ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ : ಜಬೀವುಲ್ಲಾ ಖಾನ್


ಕಾವೇರಿ ತಾಯೇ
ನೀ ಹರಿದು ಬರುವಾಗ
ಕಂಡ ಯುಗಗಳೆಷ್ಟೋ...


ಇಂದೇಕೋ ಬಾಡಿದಂತಿದೆ ನಿನ್ನ ಮುಖ
ನಿನ್ನಲೆಗಳೇನೋ ಪಿಸುಗುಟ್ಟುತ್ತಿವೆ
ಸದಾ ಮಿನುಗುತ್ತಿದ್ದ ನಿನಗೆ
ನೋಯಿಸುತ್ತಿರುವವರಾರು?
ನೀನು ಸ್ವತಂತ್ರಳಲ್ಲ ಎಂಬ ನೋವೇ?
ನಮ್ಮೊಂದಿಗೇನು ಮುಚ್ಚುಮೊರೆ
ನಾವು ನಿನ್ನ ಮಡಿಲಲ್ಲಿಲ್ಲವೇ
ಮಾತಾಡು. ಮೌನ ಮುರಿ
ನಿನ್ನ ಹೃದಯಗರ್ಭದಲಿ
ಅದೇನಡಗಿದೆ ಹೇಳು

ಏನಂತ ಹೇಳಲಿ ಮಕ್ಕಳೇ
ಮರುಗಿದೆನ್ನ ಮನ, ಕೊರಗುತ್ತಿರುವೆ
ರಾಜಕೀಯದ ಬೇಲಿಗಳಲಿ ಸಿಲುಕಿರುವೆ
ಬಹಳ ಬೇಜಾರಾಗಿದೆ, ಬಂಡೆಗಳಿಗೆ ತಲೆ ಚಚ್ಚುತ್ತಿರುವೆ
ಒಂದಿನ ನಾನೇ ಬತ್ತಿಹೋಗುವೆ
ಆಮೇಲೆ ಕುಡಿಯಲಿ ಅವರವರ ರಕ್ತ

ಹಾಗೆನ್ನಬೇಡ
ನಮ್ಮನ್ನಗಲಬೇಡ ತಾಯೇ
ನೀನು ರೈತರ ಉಸಿರು
ಮರೆಯಬೇಡ ತಾಯೇ

0 comments:

Post a Comment