ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ: ಮೂಡಬಿದಿರೆ(moodbidri)ವರದಿ
ಕುವೆಂಪು ವಿ.ವಿ. ವಿವಿಧ ಕೋರ್ಸುಗಳಿಗೆ ಅರ್ಜಿ ಆಹ್ವಾನ
ಕುವೆಂಪು ವಿಶ್ವ ವಿದ್ಯಾಲಯದ ದೂರ ಶಿಕ್ಷಣ ಕೇಂದ್ರದ 2012-13ರ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಕೋರ್ಸುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿರುವ ಕುವೆಂಪು ಅಧ್ಯಯನ ಕೇಂದ್ರವು ಆರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪ್ರವೇಶಾತಿಗೆ ನವೆಂಬರ್ 15 ಕೊನೆಯ ದಿನವಾಗಿದೆ. 16 ನವೆಂಬರ್ ರಿಂದ 30 ನವೆಂಬರ್ವರೆಗೆ ರೂ. 100 ದಂಡಸಹಿತ ಹಾಗೂ 1 ಡಿಸೆಂಬರ್ ರಿಂದ 31 ಡಿಸೆಂಬರ್ವರೆಗೆ ರೂ.300 ದಂಡಸಹಿತ ಪ್ರವೇಶಾತಿ ಪಡೆದುಕೊಳ್ಳಲು ಅವಕಾಶವಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.
ಆಳ್ವಾಸ್ ನಲ್ಲಿರುವ ಈ ಅಧ್ಯಯನ ಕೇಂದ್ರದ ಮೂಲಕ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ವಿಶೇಷವಾದ ಶೈಕ್ಷಣಿಕ ತರಬೇತಿಗಳನ್ನು ಆಳ್ವಾಸ್ ಸಂಸ್ಥೆ ಆಯೋಜಿಸುತ್ತಿದೆ.

ವಿದ್ಯಾರ್ಥಿಗಳ ಶೈಕ್ಷಣಕ ಪ್ರಗತಿಗೆ ಪೂರಕವಾದಂತಹ ವಿಶೇಷ ತರಬೇತಿಗಳನ್ನು ಈ ಸಂಸ್ಥೆಯ ಮೂಲಕವೇ ಒದಗಿಸುವ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.ಪದವಿ ತರಗತಿಗಳಾದ ಬಿ.ಎ, ಬಿ.ಕಾಂ, ಬಿ.ಎಸ್.ಸಿ(ಪಿಸಿಎಂ, ಸಿಬಿಝಿಡ್) ಮತ್ತುಬಿ.ಬಿ.ಎಂ, ಸ್ನಾತಕೋತ್ತರ ಪದವಿಗಳಾದ ಎಂ.ಎ (ಕನ್ನಡ, ಇಂಗ್ಲಿಷ್. ಹಿಂದಿ, ಸಂಸ್ಕೃತ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಶಿಕ್ಷಣ), ಎಂ.ಕಾಂ,ಎಂ.ಬಿ.ಎ, ಮತ್ತು ಎಂ.ಎಸ್.ಸಿ(ಬೌತಶಾಸ್ತ್ರ, ರಸಾಯನ ಶಾಸ್ತ್ರ , ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಪರಿಸರ ವಿಜ್ಞಾನ, ಗಣಿತಶಾಸ್ತ್ರ, ಬಯೋಟೆಕ್ನಾಲಜಿ, ಅನ್ವಯಿಕ ರಸಾಯನ ಶಾಸ್ತ್ರ,) ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದ ಬಿಎಲ್ಐಎಸ್ಸಿ, ಎಂಎಲ್ಐಎಸ್ಸಿ, ಹಾಗೂ ಪಿಜಿ ಡಿಪ್ಲೋಮಾ ಮಾನಸ ಸಂಸ್ಥೆಯ ಆಶ್ರಯದಲ್ಲಿ ಲಭ್ಯವಿರುವ ಎಂ.ಎಸ್,ಎಂ.ಎ ಮತ್ತು ಡಿಪ್ಲೊಮಾ ಕೋರ್ಸು ಗಳು ಹಾಗೂ ಪಿ.ಜಿ..ಡಿಪ್ಲೊಮಾ ಕೋರ್ಸು ಗಳಾದ ಕನ್ನಡ ಪತ್ರಿಕೋದ್ಯಮ, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ಸಂಸ್ಥೆ ಹಾಗೂ ಮಾರ್ಕೆಟಿಂಗ್ ಸ್ಪೋಟ್ಸ್ ಮ್ಯಾನೇಜ್ ಮೆಂಟ್, ಒಂದು ವರ್ಷದ ಯುಜಿ ಡಿಪ್ಲೋಮಾ (ಪಂಚಾಯತ್ರಾಜ್) ಗೆ ಈ ಕೇಂದ್ರದ ಮೂಲಕ ಪ್ರವೇಶಾತಿ ಪಡೆದುಕೊಳ್ಳಬಹುದಾಗಿದೆ.ಮಾನಸ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಸ್ನಾತಕೋತರ ಪದವಿಗಳಾದ ಎಂಎ(ಸೈಕ್ಯಾಟ್ರಿಕ್, ಸೋಶಿಯಲ್ ವರ್ಕ್ ಮತ್ತು ಸೈಕಾಲಜಿ ಇನ್ ಚೈಲ್ಡ್ ಮೆಂಟಲ್ ಹೆಲ್ತ್), ಎಂಎಸ್ (ಕೌನ್ಸಲಿಂಗ್ ಆಂಡ್ ಸೈಕೋಥೆರಪಿ, ಸೈಕೋ ಸೋಶಿಯಲ್ ರಿಹ್ಯಾಬಿಲಿಟೇಶನ್, ಮತ್ತು ಸೆಕ್ಸುಯಾಲಿಟಿ ಮತ್ತು ಸೆಕ್ಸುಯಲ್ ಕೌನ್ಸಿಲಿಂಗ್), ಪಿಜಿ ಡಿಪ್ಲೋಮ ಮೆಂಟಲ್ ಹೆಲ್ತ್ ಇನ್ ಫೊರೆನ್ಸಿಕ್ ಸೈಕಾಲಜಿ, ಮೆಂಟಲ್ ಹೆಲ್ತ್ ಇನ್ ಪ್ರೊಫೆಶನಲ್ ಕೌನ್ಸಿಲಿಂಗ್ ಮತ್ತು ಸೈಕೋಥೆರಪಿ, ಮೆಂಟಲ್ ಹೆಲ್ತ್ ಇನ್ ಸೆಕ್ಸುಯಾಲಿಟಿ ಮತ್ತು ಸೆಕ್ಸುಯಲ್ ಕೌನ್ಸಿಲಿಂಗ್ ವಿಷಯದಲ್ಲೂ ಅಧ್ಯಯನ ನಡೆಸಲು ಪ್ರವೇಶಾತಿ ಪಡೆದುಕೊಳ್ಳಬಹುದು.ಅರ್ಜಿಗಳನ್ನು ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಸಮೂಹಸ ಸಂಸ್ಥೆಗಳ ಆಡಳಿತ ಕಚೇರಿಯಲ್ಲಿ ಪಡೆಯಬಹುದು. ಆಸ್ತಕರು ಆಡಳಿತಾಧಿಕಾರಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ,ದೂರವಾಣಿ ಸಂಖ್ಯೆ 08258-261274 ಹಾಗೂ 7353756201, 9945672619 ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.

0 comments:

Post a Comment