ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಮೂಡಬಿದಿರೆಯಲ್ಲಿ ಜರುಗಿದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನದ ಪರಿಕಲ್ಪನೆಯಲ್ಲಿ ಆರಂಭಗೊಂಡ ಆಳ್ವಾಸ್ ನುಡಿಸಿರಿಯು 9 ಸಮ್ಮೇಳನಗಳನ್ನು ಯಶಸ್ವಿಯಾಗಿ ಪೂರೈಸಿದ್ದು 10ನೇ ವರ್ಷದ ನುಡಿಸಿರಿಯನ್ನು ಜಾಗತಿಕ ಮಟ್ಟದಲ್ಲಿ ವಿಶ್ವನುಡಿಸಿರಿಯನ್ನಾಗಿ ಆಚರಿಸಲಿದ್ದು 2013ರ ಇದನ್ನು ಡಿಸೆಂಬರ್ ತಿಂಗಳ 19 ರಿಂದ 22ರ ವರೆಗೆ ನಾಲ್ಕು ದಿನಗಳ ಕಾಲ ಹಮ್ಮಿಕೊಪಳ್ಳಲಾಗುವುದು ಎಂದು ನುಡಿಸಿರಿಯ ಕತೃ, ಆಳ್ವಾಸ್ ಶಿಕ್ಷನ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಘೋಷಿಸಿದರು.


9ನೇ ಆಳ್ವಾಸ್ ನುಡಿಸಿರಿ 2012ರ ಸಮಾರೋಪ ಸಮಾರಂಭದ ಸ್ವಾಗತ ಭಾಷಣದಲ್ಲಿ ಮಾತನಾಡಿದ ಅವರು ಮುಂದಿನ ವರ್ಷ ಆಳ್ವಾಸ್ ನುಡಿಸಿರಿಗೆ ಹತ್ತು ವರ್ಷ ಹಾಗೂ ಆಳ್ವಾಸ್ ವಿರಾಸತ್ ಗೆ 20 ವರ್ಷ ಪೂರ್ತಿಯಾಗಲಿದ್ದು ಇವೆರಡನ್ನು ಜಂಟಿಯಾಗಿ ನಿನ್ನೆ, ಇವತ್ತು, ನಾಳೆ ಎಂಬ ಪರಿಕಲ್ಪನೆಯಲ್ಲಿ ದರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ನಡೆಸಲಾಗುವುದು ನಂತರದ ವರ್ಷಗಳಲ್ಲಿ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾತ್ ಗಳನ್ನು ಅಖಿಲ ಭಾರತ ಮಟ್ಟದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

-ಅಪರ ಉಜಿರೆ

0 comments:

Post a Comment