಯಕ್ಕೆ ವರದಿಮಾಡಿಕೊಂಡ ಮನವಿ-
ಭಾರತದ ಶೇ೬೮ (೬೮%) ಹಾಲು-ಅಂತರ್ರಾಷ್ಟ್ರೀಯ ಗುಣಮಟ್ಟದಲ್ಲಿ ಇಲ್ಲ ಎಂಬ ಭಯಂಕರ ಸತ್ಯವನ್ನು!
ಇದು ಹೆಚ್ಚಾಗಿ ನಗರಗಳಲ್ಲಿ ಸರಬರಾಜಾಗುವ ಸಾಮಗ್ರಿಗೇ ನೇರವಾಗಿ ಸಂಬಂಧಿಸಿದೆ ಎಂಬ ಇನ್ನೂ ಭಯಂಕರಸತ್ಯವನ್ನು!
ನಾವು ಮಂಗಳೂರು ನಗರ-ಪಟ್ಟಣ ನಿವಾಸಿಗಳು. ಇದನ್ನು ಏಕೆ ಬರೆಯುತ್ತಿದ್ದೇವೆ ಎಂದರೆ ನಿಮ್ಮ ತುತು೯ಗಮನವನ್ನು ಈ ಬಗೆಗೆ ಸೆಳೆಯಲುಅಷ್ಟೇ!


ಈಗ ಇನ್ನೊಂದು ಮುಖವನ್ನು ನೋಡೋಣ!


ಈಗ್ಯೆ ಕೆಲಸಮಯದ ಹಿಂದೆ-ಹಾಲಿನಲ್ಲಿ ವಿಷವಿದೆ ಎಂಬ ಪುಕಾರು ಎದ್ದದೇಸರಿ- ಮಂಗಳೂರು ದೈರಿ, ಮಂಗಳೂರು ಜಿಲ್ಲಾಧಿಕಾರಿ,ಗಣ್ಯರು-ಮಾನ್ಯರು ಎಲ್ಲ ಸೇರಿಸಿಕೊಂದು ದೊಡ್ಡ ವೇದಿಕೆ-ದೊಡ್ಡಧ್ವನಿ-ದೊಡ್ಡಸಮಾರಂಭವನ್ನು ಸಾವ೯ಜನಿಕವಾಗಿ ನಗರದ ಪ್ರತಿಷ್ಠಿತ ಸ್ಥಳದಲ್ಲಿ ಜರುಗಿಸಿ-
ಸಾವ೯ಜನಿಕರ ಸಮಕ್ಷಮದಲ್ಲಿ-ಹಾಲನ್ನು ಹೀರಿ ವಿಷವಿಲ್ಲ ಕಾರಣ ನಾವು (ಹಾಲು ಕುಡಿದು ಜೀವಂತವಿರುವ ವೇದಿಕೆಯ ಮೇಲಿನ ಜನ! ) ಸಾಯದೇ ಬದುಕಿದ್ದೇ ಇದಕ್ಕೆ ಸಾಕ್ಷಿ ಅಂತ ಗುಡುಗಿದ್ದು ಇನ್ನೂ ಆ ಸದ್ದು ಅಡಗಲಿಲ್ಲ!
ತಗೊಳ್ಳಿ ಈಗ ಎರಗಿದ ಬರಸಿಡಿಲಿಗೆ ಏನುತ್ತರ ನಿಮ್ಮಲ್ಲಿ ಇದೆ?
ಭಾರತ ಸರಕಾರ ಸವೋ೯ಚ್ಚನ್ಯಾಯಲಯದ ಎದುರು ಸುಳ್ಳಾಡಿದೆಯೇ?
ಸತ್ಯವನ್ನಾಡಿದೆಯೇ?
ಅದು ಹೇಗೂ ಇರಲಿ,


ಭಾರತ %೬೮ ಹಾಲಿಗೆ ಮಂಗಳೂರು ದೈರಿಯ ಕಾಣಿಕೆ-ದೇಣಿಗೆ-ಚಂದಾ ಏನು-ಏಷ್ಟು ಮಹಾ ಸ್ವಾಮಿ ಮಂಗಳೂರು ಡೈರಿಯ ಯಜಮಾನರೇ ನೀವೇ ಹೇಳಿರಿ-ಜನತೆ-ಹಾಲು ಖರೀದಿಸುವ-ದುಡ್ಡಿಗೆ ಗುಣವಿಲ್ಲದ ಉತ್ಪನ್ನ ಖರೀದಿಸುವಬಾಬಿಗೆ -ಅಲವತ್ತು ಕೊಳ್ಳುವ-ಮಾನ್ಯಜನಕ್ಕೇ!
ನೀವೇಕೆ ಈಗ ಭಾರಿ ಸಭೆ ಏಪ೯ಡಿಸಿ ನಿಮ್ಮ ಗುಣದ-ಕಣದ-ಕಾಣದ-ಕಾಣಿಸದೇ ಮರೆಮಾಚಿದ ಸ್ವತ್ತು-ಸತ್ತು-ಸತ್ಯವನ್ನು ಬಹಿರಂಗಪಡಿಸಬಾರದು?
ವಿವೇಕವೇ ಮೊದಲಿಗೆ ಬಂದು ತತ್ ಪಶ್ಚಾತ್ ಎರಗುವ ಗುಮ್ಮನ-ಗಮ್ಮತ್ತಿಗೆ ಕಿಮ್ಮತ್ತು ಇಲ್ಲವೆನಿಸಿದರೆ ಜಾಣತನವಲ್ಲವೇ?
ಹಾಗಾದರೆ ಬನ್ನಿರಿ ಜಾಣತನವೇ ಮೆರೆಯಲಿ ಎಲ್ಲ ಅವಗುಣಗಳನ್ನು ನಿವಾರಿಸಲಿ!
ನೀವು ನಿಮ್ಮ ನಡೆ-ನುಡಿ ಬಗೆಗೆ ನಮಗೆ ತಿಳಿಸಿರಿ!

ಜೀವ ಅಮೂಲ್ಯ!
ಮಂಗಳೂರು ದೈರಿ ಹಾಲೂ-ಹಾಳು ಮಾಡುವುದು ಬೇಡ ಅದನ್ನು-ಯಾವ ಕಾರಣಕ್ಕೂ-ಇದೇ ನಮ್ಮು ಪ್ರಾಥ೯ನೆ-ಆಗ್ರಹ ಕೂಡಾ!
ನೀವೇ ಉಮೇದಿನಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ವಿನಂತಿ ಮಾಡಿಕೊಂಡು ಅವರನ್ನು ಸಭೆಗೆ ಕರೆದು ಜನಕ್ಕೆ ಜನ್ಮಕ್ಕೆ-ನೆಮ್ಮದಿ ನೀಡಿರಿ-ನೀಡಿಸಿರಿ!
ನಿಮಗೆ ಮತ್ತೆ ನಮಸ್ಕಾರಗಳು.


ಆರ್.ಎಂ.ಶಮ೯.
ಮಂಗಳೂರು.

0 comments:

Post a Comment