ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ


ನಾವೀಗ ಬಹಳ ಸ್ವಾರಸ್ಯಕರವಾದ ಒಂದು ಗಂಭೀರ ವಿಷಯವನ್ನು ಎತ್ತಿಕೊಂಡು ಬರೆಯುತ್ತೇವೆ!
ಅದೇ ಕಾಳಿದಾಸ-ಮಹಾನ್ ಕವಿ-ಕೋವಿ-ಕಾರಣ ಅವನ ಗುಂಡು-ಗುರಿತಪ್ಪದ-ಆದರೆ ಗುರಿತಪ್ಪುವರ-ಗುಂಡಿಗೆ ಚಂಡಾದುವ-ಕೇಳೀ = ಆಟ!
ಅವನ-ಅಮೋಘ ವಾಣಿ-ಮೇಘದಲ್ಲೂ ಘಟ್ಟಿಯಾಗಿ-ಪಟ್ಟಾಗಿ ಗುರಿತಲುಪಿದ್ದೇ ಅಲ್ಲವೇ-ಮೇಘಸಂದೇಶ!
ಅದು ಹಾಗಿರಲಿ, "ವಾಗಥಾ೯ವಿವ ಸಂಪೃಕ್ತೌ ವಾಗರ್ಥಃಪ್ರತಿಪತ್ತಯೇ /
ಜಗತಃ ಪಿತರೌ ವಂದೇ ಪಾವ೯ತೀ ಪರಮೇಶ್ವರೌ // "


ಇದರ ತಥ್ಯ-ಸತ್ವ-ಸತ್ಯ-
ಮಾತಿಗೆ ಅಥ೯
ಅಥ೯ಕ್ಕೆ ಮಾತು
ಎರಡರ ಸಂಬಂಧವು-ಅನ್ಯೋನ್ಯ-ಅನನ್ಯವೂ!
"ಅವಿನಾ ಸಂಬಂಧ-ಅಧ೯ನಾರೀಶ್ವರ-ಕಾಂತಾಸಮ್ಮಿಶ್ರದೇಹಃ
*******"
ಅಥಾ೯ತ್ ಅಬೇಧ್ಯ!
ಆದರೆ ದಿನನಿತ್ಯ ನಾವು ಕೇಳುವ-ಓದುವ-ನೋಡುವ ಏನೆಲ್ಲಾ ಸಂಗತಿಗಳಿಗೀಗ
ಉತ್ತರವು-ಅಥ೯ಹೀನ-ಅಪಾಥ೯-ಅಸಂಬದ್ಧ ಇನ್ನೂ ಏನೇನೋ ರಕ್ಕೆ-ಪುಕ್ಕ ಎಲ್ಲ ಅವರವರ-ಅದರದರ-ನೇರಕ್ಕೆ-ಉಳಿದವು ಏನಾದರೂ ಇದ್ದರೆ-ಇರಿಸಲ್ಪಟ್ಟರೆ-ನೇರ ನರಕಕ್ಕೇ!
ಬನ್ನಿರಿ ಕೆಲವು ರೋಚಕ-ರಾಚುವ-ಚಚ್ಚುವ-ಕಚ್ಚುವ ಪದಗಳನ್ನು ಅವಲೋಕಿಸೋಣ!
ಅಣಬೆ=ನಾಯಿಕೋಡೆ-ಅಥಾ೯ತ್-ಅವ್ಯವಸ್ಥಿತ!
ಆದರೆ ಅದೀಗ ಉತ್ತಮ ಪೌಷ್ಟಿಕ ಆಹಾರ-ಅದೀಗ ಕೃಷಿಗೆ ಒಪ್ಪಾದ ಒಡವೆ!
ಇಲ್ಲ-ಇಲ್ಲ-ಉದ್ದೇಶವಾಗಿ ಬೆಳೆದು ಮುಖ್ಯ ಬೆಳೆಗೆ ಸಹಾಯ ಹಸ್ತ ಎನಿಸಲು ನಡೆದಿವೆ ದಿವ್ಯ ಮತಿಗಳು!
ಕಳೆ=ಪ್ರಧಾನಬೆಳೆಗೆ ಮಾರಕ!
ಗ್ರಹಣ=ಏನೋ ಅನಾಹುತ!
ಇದರ ವ್ಯಾಕರಣ ಬದ್ಧ ಅಥ೯ವೇ=ಹಿಡಿದುಕೊಳ್ಳುವುದು-
ಪಾಣಿಗ್ರಹಣ, ಅಧಿಕಾರ-ಪದ ಗ್ರಹಣ ಇತ್ಯಾದಿ!
ಸಂಕ್ರಮಣ ಘಟ್ಟ=ದ್ವಂದ್ವ-ತೀಮಾ೯ನದಲ್ಲಿ ವೈಫಲ್ಯ!
ಹಾಗಾದರೆ-ನದಿ,ದೇವಸ್ಥಾನ,ದಾನ,ಧ್ಯಾನ,ಪವಿತ್ರ ಸ್ನಾನ ಇನ್ನೂ ಹತ್ತು ಹಲವು-
ಆಧ್ಯಾತ್ಮಿಕ ಕೈಂಕಯ೯ಗಳು ಈ ಪವ೯ಕಾಲದಲ್ಲಿಯೇ ಏಕೆ ಆಚರಿಸಲ್ಪಡುತ್ತವೆ?
ಧ್ವನಿ=ಏನೆಲ್ಲಾ ಬಾಯಿಯಿಂದ ಹೊರಹೊಮ್ಮಿದರೂ-ಅವಕ್ಕೆಲ್ಲಾ!
ಸಂಗೀತ-ಶಾಸ್ತ್ರೀಯ, ಲಘು ಶಾಸ್ತ್ರೀಯ,ಭಾಷಣ, ಜನಪದ ಧಾಟಿಯ ಹಾಡು, ಸಿನೆಮಾ ಹಾದುಗಳು ಇತ್ಯಾದಿಗಳು ಏನು?
ಸತ್ಯಾತ್ ಸತ್ಯವು-ಮಹಾನ್ ವಯ್ಯಾಕರಣಿ-ಪಾಣಿನಿ-ಆದಿಶೇಷನ ಅವತಾರ-
ಹೇಳುತ್ತಾರೆ-ಮಾತಾಗುವ ಮುತ್ತು-ಪರಮೇಶ್ವರನ ಶಿವ ತಾಂಡವ ನೃತ್ಯದಲ್ಲಿ-ಢಮರುವಿನ-ತುಡಿತ-ಶಬ್ದಕ್ಕೆ ಜನ್ಮತಳೆದ-
ಸ್ವರ-ವ್ಯಂಜನ-ಹ್ರಸ್ವ, ದೀಘ೯,ಅನುಸ್ವಾರ, ವಿಸಗ೯,ಅನುನಾಸಿಕ ಹೀಗೆಲ್ಲಾ ಹೇಳುವಾಗ-
ಮಾತು-ಮಾತೆಯಾಗಿ-ಭಾರತಿ-ಮುತ್ತು,ಮೆತ್ತಲ್ಲ,ಮತ್ತಲ್ಲ,ಮತ್ತಿಲ್ಲ ಎಂತ ಗುಡುಗಿದ್ದಾರೆ!
ಈ ಮಾತಿನ ಅಮ್ಮನನ್ನು-ಶ್ರೀ ಶಂಕರ ಭಗವತ್ಪಾದರು-ದಕ್ಷಿಣಾಮ್ನಾಯ ಎಂತ ಎಳೆದು ತಂದು ಶೃಂಗೇರಿಯಲ್ಲಿ ಸ್ಥಾಪಿಸಿದರು!
ತುಟ್ಟತುದಿಯ ಉತ್ತರದ ಕಾಶ್ಮೀರದ ಶಾರದಾ ಮಾತೆಯನ್ನು-ದಕ್ಷಿಣದ ಅಂಚಿನಶೃಂಗೇರಿಯಲ್ಲೂ ನೆಲೆಯೂರಿಸಿದರು!
ನಮ್ಮ ದೈನಿಕ ಪ್ರಾಥ೯ನೆಯ ಒಂದು ಶ್ಲೋಕದಲ್ಲಿ-
" ಸಾಮೇ ವಾಗ್ದೇವತೇಯಂ ನಿವಸತು ವದನೇ ಸವ೯ದಾ ಸುಪ್ರಸನ್ನಾ "
ಎಂಬ ಅವ್ಯಾಹತವಾದ ಯಾಚನೆಯೂ ಉಂಟು!
ಮಾತು-ಮುತ್ತು-ಮತ್ತು ಮೃತ್ಯು ಎನ್ನುವಲ್ಲಿ- ಆಡಿದರೆ ಮುತ್ತು, ಒಡೆದರೆ ಮುತ್ತು ಎನ್ನುವಲ್ಲಿ ಅಥ೯ವೇ-ಮೇರುಅಥ೯ವೇ?
ನಿಜಕ್ಕೂ ಮಾತಿಗೆ ಅಥ೯ವೇ ಇಲ್ಲದಿದ್ದಲ್ಲಿ, ಖಾಚಿತ್ಯವಿಲ್ಲದಿದ್ದಲ್ಲಿ-ಉಂಟೇನು ಸಂವಹನ?
"ಮೂಕಂ ಕರೋತಿ ವಾಚಾಲಂ "-ಏಕೆ ಭಗವಂತನಿಗೆ ಬೇರೆ ಉದ್ಯೋಗವಿಲ್ಲವೇ-ಅಥ೯ವಿಲ್ಲದ ಮಾತನ್ನು-ಮೂಕನಿಗೆ ತುರುಕಿ-ವಾಚಾಳಿ ಮಾಡುವಬದಲಿಗೆ?
ಪರಾತ್ಪರದ ಮಾತಿಗೇ ಬಂದರೆ-"ಯದ್ಯತ್ ಕರೋಷಿ-ಕುರು ಮದಪ೯ಣಂ "-ಹಾಗಾದರೆ ಮಾತೂ ಅಪ೯ಣೆಗೆ ಏಂದರೆ-
"ಕಾಯೇನ ವಾಚಾ ಮನಸೇಂದ್ರಿಯೈವಾ೯ **********" ಇದು ಏನನ್ನು ಪ್ರಸ್ತುತಪಡಿಸುತ್ತದೆ?
"ಮಧುರಾಧಿ ಪತೇಃ ಅಖಿಲಂ ಮಧುರಂ ಎನ್ನುವಾಗ-ವಚನಂ ಮಧುರಂ ಎಂತಿಲ್ಲವೇನು?
ಪರಮಾತ್ಮನ ಸಂಗತಿಗೆ ಬಂದರೆ-
"ಸತ್ಯಂ ಶಿವಂ ಸುಂದರಂ " -ಎಂಬ ನುಡಿಯುಂಟು!
ಇಲ್ಲಿ ಮಾತು-ಸತ್ಯ, ಶಿವ, ಸುಂದರ ಎಂದರೆ ಪುಕಾರು ಉಂಟೇನು? ಇರಬೇಕಿತ್ತೆ?
ಹಾಗಾದರೆ-ಮಾತು-ಖಂಡಿತವಾಗಿಯೂ-ಮಾತೇ-ಶ್ರೀಮಾತೇ-
ಅಥ೯ಹೀನ-ಅಪಾಥ೯-ಅಸಂಬದ್ಧ ಎನ್ನಲು ಏನುಂಟು-ಎಲ್ಲುಂಟು?
ಜಯದೇವ ಮಹಾಕವಿ ತನ್ನ ಅಷ್ಟಪದಿಯಲ್ಲಿ-
"ರಾಧಾ ಮಧವಯೋಃ ಜಯಂತಿಯಮುನಾ ಕೂಲೇ ರಹಃ ಕೇಳಯಃ " ಎಂತ ಉದ್ಗಾರವೆತ್ತಿದ್ದು-ಸಾಮಯಿಕವೇ-ಸಾವಾ೯ಕಾಲಿಕವೇ-ಕಾಯಕವೇ ?
ಇದೇ ಮಾತು ಅದರ ಬಗೆಗಿನ ನಮ್ಮ ಅನವರತದ-ಅಲವತ್ತು!
ಇಲ್ಲಿ ಯಾವ ಮಸಲತ್ತಿಲ್ಲ!
ಸವಲತ್ತಿಲ್ಲ!
ಇಲ್ಲಿರುವುದೆಲ್ಲಾ ಅಥ೯ಕ್ಕೇ-ರಾಚಿದ-ಕಚ್ಚಿದ-ಚಚ್ಚಿದ-
ಸೊತ್ತುಗಳಿಗೆ ನಾವು ಬೀಸಿದ ಛಾಟಿಯೇಟು ಅಷ್ಟೇ!
"ನಮೋ ನಮಃ ಸವ೯ಜಾಡ್ಯಾಪಹಾ"

- ಆರ್.ಎಂ.ಶಮ೯, ಮಂಗಳೂರು

0 comments:

Post a Comment