ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ : ಹರೀಶ್ ಕೆ.ಆದೂರು
Nonwovens ಬ್ಯಾಗ್ ಬಳಕೆ - ಇದು ಮಾನವ ಭವಿಷ್ಯಕ್ಕೆ ಕೊಳ್ಳಿ... ಇದು ಆಘಾತಕಾರಿ ಅಂಶವಾದರೂ ಒಪ್ಪಲೇ ಬೇಕಾದಂತಹ ಕಟುಸತ್ಯ. ಪ್ಲಾಸ್ಟಿಕ್ ಬ್ಯಾನ್ - ಪ್ಲಾಸ್ಟಿಕ್ ಬಳಕೆ ನಿಷೇಧದ ಹೆಸರಲ್ಲಿ ಮಾನವನ ಭವಿಷ್ಯಕ್ಕೆ ಕೊಳ್ಳಿ ಇಡುವ ಆಘಾತಕಾರಿ ಕಾರ್ಯಕ್ಕೆ ಇಂದು ಕೆಲವೊಂದು ಪುರಸಭೆಗಳು ಮುಂದಡಿಯಿಟ್ಟಿವೆ. ಅವಿಭಜಿತ ಜಿಲ್ಲೆಯಲ್ಲಿರುವ ಕೆಲವೊಂದು Nonwovens ಉತ್ಪಾದನಾ ಕೇಂದ್ರದಗಳಿಗೆ ಆಧಾರವಾಗುವ ನೆಪದಲ್ಲಿ ಹಲವಾರು ಕಟುಂಬಗಳಿಗೆ ಸಂಕಷ್ಟ ತಂದೊಡ್ಡುವ ಕಾರ್ಯವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ದಿಲ್ಲದೆ ಸಾಗುತ್ತಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರಸ್ಥಾನವಾದ ಮಂಗಳೂರು ಸೇರಿದಂತೆ ಮೂಡಬಿದಿರೆ,ಗುರುಪುರ ಹಾಗೂ ಹಲವು ಕಡೆಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ತಡೆಒಡ್ಡಲಾಗಿದೆ. ಪರಿಣಾಮ ಇತ್ತೀಚೆಗಷ್ಟೇ ಜಿಲ್ಲೆಗೆ ಹೆಚ್ಚು ಪರಿಚಯವಾದ Nonwovens ಬ್ಯಾಗ್ ಗಳಿಗೆ ಭಾರೀ ಬೇಡಿಕೆ. ಯಾವ ಅಂಗಡಿಗೆ ಹೋದರೂ Nonwovens ಬ್ಯಾಗ್ ವಿವಿಧ ಬಣ್ಣಗಳಲ್ಲಿ ರಾರಾಜಿಸುತ್ತಿರುತ್ತವೆ. ಪುಟಾಣಿ ಬ್ಯಾಗ್ ಗಳಿಂದ ತೊಡಗಿ ದೊಡ್ಡ ಆಕಾರದ ಬ್ಯಾಗ್ ತನಕ Nonwovens ಬ್ಯಾಗ್ ಲಭ್ಯವಿದೆ. ಅತ್ಯಂತ ಸುಂದರ ಫಿನಿಶಿಂಗ್, ಆಕರ್ಷಕ ವರ್ಣ ವೈವಿಧ್ಯಗಳಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಈ ಬ್ಯಾಗ್ ತನ್ನೊಡಲ ತುಂಬೆಲ್ಲಾ ವಿಷವನ್ನು ಆವರಿಸಿದೆ ಎಂಬ ಕಠು ಸತ್ಯ ಹಲವರಿಗೆ ಇನ್ನೂ ತಿಳಿದಿಲ್ಲ. ಇದು ಆಘಾತಕಾರಿ.

ಈ Nonwovens ಬ್ಯಾಗ್ ಗಳನ್ನು ಬಟ್ಟೆಯಂತೆ ಒಂದೊಂದೇ ನೂಲನ್ನು ನೇಯ್ದು ತಯಾರಿಸಲಾಗಿಲ್ಲ. ಇದನ್ನು ಪ್ಲಾಸ್ಟಿಕ್ ಅಥವಾ ಪ್ಲಾಸ್ಟಿಕ್ ಫಿಲ್ಮ್ , ಫೈಬರ್ ಗಳನ್ನು ಬಳಸಿ ಈ ಬ್ಯಾಗ್ ತಯಾರಿಸಲಾಗುತ್ತದೆ. ಇದು ಶೀಟ್ ಆಕಾರದಲ್ಲಿ ಲಭ್ಯವಿದ್ದು ನಂತರ ಬೇಕಾದ ಗಾತ್ರಕ್ಕೆ ಇದನ್ನು ಕತ್ತರಿಸಿ ಬ್ಯಾಗ್ ತಯಾರಿ ನಡೆಸಲಾಗುತ್ತದೆ. ಈ Nonwovens polypropylene bagಗಳಲ್ಲಿಯೂ ವಿವಿಧ ಗುಣಮಟ್ಟಗಳ ಬ್ಯಾಗ್ ಗಳನ್ನು ಇಂದು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಈ ಪೈಕಿ ಬಹುತೇಕ ಎಲ್ಲಾ ಬ್ಯಾಗ್ ಗಳಲ್ಲಿ ಸೀಸ (lead) ಅಂಶ ಹೇರಳವಾಗಿದೆ. ಇದರಿಂದಾಗಿ ಈ ಬ್ಯಾಗ್ ಗಳು ಅಸುರಕ್ಷಿತ ಎಂಬ ಅಂಶ ಇದೀಗ ಬಹಿರಂಗವಾಗುತ್ತಿದೆ.

ಇದು ಭವಿಷ್ಯಕ್ಕೆ ಕೊಳ್ಳಿ


ಈ ನಾನ್ ಆವನ್ ಬ್ಯಾಗ್ ಗಳಲ್ಲಿರುವ ಸೀಸದ ಅಂಶ ಮಾನವನ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ. ಈ ಸೀಸ ಮಾನವ ದೇಹದಲ್ಲಿ ಭದ್ರ ಸ್ಥಾನ ಪಡೆದುಕೊಂಡು ಆರೋಗ್ಯಕ್ಕೆ ಕಂಠಕವಾಗುತ್ತವೆ. ಮುಖ್ಯವಾಗಿ ಮಹಿಳೆಯರ ಹಾಗೂ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಹೇಳುತ್ತಿದೆ. ಈಗಾಗಲೇ ಯು.ಎಸ್ ಮತ್ತು ಮಲೇಷ್ಯಾಗಳಲ್ಲಿ ನಡೆದ ಸಂಶೋಧನೆಗಳು ಇದನ್ನು ದೃಢಪಡಿಸಿವೆ. ಇಷ್ಟೇಅಲ್ಲದೆ ಮಾನವನ ಮೆದುಳು , ಎಳೆಯ ಮಕ್ಕಳ ದೇಹಸ್ಥಿತಿ ಈ ಸೀಸದ ಅಂಶದಿಂದಾಗಿ ಮಂಕು ಪಡೆಯತೊಡಗುತ್ತದೆ.

ಇಷ್ಟೆಲ್ಲಾ ತೊಂದರೆಗಳಿದ್ದರೂ ಇಂದು ಹಲವು ಪಂಚಾಯತ್ ಗಳು ಈ ನಾನ್ ಆವನ್ ಬ್ಯಾಗ್ ಗಳನ್ನು ಪ್ಲಾಸ್ಟಿಕ್ ನಿಷೇಧ ಜನಜಾಗೃತಿ - ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಧ್ಯೇಯ ವಾಕ್ಯಗಳನ್ನು ನೀಡಿ ಪಂಚಾಯತ್ ನ ಹೆಸರಿನೊಂದಿಗೆ ಅಧಿಕೃತವಾಗಿ ಜನತೆಗೆ ನೀಡುವ ಮಹತ್ಕಾರ್ಯಗಳನ್ನು ಮಾಡುತ್ತಿವೆ. ಮನುಷ್ಯರ ಆರೋಗ್ಯಕ್ಕೆ ಮಾರಕವಾದರೂ ಚಿಂತೆಯಿಲ್ಲ ಪರಿಸರ ಸಂರಕ್ಷಣೆಯೇ ನಮ್ಮೆಲ್ಲರ ಹೊಣೆ ಎಂದು ಅಣಕಿಸುತ್ತಿದೆ ಈ Nonwovens ಬ್ಯಾಗ್!!!

0 comments:

Post a Comment